ಬೀದರ್: ಸಾರಿಗೆ ಮುಷ್ಕರದ ಸಮಯದಲ್ಲಿ ಆಗಿರುವ ಹಲವು ಸಮಸ್ಯೆಗಳ ನಿವಾರಣೆಗೆ ಹಾಗೂ ಸರಕಾರ ಕೊಟ್ಟ ಭರವಸೆಯನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಗೆ ಕೂಟದಿಂದ ಮನವಿ ಸಲ್ಲಿಸಲಾಯಿತು.
ಬೀದರ್ ನಗರಕ್ಕೆ ಸೋಮವಾರ ಆಗಮಿಸಿದ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮುಷ್ಕರದ ಸಮಯದಲ್ಲಿ ಆದ ತೊಂದರೆಗಳನ್ನು ಸರಿಪಡಿಸುವಂತೆ ಹಾಗೂ ಬೀದರ ವಿಭಾಗದ ಕೆಲವು ಸಮಸ್ಯೆಗಳನ್ನೂ ಸಹ ಗಮನಕ್ಕೆ ತಂದು ವೇತನ ಆಯೋಗದ ಮಾದರಿಯಲ್ಲಿ ಸರಿಸಮಾನ ವೇತನ ನೀಡುವಂತೆ ಒತ್ತಾಯಿಸಲಾಯಿತು.
ಈ ವೇಳೆ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಸವರು ಭರವಸೆ ನೀಡಿದರು. ಬಳಿಕ ಮತ್ತೊಮ್ಮೆ ನಮ್ಮನ್ನು ಒಳಗಡೆ ಕರೆದು ಸುದೀರ್ಘವಾಗಿ ಸಮಾಧಾನದಿಂದ ಮಾತನಾಡಿಸಿ ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗೆಹಸುತ್ತೇನೆ ಎಂದರು.
ಮನವಿ ಪತ್ರದಲ್ಲೇನಿದೆ?: ಡಿಸೆಂಬರ್-2020 ರಲ್ಲಿ ಸಾರಿಗೆ ನೌಕರರಿಗೆ ನೀಡಿದ ಭರವಸೆಗಳನ್ನು ಮತ್ತು ಏಪ್ರೀಲ್-2021 ರಲ್ಲಿ ನಡೆದ ಸಾರಿಗೆ ಮುಷ್ಕರದಲ್ಲಿ ಉಂಟಾದ ಹಲವು ಸಮಸ್ಯೆಗಳನ್ನು ಬಗೆಹರಿಸಿ ಕೊಟ್ಟು ಸಾರಿಗೆ ಕಾರ್ಮಿಕರಿಗೆ ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶ ಮಾಡಿಕೊಡಬೇಕು.
ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ಶಿಕ್ಷೆ ದಂಡ ಮತ್ತು ನಿಂಬಂಧನೆಗಳನ್ನು ವಿಧಿಸದ ಈ ಕೂಡಲೆ ಪುನರ್ ನೇಮಕ ಮಾಡಿಕೊಳ್ಳುವುದು.
ಮಾತೃ ಘಟಕಗಳಿಗೆ ವರ್ಗಾವಣೆ ಮಾಡುವುದು ಹಾಗೂ 22 ಮತ್ತು 23 ರ ಅಡಿಯಲ್ಲಿ ನೀಡಲಾದ ಎಲ್ಲ ಆಪಾದನಾ ಪತ್ರಗಳು ಮತ್ತು ಮುಷ್ಕರದ ಸಮಯದಲ್ಲಿ ದಾಖಲಿಸಿದ ಎಲ್ಲ ಪೊಲೀಸ್ ಪ್ರಕರಣಗಳು ಹಿಂಪಡೆದು ಏ.6-2021 ರ ಯಥಾಸ್ಥಿತಿ ಕಾಪಾಡುವುದು.
ಡಿಸೆಂಬರ್-2020 ರ ತಿಂಗಳಿನ ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರಿಗೂ ಸರಕಾರಿ ನೌಕರರಂತೆ ಸರಿಸಮಾನ ವೇತನವನ್ನು ವೇತನ ಆಯೋಗದ ಮಾದರಿಯಲ್ಲಿ ನೀಡುವುದಾಗಿ ನೀಡಿದ ಲಿಖಿತ ಭರವಸೆಯನ್ನು ಈಡೇರಿಸುವುದು.
ಸಾರಿಗೆ ನಿಗಮಗಳಲ್ಲಿ ಕೂಡಲೇ ಕಾರ್ಮಿಕ ಸಂಘಗಳ ಚುನಾವಣೆ ನಡೆಸುವುದು, 5. ಬೀದರ ವಿಭಾಗದ ಔರಾದ ಘಟಕವು ಪನಿಶ್ಮೆಂಟ್ ಘಟಕ ಎಂದು ಬಿಂಬಿಸಿ, ಈ ಘಟಕಕ್ಕೆ ಅಧಿಕಾರಿಗಳಿಂದ ಆಗುತ್ತಿರುವ ಮಲತಾಯಿ ಧೋರಣೆ ನಿವಾರಿಸಿ ಅವಶ್ಯಕ ಆಡಳಿತ ಮತ್ತು ಸಂಚಾರ ಸಿಬ್ಬಂದಿಗಳನ್ನು ಮಂಜೂರಾತಿ ಅನ್ವಯ ಕೂಡಲೇ ನಿಯೋಜಿಸುವುದು. ಇದರಿಂದ ಕಾರ್ಮಿಕರ ಮೇಲೆ ಹೆರುತ್ತೀರುವ ಅನ್ಯಾಯದ ಕೆಲಸದ ಒತ್ತಡ ನಿವಾರಣೆ ಮಾಡುವುದು ಹಾಗೂ ಸಾರ್ವಜನಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿ ಸಂಸ್ಥೆಯ ಘನತೆ ಹೆಚ್ಚಿಸುವುದು.
ಎಲ್ಲ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಈ ಸಮಯದಲ್ಲಿ ಕೂಟದ ಮುಖಂಡರಾದ ಬಸವರಾಜ ಚಾಮರೆಡ್ಡಿ, ಜಗನಾಥ ಶಿವಯೋಗಿ, ಅಶೋಕ ಬುಧನೂರ, ಸಂತೋಷ , ಶಿವಾನಂದ ಚಳಕಾಪುರ, ಸಂಜಯ ಹಿಬಾರೆ ಮುಂತಾದವರು ಇದ್ದರು.