CrimeNEWSನಮ್ಮರಾಜ್ಯ

BMTCಯಲ್ಲಿ ಲಂಚಾವತಾರ: 94 ವಿವಿಧ ಅಧಿಕಾರಿಗಳು, ನೌಕರರ ವಿರುದ್ಧ ಲೋಕಾಯುಕ್ತಕ್ಕೆ ದೂರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭ್ರಷ್ಟಾಚಾರದ ಅಡ್ಡೆಯಾಗೋಗಿದೆ, ಇದರಿಂದ ಬೇಸತ್ತಿರುವ ನೌಕರರು ಇಲ್ಲಿ ನಮಗೆ ನ್ಯಾಯ ಸಿಗೋದಿಲ್ಲ ಎಂದು ಸಂಸ್ಥೆಯ ವಿವಿಧೆಡೆ ಡ್ಯೂಟಿ ಮಾಡುತ್ತಾ ಭ್ರಷ್ಟಾಚಾರವನ್ನೇ ಹೊದ್ದಿಕೊಂಡಿರುವ 94 ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಈ ಭ್ರಷ್ಟರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಮೂಲಕ ನಮಗೆ ನ್ಯಾಯಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಲೋಕಾಯುಕ್ತಕ್ಕೆ ದೂರು ನೀಡಿರುವ ನೌಕರರು ವಿವಿಧ ಡಿಪೋಗಳಲ್ಲಿ ಕರ್ತವ್ಯ ನಿರತ 94 ಅಧಿಕಾರಿಗಳ ವಿರುದ್ಧ ಹೆಸರು ಮತ್ತು ಅವರ ಹುದ್ದೆ ಸಹಿತ ದೂರು ನೀಡಿದ್ದಾರೆ.

ಆ ಎಲ್ಲ ಅಧಿಕಾರಿಗಳು ಮತ್ತು ಇತರ ನೌಕರರು ಯಾರೆಲ್ಲ ಲೋಕಾಯುಕ್ತರಿಗೆ ನೀಡಿರುವ ದೂರು ಪಟ್ಟಿಯಲ್ಲಿದ್ದಾರೆ ಎಂಬುದರ ಪಟ್ಟಿ ಈ ಕೆಳಗಿನಂತಿದೆ.

1) ಉತ್ತರ ವಿಭಾಗ, ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮತ್ತು ವಾಹನ ಚಾಲಕರು. 2) ಡಿಟಿಒ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಮೆಜೆಸ್ಟಿಕ್ ಬಸ್‌ ನಿಲ್ದಾಣ. 3) ದಕ್ಷಿಣ ವಿಭಾಗ, ವೀಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್. 4) ಘಟಕ-4ರ ಅಟೆಂಡೆನ್ಸ್ ಕ್ಲರ್ಕ್‌ಗಳಾದ ಸೋಮನಕಟ್ಟಿ ಮತ್ತು ಲೋಹಿತ್. 5) ಡಿಎಸ್‌ಎಸ್ ವಿಭಾಗೀಯ ಭದ್ರತಾ ಅಧೀಕ್ಷಕರು ಕೇಂದ್ರ ಕಚೇರಿ, ಶ್ರವಣ ಕುಮಾರ್

6) ಪಶ್ಚಿಮ ವಿಭಾಗ, ಡಿಎಸ್‌ಐ ಮುನಿಕೃಷ್ಣ ಪ್ರತಿ ಘಟಕದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಪಾಲುದಾರರು, ಎಲ್ಲ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಡುತ್ತೇನೆಂದು 10 ರಿಂದ 15 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಕೆಲಸದ ಸಮಯದಲ್ಲಿಯೇ ಮಧ್ಯಪಾನ ಮಾಡಿಕೊಂಡು ಇರುವ ರೂಡಿ ಮತ್ತು ತುಂಬಾ ವರ್ಷಗಳಿಂದ ಒಂದೇ ಕೆಲಸವನ್ನು ಮಾಡಿಕೊಂಡು ಮಂಥ್ಲಿ ಕಲೆಕ್ಷನ್ ಕೆಲಸವನ್ನು ಮಾಡಿಕೊಂಡು ಅಧಿಕಾರಿಗಳಿಗೆ ತಲುಪಿಸುವ ಕಾರ್ಯ, ಪ್ರತಿ ಘಟಕದ ವಾಷಿಂಗ್ ಅವರಿಂದ ಮಂಥ್ಲಿ ವಸೂಲಿ ಮಾಡುವ ಕಾರ್ಯ.

7) ಡಿಪೋ-8, ಹಿರಿಯ ಘಟಕ ವ್ಯವಸ್ಥಾಪಕರು, ಗೋಪಾಲ ಕೃಷ್ಣ, ಮೊಹಮ್ಮದ್ ರಫೀ ಸಿಬ್ಬಂದಿ ಮೇಲ್ವಿಚಾರಕ, ಕೆ. ಶರವಣ ಅಂಕಿ ಅಂಶ ಸಹಾಯಕ, ಕೆ.ಎಸ್.ಚಂದನ್, ಕಿರಿಯ ಸಹಾಯಕ ಮತ್ತು ಜಯರಾಂ ಚಾಲಕ ಇವರನ್ನು ಹಣ ವಸೂಲಿ ಮಾಡಿಕೊಡಲು ನೇಮಿಸಿರುವುದು.

8) ಡಿಪೋ–45, ಗಂಗಮ್ಮ ಎ.ಟಿ.ಎಸ್., ಮುತ್ತಮ್ಮ ಮಾಳಗಿ ಟಿ.ಎ. 9) ಘಟಕ-40, ಶ್ರೀನಿವಾಸ್ ಮೂರ್ತಿ (ಪ್ರಸ್ತುತ ಘಟಕ-26) ಘಟಕ ವ್ಯವಸ್ಥಾಪಕರು, ಕೋಮಲ್ ಟಿ.ಐ. 10) ಘಟಕ-43, ಮಂಜಮ್ಮ, ಡಿಪೋ ಮ್ಯಾನೇಜರ್, ಶೈಲಮ್ಮ ಎ.ಟಿ.ಐ., ನಿಧಿ ಜ್ಯೂನಿಯರ್ ಅಸಿಸ್ಟೆಂಟ್, ಆಂಜಿ ಚಾಲಕ ಕಂ ನಿರ್ವಾಹಕ, ನವೀನ್ ನಿರ್ವಾಹಕ, ಶಟ್ಟರ್ ಚಾಲಕ ಕಂ ನಿರ್ವಾಹಕ.

11) ಘಟಕ-26, ರೆಡ್ಡಿ ಎ.ಟಿ.ಐ., ಹಿರೇಮಟ್ ಚಾಲಕರ ಬುಕ್ಕಿಂಗ್. 12) ಪಶ್ಚಿಮ ವಿಭಾಗ ಡಿಪೋ ಮ್ಯಾನೇಜರ್ ಕೃಷ್ಣ, ಡಿಪೋ-12 ಚಂದ್ರಕಲಾ ಎ.ಟಿ.ಐ., ಕುಮಾರ್ ಪಾಟೀಲ್‌’ ಪ್ರಸ್ತುತ ಲೈನ್ ಚೆಕ್ಕಿಂಗ್‌ನಲ್ಲಿ ಕರ್ತವ್ಯ ನಿರ್ವಹಣೆ. 13) ಡಿಪೋ-16 ಉಮೇಶ್ ಅಟೆಂಡೆನ್ಸ್ ಕ್ಲರ್ಕ್ ಮತ್ತು ಸೋಮಣ್ಣ ಟಿ.ಐ.

14) ಡಿಪೋ-21, ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳ ಡಿಪೋ-33, ಅಕೌಂಟ್ ಸೂಪರ್‌ವೈಸರ್‌ ಮುನಿರಾಜು ಮತ್ತು ಅದೇ ಡಿಪೋನ ದಾಬೂಜಿ ಎ.ಟಿ.ಐ. ಮತ್ತು ಅದೇ ಘಟಕದ ಚಾಲಕರಾದ ಗಂಗರಾಜು ಮತ್ತು ಶಿವರಾಜು ಚಾಲಕ ಕಂ ನಿರ್ವಾಹಕ ಚಂದ್ರಶೇಖರ್, ಡಿ.ಸಿ. ವಿಜಯ್‌ ಕುಮಾರ್ ಮತ್ತು ಅರುಣ್ ಕುಮಾರ್‌ ಇದೇ ಘಟಕದ ಹೊಳೆ ಬಸಪ್ಪ ಅವರ ಸಾವಿಗೆ ಇವರುಗಳ ಹಣದ ದಾಹ ಪ್ರಮುಖ ಕಾರಣ.

15) ಡಿಪೋ-4, ಸೋಮನಕಟ್ಟಿ, ಅಟೆಂಡನ್ಸ್ ಕ್ಲರ್ಕ್, ಲೋಹಿತ್ ಅಟೆಂಡನ್ಸ್ ಕ್ಲರ್ಕ್, ರಮೇಶ್, 16) ಡಿಪೋ-20, ಮಂಜುನಾಥ್ ಎ.ಟಿ.ಎಸ್. ಪ್ರಸ್ತುತ ಕೇಂದ್ರ ಕಚೇರಿ, ಅಪಘಾತ ವಲಯದಲ್ಲಿ ಕರ್ತವ್ಯ, ಮಂಜು ಅಟೆಂಡೆನ್ಸ್ ಕ್ಲರ್ಕ್, ಪವನ್ ಅಟೆಂಡೆನ್ಸ್ ಕ್ಲರ್ಕ್, ರೂಪಾ ಟಿ.ಐ. ಮಹದೇವ ಹೊನ್ನಾಳಿ ಟಿ.ಐ. ಮತ್ತು 17) ಡಿಪೋ-15, ಎ.ಟಿ.ಎಸ್. ವೆಂಕಟೇಶಪ್ಪ, ರಾಜ್‌ಕುಮಾರ್ ಡೀಸೆಲ್ ಬಂಕ್ ಹುದ್ದೆ.

ಈ ಮೇಲಿನ ಎಲ್ಲರೂ ಒಂದಲ್ಲ ಒಂದು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ನೌಕರರು ದಿನನಿತ್ಯ ರೂಟ್ ಕಲೆಕ್ಷನ್, ರಜೆ, ಇತ್ಯಾದಿ ಹಾಗೂ ಸಣ್ಣ ಪುಟ್ಟ ಪ್ರಕರಣಗಳಿಗೆ ಮೆಮೊ ಜಾರಿ ಮಾಡುವುದು, ಮನಸೋ ಇಚ್ಛೆ ದಂಡ ವಿಧಿಸುವುದು, ಇಂಕ್ರಿಮೆಂಟ್ ಕಟ್ ಮಾಡುವುದು ಹಾಗೂ ಅಮಾನತು ಮತ್ತು ಘಟಕ ವರ್ಗಾವಣೆ ಹಾಗೂ ಇಲಾಖಾ ತನಿಖಾ ಹೆಸರಿನಲ್ಲಿ ಶಿಕ್ಷೆಗಳಿಗೆ ಗುರಿಪಡಿಸುವುದು.

ಈ ಶಿಕ್ಷಾ ಪ್ರಮಾಧಗಳು ಕಡಿತಗೊಳಿಸಬೇಕಾದರೆ ಈ ಮೇಲೆ ಕಾಣಿಸಿರುವ ಮಧ್ಯವರ್ತಿಗಳನ್ನು ಸಂಪರ್ಕಿಸುವಂತೆ ಅವರ ಮೂಲಕ ಹಣ ದಂದೆ ನಡೆಯುತ್ತಿದೆ. ಇದರಲ್ಲಿ ಕೆಲವು ಅಧಿಕಾರಿಗಳು ಸಂಸ್ಥೆಗೆ ಸೇರಿದಾಗಿನಿಂದ ಪ್ರಾಮಾಣಿಕವಾಗಿ ಸೇವೆಸಲ್ಲಿಸುತ್ತಿದ್ದು ಹಣ ಪಡೆಯದೇ ಇದ್ದವರು ಇದ್ದಾರೆ. ಆದರೆ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಡಿಟಿಒ, ಡಿಎಂಇ ಇವರ ಒತ್ತಡದ ಮೇಲೆ ಹಣದಂದಗೆ ಇಳಿದಿರುತ್ತಾರೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ ನಿರಂತರ ಮಳೆ- BBMP ಎಲ್ಲ ಅಧಿಕಾರಿಗಳು ಸನ್ನದ್ಧರಾಗಿ: ತುಷಾರ್ ಗಿರಿನಾಥ್