NEWSಕೃಷಿನಮ್ಮಜಿಲ್ಲೆ

ರೈತರಿಗಾಗಿ ಜಿಲ್ಲಾ ಮಟ್ಟದ ಮಾವು- ಹಲಸು ಮೇಳ: ಸಚಿವ ಮುನಿಯಪ್ಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ-2025″ ವನ್ನು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು ಜಿಲ್ಲೆಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳನ್ನು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಾಗೂ ರೈತರನ್ನು ಪ್ರೋತ್ಸಾಹಿಸಲು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೈಸರ್ಗಿಕವಾಗಿ ಹಣ್ಣುಗಳು ಸಿಗುವಂತೆ ಮಾಡಲು ಮೇಳ ಆಯೋಜನೆ ಮಾಡಲಾಗಿದೆ.

ವಿವಿಧ ತಳಿಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆಯಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರು ಹಣ್ಣುಗಳನ್ನು ಖರೀದಿ ಮಾಡಬಹುದಾಗಿದೆ ಎಂದರು.

ಮೇಳವು ದೇವನಹಳ್ಳಿ ತಾಲ್ಲೂಕಿನ ಹೋಟೆಲ್ ನಂದಿ ಉಪಚಾರ ಮುಂಭಾಗ (ನಂದಿ ಬೆಟ್ಟಕ್ಕೆ ಹೋಗುವ ರಸ್ತೆ, ರಾಣಿ ಕ್ರಾಸ್) ಆಯೋಜಿಸಲಾಗಿದ್ದು ಜೂನ್ 13 ರಿಂದ 15 ವರೆಗೆ 2 ದಿನಗಳ ಕಾಲ ಇರಲಿದೆ. ಸಾರ್ವಜನಿಕರು ಕೂಡ ಗುಣಮಟ್ಟದ ವಿವಿಧ ತಳಿಯ ಹಣ್ಣುಗಳು ಹಾಗೂ ತಾಜಾ ಹಣ್ಣುಗಳನ್ನು ಒಂದೇ ವೇದಿಕೆಯಲ್ಲಿ ಖರೀದಿ ಮಾಡಲು ಉತ್ತಮ ಅವಕಾಶ ಇದಾಗಿದೆ.

ಸಸ್ಯ ಸಂತೆ ಕಾರ್ಯಕ್ರಮವನ್ನು ಮೇಳದಲ್ಲಿ ಏರ್ಪಡಿಸಲಾಗಿದ್ದು ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಕಸಿ/ಸಸಿ ಗಿಡಗಳನ್ನು ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ಮೇಳದಲ್ಲಿ ಕಂಡು ಬಂದ ವಿವಿಧ ತಳಿಯ ಮಾವು-ಹಲಸು, ಸೀಬೆ, ತೋತಾಪುರಿ, ಸೇಂದೂರ, ಬಂಗನಪಲ್ಲಿ, ಬಾದಾಮಿ, ರಸಪೂರಿ, ಮಲ್ಲಿಕಾ, ಕೇಸರ್, ದಶೇರಿ, ಕುಲ್ ಪಂದ್, ಹಿಮಾಪಸಂದ್,ಮಲಗೋವ, ಸಕ್ಕರೆಗುತ್ತಿ, ಡ್ರಾಗನ್ ಪ್ರೋಟ್ಸ್(ಕೆಂಪು), ಸೀಬೆ(ತೈವಾನ್, ಅಲಹಾಬಾದ್), ಹಲಸು(ಪ್ಯಾಕೆಟ್).

ಖುದ್ದು ಸಚಿವರು ಎಲ್ಲ ಮಳಿಗೆಗೆಳಿಗೆ ಭೇಟಿ ನೀಡಿ ರೈತರೊಟ್ಟಿಗೆ ಸಮಾಲೋಚಿಸಿ ವಿವಿಧ ತಳಿಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅವುಗಳ ರುಚಿ ಸವಿದು ಹಣ್ಣುಗಳನ್ನು ಖರೀದಿಸಿದರು.

ಕಾರ್ಯಕ್ರಮದಲ್ಲಿ ಸಿಇಒ ಡಾ.ಕೆ.ಎನ್ ಅನುರಾಧ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಗುಣವಂತ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕಲಾವತಿ, ಬಯಪ ಅಧ್ಯಕ್ಷ ಶಾಂತಕುಮಾರ್, ಪುರಸಭೆ ಅಧ್ಯಕ್ಷ ಮುನಿಕೃಷ್ಣ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತ ಬಾಂಧವರು, ಗ್ರಾಹಕರು ಇದ್ದರು.

Megha
the authorMegha

Leave a Reply

error: Content is protected !!
Latest news
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ 993 ರೂ. ಹೆಚ್ಚಳ- ಭಾರೀ ಏರಿಕೆ ಮೇ 1ರಿಂದಲೇ ಜಾರಿ KSRTC: ಮೇ 4ರಂದು ಸರ್ಕಾರದ ವಿಳಂಬ ನೀತಿ ಖಂಡಿಸಿ ಸಾರಿಗೆ ನೌಕರರ ಒಕ್ಕೂಟದಿಂದ ಧರಣಿ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸಾರಿಗೆ ನೌಕರರಿಂದ ಕರಾಳ ಕಾರ್ಮಿಕ ದಿನಾಚರಣೆ- ಡ್ಯೂಟಿ ಮೇಲೆ ಮೌನ ಪ್ರತಿಭಟನೆ GBA ದಕ್ಷಿಣ: ಮಳೆ ಬಂದಾಗ ಹೆಚ್ಚು ನೀರು ನಿಲ್ಲುವ ಪ್ರದೇಶಗಳಿಗೆ ಆಯುಕ್ತ ರಮೇಶ್ ಭೇಟಿ ಸರ್ಕಾರ ಸಾರಿಗೆ ನೌಕರರ ಏಳಿಗೆ ಬಗ್ಗೆ ಯೋಚಿಸಲೂ ಆಗದಂತಹ ನಿಕೃಷ್ಟ ಹಂತ ತಲುಪಿರುವುದು ದುರಂತವೇ ಸರಿ: ವಿಪಕ್ಷ ನಾಯಕ ಆರ್‌... KKRTC: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಂಡಿಗೆ ಲಿಖಿತ ದೂರು ಕೊಟ್ಟು 3 ತಿಂಗಳುಗಳು ಕಳೆದರೂ ಯಾವುದೇ ಕ್ರಮವಿಲ್ಲ ಏಕೆ- ಯಾ... KSRTC- ನಮ್ಮ ಹೋರಾಟ ಕಡೆಗಣಿಸುತ್ತಿದ್ದೀರಿ ಇದು ನಿಮಗೆ ಸಲ್ಲ- ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಕೇಂದ್ರ ಸರ್... ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ ! KSRTC: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತ ಬಸ್‌- ತಪ್ಪಿದ ಭಾರಿ ಅನಾಹುತ KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ