NEWSನಮ್ಮರಾಜ್ಯರಾಜಕೀಯ

ಮಾಜಿ ಸಿಎಂ ಡಿವಿಎಸ್‌ ಅವರಾಗೇ ರಾಜಕೀಯ ನಿವೃತ್ತಿ ಘೋಷಿಸಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ವಿಜಯಪಥ ಸಮಗ್ರ ಸುದ್ದಿ

ಈಗ ಈಶ್ವರಪ್ಪ ಪಕ್ಷ ಬಿಡ್ತಾರಾ?, ಸಂಸದ ಶ್ರೀನಿವಾಸಪ್ರಸಾದ್‌ ಕೂಡ ನಿವೃತ್ತಿ ಘೋಷಣೆ ಮಾಡಲು ಸಿದ್ಧ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು ಸೇರಿದಂತೆ ಬೇರೆ ನಾಯಕರು ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದು ಬಿಜೆಪಿಯ ಈ ನಾಯಕರು ಸ್ವಯಂ ನಿವೃತ್ತಿ ಘೋಷಣೆ ಮಾಡಿರುವುದಲ್ಲ, ಒತ್ತಾಯದಿಂದ ಆಗಿರುವುದು ಎಂದು ಕಾಂಗ್ರೆಸ್‌ ನಾಯಕ, ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮಾಜಿ ಸಚಿವರು ಆದ ಸದಾನಂದಗೌಡ ಅವರು ಮಾನಸಿಕವಾಗಿ, ದೈಹಿಕವಾಗಿ ಫಿಟ್ ಇದ್ದಾರೆ, ಆದರೂ ನಿವೃತ್ತಿ ಘೊಷಣೆ ಮಾಡಿದ್ದಾರೆ ಎಂದರೆ, ಬಿಜೆಪಿಯವರು ತಮ್ಮ ನಾಯಕರನ್ನೇ ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುವುದು ತಿಳಿಯುತ್ತದೆ. ಅವರು ನೊಂದು ಪಕ್ಷವನ್ನು ಬಿಟ್ಟಿದ್ದಾರೆ ಎಂದು ಕುಟುಕಿದರು.

ಸದಾನಂದಗೌಡ ಅವರು ದೆಹಲಿಗೆ ಹೋದರು ಬಾಗಿಲು ತೆಗೆದಿಲ್ಲ. ಬಿಜೆಪಿ ವರ್ಸಸ್ ಬಿಜೆಪಿ ಆಗಿದೆ. ಬಿಜೆಪಿ ಬಿಟ್ಟು ಎಷ್ಟು ಜನ ಬರ್ತಾರೆ ನೀವೆ ನೋಡಿ. ಬೂತ್ ಮಟ್ಟ, ಸಂಘದಲ್ಲಿ‌ ಕೆಲಸ ಮಾಡಿದ್ದೇನೆ, ಸಚಿವನಾಗಿದ್ದೆ. ನಾನು ಏನು ಮಾತನಾಡಿದರು ತಿರುಗುಬಾಣ ಆಗಲಿದೆ ಎಂದು ತಿಳಿಸಿದ್ದರು.

ಈಗ ಈಶ್ವರಪ್ಪ ಪಕ್ಷ ಬಿಡ್ತಾರಾ?: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಎಲ್ಲಿಗೆ ಹೋದರು? ಈಶ್ವರಪ್ಪ ನನಗೆ ಬಚ್ಚಾ ಎನ್ನುತ್ತಿದ್ದರು, ಈಗ ಹೋಗಿ ಮಂಡಿ ಊರುತ್ತೀರಾ? ಮೊದಲು ನಿಮ್ಮ ಮನೆಯನ್ನು ನೋಡಿಕೊಳ್ಳಿ. ಬಿಜೆಪಿ ಲೆಕ್ಕಾಚಾರ ಏನು ಅನ್ನೋದು ಅವರಿಗೆ ಬಿಟ್ಟಿದು. ನಾವು ನಮ್ಮ ಬಲದ ಮೇಲೆ ತಂತ್ರಗಾರಿಕೆ ಮಾಡ್ತೇವೆ. ಸಮುದಾಯ ಬೆಂಬಲ ಇಲ್ಲ ಎಂದು ಒಪ್ಪಿಕೊಂಡಂಗೆ ಅಲ್ವಾ ಎಂದು ಪ್ರಿಯಾಂಕ್ ಖರ್ಗೆ ಚಾಟಿ ಬೀಸಿದ್ದಾರೆ.

ಈ ನಡುವೆ ಚಾಮರಾಜನಗರ ಸಂಸದ ಶ್ರೀನಿವಾಸ್‌ ಪ್ರಸಾದ್‌ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರು ಯೋಚನೆ ಮಾಡಲಿ, ಕರ್ನಾಟಕದಲ್ಲಿ ನಾವು ಯಾವ ರೀತಿ ದಿವಾಳಿ ಆಗುತ್ತಿದ್ದೇವೆ ಎಂದು ವ್ಯಂಗ್ಯವಾಗಿ ಕುಟುಕಿದರು.

Leave a Reply

error: Content is protected !!
LATEST
ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್ KSRTC: ₹185 ಟಿಕೆಟ್‌ ಕೊಟ್ಟು ₹200 ಕೇಳಿದ ಕಂಡಕ್ಟರ್‌ - ದೂರು ಕೊಟ್ಟ ಪ್ರಯಾಣಿಕ ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಕಾರು ನಜ್ಜುಗುಜ್ಜು - ಪ್ರಯಾಣಿಕರು ಸೇಫ್ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ:‌ ಶೇ.25.5 ವೇತನ ಹೆಚ್ಚಳ ಬಹುತೇಕ ಖಚಿತ