NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಬೇಕಾ ಬಿಟ್ಟಿಯಾಗಿ ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್‌ ಹರಿದರೆ ನಿರ್ವಾಹಕ – ಇಲ್ಲ ಸ್ಟಜ್‌ನಲ್ಲಿ ಟಿಕೆಟ್‌ ಮೌಲ್ಯದ ಲೆಕ್ಕಕ್ಕಾಗಿ ಹರಿದರಾ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 17ನೇ ಘಟಕದ ನಿರ್ವಾಹಕರೊಬ್ಬರು ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್‌ ಅನ್ನು ಬೇಕಾ ಬಿಟ್ಟಿಯಾಗಿ ಹರಿದಿದ್ದಾರೆ ಎಂಬ ವಿಡಿಯೋವೊಂದು ಸಮಾಜಿಕ ಜಾಲತಾಣದಲ್ಲಿ ತುಂಬ ವೈರಲ್‌ಆಗಿದೆ.

ಮೆಜೆಸ್ಟಿಕ್​ನಿಂದ – ತಾವರಕೆರೆಗೆ ಹೋಗುವ ಬಿಬಿಎಂಟಿಸಿ ಬಸ್​​ನ ನಿರ್ವಾಹಕ ಇದೇ ಅ.15 ರಂದು ಅಂದರೆ ನಿನ್ನೆ ಸುಖಾಸುಮ್ಮನೇ ಫ್ರೀ ಟಿಕೆಟ್ ಹರಿದು ಬಿಸಾಕುತ್ತಿದ್ದರು ಎಂದು ಆರೋಪಿ ಪ್ರಯಾಣಿಕ ಮಹಿಳೆಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಿರ್ವಾಹಕ ಯಾವುದೆ ಉತ್ತರ ನೀಡಿಲ್ಲ.

ಆದರೆ, ಕ್ಷಮಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ನಿರ್ವಾಹಕರು ಏಕೆ ಈ ರೀತಿ ಟಿಕೆಟ್‌ ಹರಿದು ಬಿಸಾಕಿದ್ದಾರೆ ಎಂಬುವುದು ಇನ್ನು ಸ್ಪಷ್ಟವಾಗಿಲ್ಲ. ಇನ್ನು ಈ ಬಗ್ಗೆ ಹೆಚ್ಚಿನ ಇನ್ಸೆಂಟಿವ್‌ ಆಸೆಗೆ ಬಿದ್ದು ನಿರ್ವಾಹಕರು ಹೀಗೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ.

ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿ ಮಾಡಿದ್ದು, ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ ಇದರ ನಡುವೆ ಕಂಡಕ್ಟರ್​​ಗಳು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್​ ಸಂಖ್ಯೆಗಳನ್ನು ನಿಗಮಗಳಿಗೆ ತಪ್ಪಾಗಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಈ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈಗಾಗಲೇ ಶೇ.60ರಷ್ಟು ಪ್ರಯಾಣ ದರ ಮಾತ್ರ ನೀಡಲಾಗುವುದು ಇನ್ನು ಶೇ.40ರಷ್ಟು ಬೋಗಸ್‌ ತೋರಿಸಲಾಗುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂಬ ಬಗ್ಗೆ ವಿಜಯಪಥ ಇತ್ತೀಚೆಗಷ್ಟೇ ವರದಿ ಮಾಡಿತ್ತು.

ಈ ವರದಿಯ ಬೆನ್ನಲ್ಲೇ ಈ ರೀತಿಯ ಸುದ್ದಿ ವಿಡಿಯೋ ಸಹಿತ ಹರಿದಾಡುತ್ತಿರುವುದು ನಿಗಮಕ್ಕೆ ಮತ್ತು ಎಲ್ಲ ಸಿಬ್ಬಂದಿಗಳಿಗೆ ಇರಿಸುಮುರಿಸು ಉಂಟು ಮಾಡುತ್ತಿದೆ. ಈ ಬಗ್ಗೆ ನಿರ್ವಾಹಕರು ಕೂಡ ಎಚ್ಚೆತ್ತುಕೊಳ್ಳುವ ಅವಶ್ಯವಿದೆ. ಇಲ್ಲದಿದ್ದರೆ ಪ್ರಯಾಣಿಕರು ಮಾಡುವ ಆರೋಪಗಳು ಸಾಬೀತಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಇನ್ನು ನಿರ್ವಾಹಕರು ಇನ್ಸೆಂಟಿವ್‌ ಆಸೆಗೆ ಬಿದ್ದು ಈ ರೀತಿ ಬೇಕಾಬಿಟ್ಟಿಯಾಗಿ ಟಿಕೆಟ್‌ ಹರಿದಿದ್ದರೆ ಅವರಿಗೆ ತಕ್ಷ ಶಿಕ್ಷೆಯಾಗಬೇಕು. ಇಲ್ಲ ಸ್ಟೆಜ್‌ ಕೊನೆಯಲ್ಲಿ ಎಷ್ಟು ಟಿಕೆಟ್‌ ವಿತರಣೆ ಮಾಡಲಾಗಿದೆ. ಅದರ ಟಿಕೆಟ್‌ ಮೌಲ್ಯ ಎಷ್ಟು ಎಂಬ ಬಗ್ಗೆ ಸ್ಟೆಜ್‌ನಲ್ಲಿ ಲೆಕ್ಕಹಾಕುವುದಕ್ಕೆ ಈ ರೀತಿ ಚೆಕ್‌ ಮಾಡುವ ಸಲುವಾಗಿ ಆ ಟಿಕೆಟ್‌ ಹರಿದಿರುವುದಾ ಎಂಬ ಬಗ್ಗೆಯೂ ಸ್ಪಷ್ಟನೆ ನೀಡಬೇಕಿದೆ ಈ ನಿರ್ವಾಹಕರು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ