BMTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ನೌಕರರಿಂದ ದಾಖಲೆ ಸಂಗ್ರಹಿಸಲು ಮೂವರು ಅಧಿಕಾರಿಗಳ ನಿಯೋಜನೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡುವುದಕ್ಕೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ಮೂವರು ಅಧಿಕಾರಿಗಳನ್ನೊಳಗಂಡ ಮೇಲ್ವಿಚಾರಣೆ ತಂಡಗಳನ್ನು ರಚಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಜ.10ರಂದು ಅಧಿಕಾರಿಗಳ ನಿಯೋಜಿಸಿ ಆದೇಶ ಹೊರಡಿಸಿರುವ ಅವರು, ಎಚ್.ಆರ್.ಎಂ.ಎಸ್ (HRMS)ನಲ್ಲಿ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ಸಂಬಂಧಿಸಿದ ವಿವರಗಳನ್ನು ದಾಖಲಿಸುವ ಸಲುವಾಗಿ ನಮೂನೆ-1ಎ ಹಾಗೂ ನಮೂನೆ-1ಬಿ ಯನ್ನು ಪಡೆಯುವ ಸಂಬಂಧ ಮೇಲ್ವಿಚಾರಣೆ ತಂಡಗಳನ್ನು ರಚಿಸಿದ್ದಾರೆ.
ಹೀಗಾಗಿ ಸಂಸ್ಥೆಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ವಸಂತಿ ಅವರನ್ನು ಉತ್ತರ, ದಕ್ಷಿಣ, ಕೇಂದ್ರ ಕಚೇರಿ ವ್ಯಾಪ್ತಿಯ ಅಧಿಕಾರಿಗಳು/ನೌಕರರಿಗೆ ಯೋಜನೆಯ ಕುರಿತು ಸೂಕ್ತ ಮಾಹಿತಿಯನ್ನು ಒದಗಿಸಲು ನಿಯೋಜನೆಗೊಂಡಿದ್ದಾರೆ.
ಅದೇ ರೀತಿ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಮಧುರ ರೋಡ್ರಿಕ್ಸ್ ಅವರನ್ನು ಪಶ್ಚಿಮ, ವಾಯುವ್ಯ, ಕೇ.ಕಾ-1 ರಿಂದ ಕೇ.ಕಾ-04 ವರೆಗೂ ಹಾಗೂ ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಅಪ್ತಾಬ್ ಪಾಷಾ ಅವರನ್ನು ಕೇಂದ್ರಿಯ, ಈಶಾನ್ಯ, & ಪೂರ್ವ ವಲಯಗಳಿಗೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಅಧಿಕಾರಿಗಳು ಈ ಮೊದಲೇ ತಿಳಿಸಿದಂತೆ ಎಚ್.ಆರ್.ಎಂ.ಎಸ್(HRMS) 1.0 ರಲ್ಲಿ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ಸಂಬಂಧಿಸಿದ ವಿವರಗಳನ್ನು ದಾಖಲಿಸುವ ಸಲುವಾಗಿ ನಮೂನೆ-1ಎ ಹಾಗೂ ನಮೂನೆ-ಬಿ ಯನ್ನು ಪಡೆಯುವ ಸಂಬಂಧ ಮೇಲ್ವಿಚಾರಣೆ ತಂಡಗಳಲ್ಲಿ ಇರಲಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅನುಷ್ಠಾನ ಗೊಂಡಿರುವ ಆರೋಗ್ಯ ಯೋಜನೆಯನ್ನು ಸಂಸ್ಥೆಯಲ್ಲಿ ತ್ವರಿತವಾಗಿ ಅನುಷ್ಠಾನಗೊಳಿಸಲು, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಲ್ಲಿ (HRMS) ಮೊದಲನೇ ಹಂತವಾಗಿ ನೌಕರರ ಹಾಗೂ ಅವರ ಅವಲಂಬಿತರ ಮಾಹಿತಿಯನ್ನು ಸಂಗ್ರಹಿಸಲು ನೌಕರರಿಗೆ ಈಗಾಗಲೇ KSRTCಯಲ್ಲಿ ವಿತರಿಸಿರುವ ನಮೂನೆಯಲ್ಲಿ ನಮೂನೆ-1ಎ ಹಾಗೂ ನಮೂನೆ-1ಬಿ ಗಳನ್ನು ಘಟಕ ಮಟ್ಟದಲ್ಲಿ ವಿತರಿಸಿ ನೌಕರರಿಂದ ಮಾಹಿತಿ ಪಡೆಯಲು ಸೂಚಿಸಲಾಗಿದೆ.
ಪ್ರಸ್ತುತ, BMTCಯಲ್ಲಿ ಆರೋಗ್ಯ ಯೋಜನೆಯನ್ನು ಅನುಷ್ಠಾನಗೊಳಿಸುವ ಸಲುವಾಗಿ ಹಾಗೂ ನೌಕರರಿಗೆ ಯೋಜನೆಯ ಕುರಿತು ಸೂಕ್ತ ಮಾಹಿತಿಯನ್ನು ಒದಗಿಸಲು ಹಾಗೂ ಈ ನಮೂನೆಗಳಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಸೂಚಿಸಲು ಹಾಗೂ ನಮೂನೆಗಳನ್ನು ಭರ್ತಿಗೊಳಿಸಲು ಮೇಲ್ವಿಚಾರಣೆ ಮಾಡುವ ಸಂಬಂಧ ಘಟಕಗಳಿಗೆ ಭೇಟಿ ನೀಡಿ ನೌಕರರಿಂದ ನಮೂನೆ-1ಎ ಹಾಗೂ ನಮೂನೆ-1ಬಿ ವಿವರಗಳನ್ನು ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಈ ಮೂವರು ಅಧಿಕಾರಿಗಳನ್ನು ವಲಯವಾರು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.