- ನೌಕರರು ಆಯ್ಕೆ ಮಾಡಿಕೊಳ್ಳುವ ಹಬ್ಬದ ದಿನದಂದೆ ರಜೆ ಮಂಜೂರು ಮಾಡಲು ಒತ್ತಾಯ
- ನೌಕರರು ಹಾಕಿಕೊಳ್ಳುವ ಹಬ್ಬದ ರಜೆ ಕೊಡುವುದಕ್ಕೆ ಅಧಿಕಾರಿಗಳು ತಕರಾರು ತೆಗೆಯಬಾರದು
- ಕೊರೊನಾ ಬಳಿಕ ಕೇಳಿ ಬರುತ್ತಿದೆ – ನೌಕರರ ಇಷ್ಟದಂತೆ ಹಬ್ಬದ ರಜೆ ಹಾಕಲು ಅಧಿಕಾರಿಗಳು ಬಿಡುತ್ತಿಲ್ಲ ಎಂಬ ಆರೋಪ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರು 2025ನೇ ಸಾಲಿನ ರಾಷ್ಟ್ರೀಯ ಹಾಗೂ ಹಬ್ಬದ ರಜಾ ದಿನಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಆಡಳಿತ ಮಂಡಳಿ ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಗ್ರಾಣ. ಕೇಂದ್ರೀಯ ಕಾರ್ಯಾಗಾರಗಳು, ಘಟಕಗಳು, ನಿಯಂತ್ರಣ ಕೊಠಡಿ, ಟಿ.ಟಿ.ಎಂ.ಸಿ ಹಾಗೂ ಪ್ರಮುಖ ಬಸ್ ನಿಲ್ದಾಣಗಳು ಇತ್ಯಾದಿ ಕಾರ್ಯಸ್ಥಾನಗಳಲ್ಲಿ (ಕೇಂದ್ರ ಕಚೇರಿಯನ್ನು ಹೊರತುಪಡಿಸಿ) ಕರ್ತವ್ಯ ನಿರ್ವಹಿಸುತ್ತಿರುವ ಆಡಳಿತ, ತಾಂತ್ರಿಕ, ಭದ್ರತಾ ಹಾಗೂ ಸಂಚಾರ ಸಿಬ್ಬಂದಿಗಳ 2025ನೇ ಸಾಲಿನಲ್ಲಿ 5 ರಾಷ್ಟ್ರೀಯ ರಜೆಗಳ ಜೊತೆ ತಮ್ಮ ಸ್ವ-ಇಚ್ಛೆಯಂತೆ. ಪಟ್ಟಿಯಲ್ಲಿ ತಿಳಿಸಲಾದ 23 ಹಬ್ಬದ ರಜಾ ದಿನಗಳ ಪೈಕಿ 5 ಹಬ್ಬದ ರಜೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಎಲ್ಲ ನೌಕರರಿಗೂ ಅನ್ವಯವಾಗುವ 5 ರಾಷ್ಟ್ರೀಯ ರಜಾ ದಿನಗಳು:
1) 26.01.2025ರ ಭಾನುವಾರ – ಗಣರಾಜ್ಯೋತ್ಸವ
2) 01.05.2025ರ ಗುರುವಾರ – ಕಾರ್ಮಿಕ ದಿನಾಚರಣೆ
3) 15.08.2025ರ ಶುಕ್ರವಾರ – ಸ್ವಾತಂತ್ರ್ಯ ದಿನಾಚರಣೆ
4) 02.10.2025ರ ಗುರುವಾರ – ಗಾಂಧಿ ಜಯಂತಿ
5) 01.11.2025ರ ಶನಿವಾರ – ಕನ್ನಡ ರಾಜ್ಯೋತ್ಸವ
23 ಹಬ್ಬದ ರಜಾ ದಿನಗಳಲ್ಲಿ ನೌಕರರು 5 ಪಡೆಯಲು ಅವಕಾಶ
1) 01.01.2025ರ ಬುಧವಾರ – ‘ನೂತನ ವರ್ಷಾರಂಭ
2) 14.01.2025ರ ಮಂಗಳವಾರ – ಉತ್ತರಾಯಣ ಪುಣ್ಯ ಕಾಲ/ಮಕರ ಸಂಕ್ರಾಂತಿ
3) 26.02.2025ರ ಬುಧವಾರ – ಮಹಾ ಶಿವರಾತ್ರಿ
4) 13.03.2025ರ ಗುರುವಾರ – ಹೋಳಿಹಬ್ಬ
5) 27.03.2025ರ ಗುರುವಾರ – ಷಬ್- ಎ- ಖಾದರ್
6) 30.03.2025ರ ಭಾನುವಾರ – ಚಂದರಮಾನ ಯುಗಾದಿ
7) 31.03.2025ರ ಸೋಮವಾರ ಖುತುಬ್- ಎ- ರಂಜಾನ್
8) 14.04.2025ರ ಸೋಮವಾರ – ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
9) 18.04.2025ರ ಶುಕ್ರವಾರ – ಗುಡ್ ಪ್ರೈಡೆ
10) 07.06.2025ರ ಶನಿವಾರ – ಬಕ್ರಿದ್
11) 13.06.2025ರ ಶುಕ್ರವಾರ – ಡೋರನಹಳ್ಳಿ ಅಂಥೋಣಿ ಫೀಸ್ಟ್
12) 06.07.2025ರ ಭಾನುವಾರ – ಮೊಹರಂ ಕಡೇ ದಿನ
13) 09.08.2025ರ ಶನಿವಾರ – ಯಜುರ್ ಉಪಕರ್ಮ
14) 27.08.2025ರ ಬುಧವಾರ – ಗಣೇಶ ಚತುರ್ಥಿ
15) 05.09.2025ರ ಶುಕ್ರವಾರ – ಈದ್ -ಮಿಲಾದ್
16) 21.09.2025ರ ಭಾನುವಾರ – ಮಹಾಲಯ ಅಮಾವಸ್ಯೆ
17) 01.10.2025ರ ಬುಧವಾರ – ಮಹಾನವಮಿ/ಆಯುಧಪೂಜೆ
18) 02.10.2025ರ ಗುರುವಾರ – ವಿಜಯದಶಮಿ
19) 04.10.2025ರ ಶನಿವಾರ – ಗ್ಯಾರ್‌ವಿನ್ ಅಪ್ ಮೆಹಬೂಬ್ ಸುಭಾನಿ
20) 20.10.2025ರ ಸೋಮವಾರ – ನರಕ ಚರ್ತುದಶಿ
21) 22.10.2025ರ ಬುಧವಾರ – ಬಲಿಪಾಡ್ಯಮಿ/ದೀಪಾವಳಿ
22) 02.11.2025ರ ಭಾನುವಾರ – ಆಲ್ ಸೋಲ್ಸ್ ಡೇ
23) 25.12.2025ರ ಗುರುವಾರ – ಕ್ರಿಸ್‌ಮಸ್
ಈ 23 ಹಬ್ಬದ ರಜಾ ದಿನಗಳಲ್ಲಿ ತಮಗೆ ಬೇಕಾದ 5 ಹಬ್ಬದ ದಿನಗಳನ್ನು ರಜೆಗಳನ್ನು ಹಾಕಿಕೊಳ್ಳಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಆದರೆ, ಡಿಪೋಗಳು ಮತ್ತು ವಿಭಾಗಗಳಲ್ಲಿ ಈ 23 ಹಬ್ಬದ ರಜಾ ದಿನಗಳನ್ನು ಪ್ರತಿಯೊಬ್ಬರು ಹಾಕಿಕೊಳ್ಳಬೇಕು. ನಾವು ನಿಮಗೆ ರಜೆಗಳನ್ನು ಕೊಡುತ್ತೇವೆ ಎಂದು ವಿಭಾಗೀಯ ಹಾಗೂ ಡಿಪೋ ಮಟ್ಟದ ಅಧಿಕಾರಿಗಳು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೆ ಈ 23 ಹಬ್ಬದ ರಜಾ ದಿನಗಳಲ್ಲಿ ನಮಗಿಷ್ಟ ಬಂದ ರಜೆಗಳನ್ನು ಪಡೆಯುವುದಕ್ಕೆ ಅಧಿಕಾರಿಗಳು ಬಿಡುತ್ತಿಲ್ಲ. ಈ ವ್ಯವಸ್ಥೆಯನ್ನು ಅಧಿಕಾರಿಗಳು ಕೊರೊನಾ ಬಳಿಕ ಮಾಡಿಕೊಂಡಿದ್ದು ಇದರಿಂದ ನಮಗೆ ಬೇಕಾದ ಹಬ್ಬದ ದಿನಗಳನ್ನು ರಜೆ ಪಡೆಯುವುದಕ್ಕೆ ಆಗುತ್ತಿಲ್ಲ ಎಂದು ನೌಕರರು ಹೇಳುತ್ತಿದ್ದಾರೆ.
ನಮಗೆ ಈ 23 ಹಬ್ಬದ ರಜಾ ದಿನಗಳನ್ನು ಹಾಕಿಕೊಳ್ಳುವುದಕ್ಕೆ ಬದಲು ಕೇಂದ್ರ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆಯಂತೆ ನಮಗಿಷ್ಟದ 5 ಹಬ್ಬದ ದಿನಗಳಂದು ರಜೆ ಪಡೆಯುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನೌಕರರು ಒತ್ತಾಯಿಸುತ್ತಿದ್ದಾರೆ.