
- ನಿವೃತ್ತಿ ನಂತರ ಸಿಗುವುದು ವೇತನದ 50% ಪಿಂಚಣಿ!
ಬೆಂಗಳೂರು : ಕೇಂದ್ರ ಸರ್ಕಾರವು ಕೆಲವು ತಿಂಗಳ ಹಿಂದೆ ‘ಏಕೀಕೃತ ಪಿಂಚಣಿ ಯೋಜನೆ’ಯನ್ನು ಪರಿಚಯಿಸಿತು. ಈ ಪಿಂಚಣಿ ಯೋಜನೆ ಮುಂದಿನ ಹಣಕಾಸು ವರ್ಷದಿಂದ, ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಗೆ (NPS) ಬದಲಿಯಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ಅವರ ಕೊನೆಯ ಸಂಬಳದ 50 ಪ್ರತಿಶತವನ್ನು ಪಿಂಚಣಿಯಾಗಿ ನೀಡಲಾಗುವುದು.
ಇನ್ನು ಹಳೆಯ ಪಿಂಚಣಿ ಯೋಜನೆ (ಒಪಿಎಸ್)ಯನ್ನು ಮತ್ತೆ ಜಾರಿಗೆ ತರಬೇಕು ಎಂದು ನೌಕರರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಕೆಲವು ರಾಜ್ಯಗಳು ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿವೆ.
ಎಲ್ಲದರ ನಡುವೆ ಇದೀಗ ಸರ್ಕಾರಿ ನೌಕರರಿಗೆ ಸಂತಸದ ವಿಷಯವೊಂದು ಸಿಕ್ಕಿದ್ದು ಒಪಿಎಸ್‌ಗೆ ಪ್ರತಿಯಾಗಿ ಹಳೆಯ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಪ್ರಮುಖ ಲಕ್ಷಣಗಳನ್ನು ಒಟ್ಟುಗೂಡಿಸಿ ಸಮಗ್ರ ಪಿಂಚಣಿ ಯೋಜನೆಯನ್ನು ರಚಿಸಲಾಗಿದೆ.
ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರಿ ನೌಕರರು ತಮ್ಮ ಕೊನೆಯ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ಪಡೆಯುವರು. ಈಗ ಯುಪಿಎಸ್ ಕೂಡಾ ಉದ್ಯೋಗಿಗಳಿಗೆ ಅದೇ ಪ್ರಯೋಜನಗಳನ್ನು ನೀಡುತ್ತದೆ.
ಈ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರಿ ನೌಕರರು ತಮ್ಮ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ (DA) ಶೇಕಡಾ 10 ರಷ್ಟು ಕೊಡುಗೆ ನೀಡಬೇಕಾಗುತ್ತದೆ. ಸರ್ಕಾರ ಕೂಡಾ ಶೇ. 18.5 ರಷ್ಟು ಕೊಡುಗೆ ನೀಡಲಿದೆ. ಇದಲ್ಲದೆ, ಯುಪಿಎಸ್ ಅಡಿಯಲ್ಲಿ ಪ್ರತ್ಯೇಕ ಮೀಸಲು ನಿಧಿಯನ್ನು ಸಹ ಸ್ಥಾಪಿಸಲಾಗುವುದು. ಇದಕ್ಕೆ ಸರ್ಕಾರ ಹೆಚ್ಚುವರಿಯಾಗಿ ಶೇ. 8.5 ರಷ್ಟು ಕೊಡುಗೆ ನೀಡಲಿದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರ ಕೊನೆಯ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
ಈ ಯೋಜನೆಯಡಿಯಲ್ಲಿ, 10ರಿಂದ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಉದ್ಯೋಗಿಗಳಿಗೆ ಅನುಪಾತದ ಪಿಂಚಣಿ ನೀಡಲಾಗುವುದು. ಒಬ್ಬ ಉದ್ಯೋಗಿ ದುರದೃಷ್ಟವಶಾತ್ ಮರಣ ಹೊಂದಿದಲ್ಲಿ, ಅವರ ಕುಟುಂಬಕ್ಕೆ ಪಿಂಚಣಿಯ 60 ಪ್ರತಿಶತವನ್ನು ನೀಡಲಾಗುತ್ತದೆ. ಇದರ ಜತೆಗೆ, ಉದ್ಯೋಗಿಗೆ ಗ್ರಾಚ್ಯುಟಿಯೊಂದಿಗೆ ಒಂದು ದೊಡ್ಡ ಮೊತ್ತವನ್ನು ಪಾವತಿಸಲಾಗುತ್ತದೆ.
ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಉದ್ಯೋಗಿಗಳಿಗೆ ಪ್ರತಿ ತಿಂಗಳು ಕನಿಷ್ಠ 10,000 ರೂ. ಪಿಂಚಣಿ ನೀಡಲಾಗುವುದು. 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ನಿವೃತ್ತರಾಗುವ ನೌಕರರು ಅಂದಾಜು ನಿವೃತ್ತಿ ವಯಸ್ಸಿನಿಂದಲೇ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯ ಅನುಷ್ಠಾನದ ಮೊದಲು ನಿವೃತ್ತರಾದ ಉದ್ಯೋಗಿಗಳು ಇದರ ಪ್ರಯೋಜನಗಳನ್ನು ಪಡೆಯಬಹುದು.