CrimeNEWSನಮ್ಮಜಿಲ್ಲೆ

ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಪರ ಮತ ಪ್ರಚಾರ: ಜೆಡಿಎಸ್‌ ಕಾರ್ಯಕರ್ತನಿಗೆ ಇರಿತ

ವಿಜಯಪಥ ಸಮಗ್ರ ಸುದ್ದಿ

ಕುಣಿಗಲ್‌: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರವಾಗಿ ಮತ ಪ್ರಚಾರ ಮಾಡಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಕಾಂಗ್ರೆಸ್​ ಬೆಂಬಲಿಗ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೇಪಾಳ್ಯದಲ್ಲಿ ಈ ಘಟನೆ ಡೆದಿದ್ದು, ಡಾ. ಮಂಜುನಾಥ್ ಪರವಾಗಿ ಕೆಂಪನಹಳ್ಳಿ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿತ​ ಸದಸ್ಯ ಮಂಜುನಾಥ್ ಪ್ರಚಾರ ಮಾಡಿದ್ದಾರೆ.

ಅದಕ್ಕೆ ಕಾಂಗ್ರೆಸ್​ ಬೆಂಬಲಿತ ವ್ಯಕ್ತಿ ಬೋರೇಗೌಡ ಹಾಗೂ ಬೆಂಬಲಿಗರು ಸೇರಿ ಮಾತನಾಡಬೇಕು ಎಂದು ಮಂಜುನಾಥ್​ ಅವರನ್ನು ಕರೆಯಿಸಿಕೊಂಡು, ಅಂಚೇಪಾಳ್ಯದ ಬಳಿ ಮಂಜುನಾಥ್ ಬರುತ್ತಿದ್ದಂತೆ ಬೋರೇಗೌಡ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಚಾಕು ಇರಿಯುತ್ತಿದ್ದಂತೆ ತಕ್ಷಣ ಜೀವ ಉಳಿಸಿಕೊಳ್ಳಲು ಕೆಳಕ್ಕೆ ಬಗ್ಗಿದ್ದರಿಂದ ಚಾಕು ತಲೆಗೆ ಚುಚ್ಚಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಮಂಜುನಾಥ್‌ನನ್ನು ಕುಣಿಗಲ್​ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಬಂಧ ಕುಣಿಗಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

error: Content is protected !!
LATEST
KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ BMTC: ವೇತನಕ್ಕೆ ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ ನಮ್ಮಲ್ಲಿ ಒಳಜಗಳ ಗಿಳಜಗಳ ಯಾವುದೂ ಇಲ್ಲ : ಸಿಎಂ ಸಿದ್ದರಾಮಯ್ಯ ಲೋಕಸಮರ 2024: 7ನೇ ಹಂತದ ಚುನಾವಣೆ - ವಾರಣಾಸಿಯಿಂದ 3ನೇ ಬಾರಿಗೆ ಪರೀಕ್ಷೆಗಿಳಿದ ಪ್ರಧಾನಿ ಮೋದಿ KSRTC: ಕರ್ತವ್ಯದ ವೇಳೆಯೇ ಬ್ರೈನ್‌ಸ್ಟ್ರೋಕ್‌ - ಸಾರಿಗೆ ನೌಕರನಿಗೆ ಬೇಕಿದೆ ಆರ್ಥಿಕ ನೆರವು ನಾಲ್ಕನೇ ಹಂತದ ಲೋಕಸಭಾ ಚುನಾವಣೆ: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 62.84ರಷ್ಟು ಮತದಾನ