CrimeNEWSಕೃಷಿ

ಖಾತೆ ಬದಲಾವಣೆ ಮಾಡಲು 10 ಲಕ್ಷ ರೂ.ಗೆ ಬೇಡಿಕೆ – 5 ಲಕ್ಷ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಸೀಲ್ದಾರ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಖಾತೆ ಮಾಡಿಕೊಡುವ ಸಲುವಾಗಿ ಲಕ್ಷ ರೂಪಾಯಿ ಪಡೆಯುತ್ತಿದ್ದ ವೇಳೆ ಕಂದಾಯ ಇಲಾಖೆಯ (Revenue Department) ವಿಶೇಷ ತಹಸೀಲ್ದಾರ್ ಒಬ್ಬರು ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು ನಗರದ ಉತ್ತರ ತಾಲೂಕಿನ ವಿಶೇಷ ತಹಸೀಲ್ದಾರ್ ವರ್ಷ ಒಡೆಯರ್ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಹುಳು.

ಈಕೆ ಖಾತೆ ಬದಲಾವಣೆ ಮಾಡಿಕೊಡಲು ಬ್ರೋಕರ್ ಮೂಲಕ 10 ಲಕ್ಷ ರೂಪಾಯಿಗೆ ಬೆಂಗಳೂರಿನ ಕೆಂಗನಹಳ್ಳಿಯ ಕಾಂತರಾಜು ಎಂಬುವರಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಖಚಿತಪಡಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ತಹಸೀಲ್ದಾರ್ ಕಚೇರಿ ಮೇಲೆ ದಾಳಿ ಮಾಡಿ, ಲಂಚ ಪಡೆಯುತ್ತಿದ್ದ ವೇಳೆ ಬಂಧಿಸಿದರು.

ಸದ್ಯ ಈ ಸಂಬಂಧ ಬ್ರೋಕರ್ ಹಾಗೂ ತಹಸೀಲ್ದಾರ್ ಅನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ಇಬ್ಬರ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಸರ್ಕಾರಿ ಸಂಬಳ, ಕಾರು ಬಂಗಲೆ ಎಲ್ಲವೂ ಇದ್ರೂ ಕೆಲವು ಸರ್ಕಾರಿ ಅಧಿಕಾರಿಗಳಿಗೆ ಅದ್ಯಾಕೋ ಲಂಚದ ಹಣದ ಮೇಲೆಯೇ ವ್ಯಾಮೋಹ ಜಾಸ್ತಿ. ಆಸೆ ಇದ್ರೆ ಓಕೆ ಆದ್ರೆ ದುರಾಸೆಯಿದ್ರೆ ಹೇಗೆ ಹೇಳಿ. ಹೌದು ದುರಾಸೆಗೆ ಬಿದ್ದ ಈ ತಹಸೀಲ್ದಾರ್ ಈಗ ದೀಪದ ಮೇಲೆ ಬಿದ್ದು ರೆಕ್ಕೆ ಸುಟ್ಟುಕೊಂಡ ಪಾತರಗಿತ್ತಿಯಂತೆ ಒದ್ದಾಡುತ್ತಿದ್ದಾರೆ.

ಯಾರು ಈ ತಹಸೀಲ್ದಾರ್‌: ತಹಸೀಲ್ದಾರ್ ವರ್ಷಾ ಒಡೆಯರ್, 2014ರ ಕೆಎಎಸ್ ಬ್ಯಾಚ್​ನ ಅಧಿಕಾರಿ. ಈಗ ಉತ್ತರ ತಾಲೂಕಿನ ವಿಶೇಷ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಂಚದ ಆಸೆಯಿಂದ ಲೋಕಾಯುಕ್ತ ಬಲೆಗೆ ಬಿದ್ದು ಸದ್ಯ ವಿಲವಿಲನೆ ಒದ್ದಾಡುತ್ತಿದ್ದಾರೆ.

ಮಧ್ಯವರ್ತಿ ರಮೇಶ್ ಎಂಬಾತನ ಮೂಲಕ 10 ಲಕ್ಷ ರೂಪಾಯಿಗೆ ವರ್ಷಾ ಬೇಡಿಕೆಯಿಟ್ಟಿದ್ದರಂತೆ ಇದೇ ಬ್ರೋಕರ್​ ಕಾಂತರಾಜು  ಅವರಿಂದ ಪಡೆದಿದ್ದ 5 ಲಕ್ಷ ರೂ.ಗಳನ್ನು ಆಕೆಗೆ ಕೊಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರು ಖೆಡ್ಡಕ್ಕೆ ಕೆಡವಿದ್ದಾರೆ.

ಯಾರ ಖಾತೆ ಬದಲಾವಣೆ: ಬೆಂಗಳೂರಿನ ಕೆಂಗನಹಳ್ಳಿಯ ಕಾಂತರಾಜು ಎನ್ನುವವರು, ದಾಸನಪುರದಲ್ಲಿರುವ ಜಮೀನಿನ ಖಾತೆಯ ಬದಲಾವಣೆಗೆ ತಹಸೀಲ್ದಾರ್ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಖಾತದಾರರ ಹೆಸರು ಬದಲಾವಣೆಗೆ ತಹಸೀಲ್ದಾರ್ ವರ್ಷಾ, ಬ್ರೋಕರ್ ರಮೇಶ್ ಮೂಲಕ 10 ಲಕ್ಷ ರೂ.ಗೆ  ಬೇಡಿಕೆಯಿಟ್ಟಿದ್ದಾರೆ. ಆಗ ಗಾಬರಿಗೊಂಡ ಕಾಂತರಾಜು ದಿಕ್ಕುತೋಚದಂತಾಗಿ ಹೊರಗೆ ಬಂದಿದ್ದಾರೆ.

ಆದರೂ ಬಿಡದೆ ಬ್ರೋಕರ್‌ ಮೂಲಕವೇ ತಹಸೀಲ್ದಾರ್‌ 10 ಲಕ್ಷ ರೂ.ಗಳ ಡೀಲ್‌ ಕುದುರಿಸಿಕೊಂಡಿದ್ದಾರೆ. ಇನ್ನು ನಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿಕೊಡಲು ಈಕೆಗೆ ಅಷ್ಟು ಹಣ ಏಕೆ ಕೊಡಬೇಕು ಎಂದು ಯೋಚಿಸಿ ಸ್ನೇಹಿತರ ಸಹಕಾರ ಪಡೆದು ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ ಕಾಂತರಾಜು.

ದೂರು ದಾಖಲಿಸಿಕೊಂಡ ಕೂಡಲೇ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು 5 ಲಕ್ಷ ಹಣ ಪಡೆಯುವಾಗ ಬ್ರೋಕರ್ ರಮೇಶ್ ಹಾಗೂ ತಹಸೀಲ್ದಾರ್ ವರ್ಷಾ ಅರವನ್ನು ಬಂಧಿಸಿದ್ದಾರೆ.

ಇನ್ನು ಬ್ರೋಕರ್ ರಮೇಶ್​ನನ್ನು ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಈತ ತಹಸೀಲ್ದಾರ್ ವರ್ಷಾ ಅವರಿಗೆ ಯಾವಾಗಿನಿಂದ ಪರಿಚಯ? ಇತನಿಂದ ಬೇರೆ ಯಾವ ಯಾವ ಪ್ರಕರಣದಲ್ಲಾದ್ರೂ ತಹಸೀಲ್ದಾರ್ ಹಣ ಪಡೆದಿದ್ದಾರಾ ಎಂಬುವುದು ಸೇರಿದಂತೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಪಡೆಯಲು ವಿಚಾರಣೆ ನಡೆಸುತ್ತಿದ್ದಾರೆ.

ವರ್ಷಾ ಒಡೆಯರ್​​​​, ಈ ಹಿಂದೆ ಚಾಮರಾಜನಗರ ಜಿಲ್ಲೆಯ ಯಳಂದೂರು ಹಾಗೂ ರಾಮನಗರ ಜಿಲ್ಲೆಯ ಕನಕಪುರದಲ್ಲಿ ತಹಸೀಲ್ದಾರ್‌ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಕೆಲ ತಿಂಗಳ ಹಿಂದಷ್ಟೇ ಬೆಂಗಳೂರು ಉತ್ತರ ತಾಲೂಕಿನ ವಿಶೇಷ ತಹಸೀಲ್ದಾರ್‌ ಆಗಿ ವರ್ಗಾವಣೆ ಆಗಿದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ