ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳಿಗೆ ಇದೇ ಡಿಸೆಂಬರ್ 20ರಂದು ಬಾಕಿ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಸಲು ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ಇಂದು ಆದೇಶ ಹೊರಡಿಸಿದ್ದಾರೆ.
ತುಟ್ಟಿಭತ್ಯೆ ಹಿಂಬಾಕಿ ಮೊತ್ತವನ್ನು ಪಾವತಿಸುವ ಕುರಿತು ಆದೇಶ ಹೊರಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಒಟ್ಟಾರೆ 12 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಯನ್ನು ಮುಂದಿನ ದಿನಗಳಲ್ಲಿ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಆದೇಶಿಸಿ ಕಾಯ್ದಿರಿಸಲಾಗಿತ್ತು.
ಅದರಂತೆ ಇಂದು ಅಂದರೆ ಡಿ.21ರಂದು ಸಮಸ್ತ ಸಿಬ್ಬಂದಿಗಳ ಹಿತದೃಷ್ಠಿಯಿಂದ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳಿಗೆ ಜುಲೈ-2022 ರಿಂದ ನವೆಂಬರ್-2022 ನೇ ಮಾಹೆಯವರೆಗಿನ 05 ತಿಂಗಳಿನ 3.75% ತುಟ್ಟಿಭತ್ಯೆ ಹಿಂಬಾಕಿ ಮೊತ್ತ ಹಾಗೂ ಜನವರಿ- 2023 ರಿಂದ ಜುಲೈ-2023 ರ ವರೆಗಿನ 07 ತಿಂಗಳು ತುಟ್ಟಿಭತ್ಯೆ ಹಿಂಬಾಕಿಯಲ್ಲಿ ಜನವರಿ-2023 ಹಾಗೂ ಫೆಬ್ರವರಿ- 2023ರ ಎರಡು ತಿಂಗಳಿನ 4% ತುಟ್ಟಿಭತ್ಯೆ ಹಿಂಬಾಕಿ ಮಾತ್ರ (ಒಟ್ಟಾರೆ 07 ತಿಂಗಳಿನ ತುಟ್ಟಿಭತ್ಯೆ ಹಿಂಬಾಕಿ ಮಾತ್ರ) 24.12.2024 ರಂದು ಇ.ಸಿ.ಎಸ್ ಮೂಲಕ ಪಾವತಿ ಮಾಡಲು ಆದೇಶಿಸಿದ್ದಾರೆ.
ಜನವರಿ- 2023 ರಿಂದ ಜುಲೈ-2023 ರ ವರೆಗಿನ 07 ತಿಂಗಳ ಶೇ.4 ತುಟ್ಟಿಭತ್ಯೆ ಹಿಂಬಾಕಿಯಲ್ಲಿ ಜನವರಿ-2023 ಹಾಗೂ ಫೆಬ್ರವರಿ- 2023ರ ಎರಡು ತಿಂಗಳಿನ ಹಿಂಬಾಕಿ ಮಾತ್ರ ಪಾವತಿಸಲು ಆದೇಶ ಹೊರಡಿಸಿದ್ದಾರೆ. ಉಳಿದ 5 ತಿಂಗಳ ಹಿಂಬಾಕಿ ಪಾವತಿ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇನ್ನು ಇದೇ ಡಿಸೆಂಬರ್ 24ರಂದು ಇ.ಸಿ.ಎಸ್ ಮೂಲಕ ಪಾವತಿ ಮಾಡಲು ಆದೇಶಿಸಿದ್ದು, ಈ ಸಂಬಂಧ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು,ಕಾರ್ಯ ವ್ಯವಸ್ಥಾಪಕರು, ನಿಲ್ದಾಣಾಧಿಕಾರಿಗಳು, ಹಿರಿಯ/ ಘಟಕ ವ್ಯವಸ್ಥಾಪಕರು.
ಆಪ್ತ ಕಾರ್ಯದರ್ಶಿ, ನಿರ್ದೇಶಕರು, ಆಪ್ತ ಕಾರ್ಯದರ್ಶಿ, ನಿರ್ದೇಶಕರು(ಭ&ಜಾ), ಎಲ್ಲ ಇಲಾಖಾ ಮುಖ್ಯಸ್ಥರಿಗೆ ಮಾಹಿತಿಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.