ಚಿಕ್ಕೋಡಿ: ನವರಾತ್ರಿ ಹಿನ್ನೆಲೆಯಲ್ಲಿ ಆಯೋಜಿಸಿದ್ದ ದಾಂಡಿಯಾ ಉತ್ಸವ ಕಾರ್ಯಕ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸಕತ್ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ. ಅಲ್ಲದೆ ರಾಜಸ್ಥಾನಿ ವೇಷಭೂಷಣ ತೊಟ್ಟು ಮಿಂಚಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಆಯೋಜಿಸಿದ್ದ ದಾಂಡಿಯಾ ಉತ್ಸವದಲ್ಲಿ ಮಹಿಳೆಯರು ಹಾಗೂ ಕುಟುಂಬಸ್ಥರೊಂದಿಗೆ ಶಶಿಕಲಾ ಜೊಲ್ಲೆ ದಾಂಡಿಯಾ ನೃತ್ಯ ಮಾಡಿ ನೆರೆದವರನ್ನು ರಂಜಿಸಿದ್ದಾರೆ.
ಶಶಿಕಲಾ ಜೊತೆಗೆ ಅವರ ಪತಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಪುತ್ರ ಬಸವಪ್ರಸಾದ ಜೊಲ್ಲೆ ಹಾಗೂ ಕುಟುಂಬಸ್ಥರು ಸಾಥ್ ನೀಡಿದ್ದು, ದಾಂಡಿಯಾ ನೃತ್ಯದಲ್ಲಿ ಜೊತೆಯಾಗುವ ಮೂಲಕ ಸಂಭ್ರಮಿಸಿದರು.
ನೂರಾರು ಮಹಿಳೆಯರು ಈ ದಾಂಡಿಯಾ ಉತ್ಸವದಲ್ಲಿ ಭಾಗಿಯಾಗಿದ್ದರು. ಆ ಮೂಲಕ ಸಂಸ್ಕೃತಿ ಪರಂಪರೆಗಳನ್ನು ಸಾರುವ ಹಬ್ಬಗಳ ಆಚರಣೆಗಳು ಆಯೋಜನೆ ಮಾಡಬೇಕಿದೆ. ಇದಕ್ಕೆ ಡಾನ್ಸ್ ಎನ್ನುವ ಬದಲು ನಮ್ಮದೇ ದೇಶಿ ಶೈಲಿಯ ಜನಪದ ಕಲೆ ಎನ್ನಬಹದು. ಹೀಗಾಗಿ ಇದನ್ನು ಪ್ರೋತ್ಸಾಹಿಸಬೇಕು ಎಂದು ಶಶಿಕಲಾ ಜೊಲ್ಲೆ ಸಲಹೆ ನೀಡಿದರು.