NEWSನಮ್ಮಜಿಲ್ಲೆ

ಸುಗಮ್ಯ ಭಾರತ ಅಭಿಯಾನಕ್ಕೆ ಜಿಲ್ಲಾಧಿಕಾರಿ ಬಸವರಾಜು ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಸುಗಮ್ಯ ಭಾರತ ಅಭಿಯಾನದಡಿ ವಿಕಲಚೇತನರು ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮತ್ತು ಹೊರಾಂಗಣ ಮತ್ತು ಒಳಾಂಗಣ ಪ್ರದೇಶದಲ್ಲಿ ಯಾವುದೇ ರೀತಿಯ ಅಡೆ ತಡೆಗಳಿಲ್ಲದೆ ಸುಗಮವಾಗಿ ಸಂಚರಿಸಲು ಸುಗಮ್ಯ ಭಾರತ ಅಭಿಯಾನದ ಉದ್ದೇಶವಾಗಿದ್ದು ಈ ಅಭಿಯಾನಕ್ಕೆ ಇಂದು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳಾದ ಎ.ಬಿ.ಬಸವರಾಜು ಚಾಲನೆ ನೀಡಿದರು.

ಈಗಾಗಲೇ ರಾಜ್ಯಾದ್ಯಂತ ಈ ಸುಗಮ್ಯ ಯಾತ್ರಾ ಕಾರ್ಯಕ್ರಮ ಪ್ರಾರಂಭವಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಇಳಿಜಾರು ಮೆಟ್ಟಿಲುಗಳು ಮತ್ತು ಸೂಚನಾ ಫಲಕಗಳನ್ನು ಅಚ್ಚುಕಟ್ಟಾಗಿ ಒಳಗೊಂಡಿರಬೇಕು.

ವಿಕಲಚೇತನ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಕ್ರೋಢೀಕರಿಸಲು ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದ The Association of People with Disability (ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಸಂಘ) ಬೆಂಗಳೂರು ಸಂಸ್ಥೆಯೊಂದಿಗೆ ಈ ಒಪ್ಪಂದ ಮಾಡಿಕೊಂಡಿದೆ.

ಅದರಂತೆ ಇದರ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು Yes to Access ಎಂಬ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು, ಎಲ್ಲರೂ ಈ ಅಪ್ಲಿಕೇಶನನ್ನು ತಮ್ಮ ಮೊಬೈಲ್‌ನಲ್ಲಿ ಸುಲಭವಾಗಿ ಬಳಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಅಪ್ಲಿಕೇಶನ್ ಅನ್ನು APD ಸಂಸ್ಥೆಯ ಗಿರಿಜಮ್ಮ ಸ್ಥಳದಲ್ಲಿಯೇ ಪ್ರಾಯೋಗಿಕವಾಗಿ ಯಾವ ರೀತಿ ಬಳಸಬಹುದು ಎಂಬ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜಗದೀಶ್ ಎನ್.ಎಂ, ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಸುನೀಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!