NEWSನಮ್ಮಜಿಲ್ಲೆ

ಹಿಂದುಳಿದವರ ಶಿಕ್ಷಣ ಕ್ರಾಂತ್ರಿಗೆ ಮುನ್ನುಡಿ ಬರೆದವರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಮೊದಲಿಗರು: ಕಾಂತರಾಜು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ಹಿಂದುಳಿದ ವರ್ಗದ ಜನರಿಗೆ ದೇವಾಲಯದ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಖುದ್ದು ಶಿವ ದೇವಾಲಯವನ್ನು ನಿರ್ಮಿಸುವ ಮೂಲಕ ದೇವಾಲಯಗಳನ್ನು ಗ್ರಂಥಾಲಯಗಳನ್ನಾಗಿ ಮಾಡಿ ಶಿಕ್ಷಣ ಕ್ರಾಂತ್ರಿಗೆ ಮುನ್ನುಡಿ ಬರೆದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್.ಕಾಂತರಾಜ್ ಹೇಳಿದ್ದಾರೆ.

ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇರಳದಲ್ಲಿ ಜಾತಿ ಜಾತಿ ಎಂಬುವುದು ತುಂಬಿ ತುಳುಕುತಿದ್ದ ಕಾಲವದು, ಹಿಂದುಳಿದ ವರ್ಗದ ಜನರನ್ನು ಕೀಳು ಜಾತಿಯವರೆಂದು ದೂರವಿಟ್ಟಿದ್ದ ಸಂದರ್ಭದಲ್ಲಿ ನಾರಾಯಣ ಗುರುಗಳು ಮಹಾನ್ ಕ್ರಾಂತಿಕಾರ ಹೆಜ್ಜೆಯನಿಟ್ಟು ಶೋಷಿತರನ್ನು ರಕ್ಷಿಸುವ ಮತ್ತು ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.

ಶಿಕ್ಷಣಕ್ಕಾಗಿ ಸ್ವಾತಂತ್ರರಾಗಿ ಸಂಘಟನೆಗಾಗಿ ಬಲಿಷ್ಟರಾಗಿ ಎಂದು ಹೇಳುವ ಮೂಲಕ ಕೆಲ ಸಮುದಾಯದ ಜನರನ್ನು ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುವಂತೆ ಹುರಿದುಂಬಿಸಿದರು. ಕಲುಷಿತ ಸಮಾಜವನ್ನು ತಿದ್ದುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಕೀರ್ತಿ ನಾರಾಯಣ ಗುರುಗಳಿಗೆ ಸಲ್ಲುತ್ತದೆ. ಅಂದಿನ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿಜೀಯವರು ನಾರಾಯಣ ಗುರುಗಳನ್ನು ಭೇಟಿ ಮಾಡಿ ಅಸ್ಪೃಶ್ಯತೆ ನಿವಾರಣೆಗೆ ಸಲಹೆ ಕೇಳಿದಾಗ ಕೇವಲ ತೋರಿಕೆಗೆ ಸಮಾಜದಲ್ಲಿ ಬೇರು ಬಿಟ್ಟಿರುವ ಅಸ್ಪೃಶ್ಯತೆ ನಿವಾರಣೆ ಅಸಾಧ್ಯ ಅದು ಪ್ರತಿಯೊಬ್ಬರ ಮನದಿಂದ ತೊಳೆದಾಗ ಮಾತ್ರ ಸಾಧ್ಯವಾಗಲಿದೆ ಎಂದು ಹೇಳಿದ್ದರು.

ಅದಕ್ಕೆ ಮೊದಲು ಕೆಳ ವರ್ಗದವರನ್ನು ಶೈಕ್ಷಣಿಕವಾಗಿ ಬೆಳೆಸಬೇಕಿದೆ. ಆಗ ತನ್ನಿಂದ ತಾನೇ ಅಸ್ಪೃಶ್ಯ ಭೇದ ಭಾವ ಮೇಲುಕೀಳೆಂಬುದು ಅಳಿಯಲು ಸುಲಭವೆಂದು ಸಲಹೆ ನೀಡಿದ್ದರು. ಹೀಗೆ ನರಾಯಣ ಗುರು ಕೇರಳವಷ್ಟೆ ಅಲ್ಲದೆ ದೇಶದಾದ್ಯಂತ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಸಮಾಜದಲ್ಲಿನ ಅನಿಷ್ಟ ಪದ್ಧತಿ ಮೂಢ ನಂಬಿಕೆಯಂತಹ ಆಚಾರ ವಿಚಾರಗಳನ್ನು ನೋಡಿ ಜಾಗೃತಿ ಮೂಡಿಸಲು ತೆರಳಿ ಉತ್ಕೃಷ್ಟ ಸಮಾಜದವರಿಂದ ಸಾಕಷ್ಟು ನೋವು ಅನುಭವಿಸಿ ಅವರು ಕಾಡು ಮೇಡು ಅಲೆದು ಅರಣ್ಯದಲ್ಲಿ ತಪಸ್ಸು ಧ್ಯಾನಗೈದು ಸಂತರಾದರು. ಧಾರ್ಮಿಕತೆ ಮೂಲಕ ಸಮಾಜ ಅನಿಷ್ಟತೆಯನ್ನು ಕಿತ್ತೆಸೆಯಲು ಪ್ರಯತ್ನಿಸಿದರು. ಆ ಕಾರಣಕ್ಕೆ ಅವರ 70 ವರ್ಷದ ಸಂದರ್ಭದಲ್ಲಿ ಭಾರತ ಸರ್ಕಾರದಿಂದ ಜಗದ್ಧೋದ್ಧಾರಕ ಎಂಬ ಬಿರುದು ನೀಡಲಾಗಿದೆ ಎಂದು ತಿಳಿಸಿದರು.

ಶಾಸಕ ಕೆ.ಮಹದೇವ್ ಮಾತನಾಡಿ, ನಾರಾಯಣ ಗುರುಗಳು ಕೆಳ ವರ್ಗದ ಜನರಿಗಾಗಿ ವಾಚನಾಲಯ, ದೆವಾಲಯ ಮತ್ತು ಶಾಲೆಗಳನ್ನು ಕಟ್ಟಬೇಕು. ನಾವೆಲ್ಲ ಶಿಕ್ಷಣವಂತರಾಗಬೇಕು ಎಂದು ಕರೆ ನೀಡುತ್ತಿದ್ದರು. ಅಂದಿನ ಅವರ ಪರಿಶ್ರಮದ ಫಲವೇ ಇಂದು ಇಡಿ ಕೇರಳ ಶೈಕ್ಷಣಿಕವಾಗಿ ದೇಶದಲ್ಲಿಯೇ ಮುಂದಿದೆ. ಹೀಗಾಗಿ ನಾರಾಯಣ ಗುರು ಅವರನ್ನು ಕೇರಳದ ಬಸವಣ್ಣ ಎಂದು ಸಂಬೋಧಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ತಹದೀಲ್ದಾರ್ ಚಂದ್ರಮೌಳಿ, ಪುರಸಭಾ ಅಧ್ಯಕ್ಷ ಮಹೇಶ್, ಆರ್ಯ ಈಡಿಗರ ಸಂಘದ ಅಧ್ಯಕ್ಷ ಪಿ.ವೈ.ಮಲ್ಲೇಶ್, ಬಿಇಒ ಬಸವರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಪ್ರಸಾದ್, ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ಅಬಕಾರಿ ಉಪ ನಿರೀಕ್ಷಕ ಧರ್ಮರಾಜು, ತೋಟಗಾರಿಕೆ ಅಧಿಕಾರಿ ಪ್ರಸಾದ್, ಮುಖಂಡರಾದ ತಿಮ್ಮಪ್ಪ, ಕೆಂಪರಾಜು, ನಿಂಗರಾಜು, ನಾಗೇಂದ್ರ, ಆರ್ಯ ಈಡಿಗರ ಸಂಘದ ಮುಖಂಡರು ಹಾಜರಿದ್ದರು.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC