ಬೆಂಗಳೂರು: ಕುಮಾರಸ್ವಾಮಿ ಬಡಾವಣೆಯ 2ನೇ ಹಂತದಲ್ಲಿರುವ ರಾಜಣ್ಣ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಗಣೇಶ ಮೂರ್ತಿಯನ್ನು ಕೂರಿಸಿ ಸಂಜೆ ವರೆಗೂ ವಿವಿಧ ನೈವೇದ್ಯಗಳನ್ನು ಮಾಡಲಾಯಿತು.
ರಾತ್ರಿ ಸುಮಾರು 11 ಗಂಟೆ ವೇಳೆ ಮಹಾ ಮಂಗಳಾರತಿ ಬೆಳಗುವ ಮೂಲಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಪೂಜೆಯಲ್ಲಿ ರಾಜಣ್ಣ, ಪ್ರೇಮಾ ರಾಜಣ್ಣ, ಗುಣಶ್ರೀ, ದರ್ಶನ್ ಸೇರಿದಂತೆ ಅಕ್ಕಪಕ್ಕದ ಮನೆಯವರು ಭಾಗಿಯಾಗಿದ್ದರು.
1,59,980 ಗಣೇಶ ಮೂರ್ತಿಗಳ ವಿಸರ್ಜನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರಿ/ ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿ/ ಹೊಂಡಗಳಲ್ಲಿ ಒಟ್ಟು 1,59,980 ಗಣೇಶ ಮೂರ್ತಿಗಳನ್ನು ಬುಧವಾರ ಸಂಜೆ ವಿಸರ್ಜನೆ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಗಣೇಶ ಮೂರ್ತಿಯನ್ನು ಕೂರಿಸಿ ಸಂಜೆ ಹಾಗೂ ವಿಸರ್ಜನೆ ಮಾಡಿರುವ ಮಣ್ಣಿನ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ) ಗಣೇಶ ಮೂರ್ತಿಗಳ ವಿವರ ಇಲ್ಲಿದೆ.
ಪಶ್ಚಿಮ ವಲಯ: ಮಣ್ಣಿನ ಗಣೇಶ ಮೂರ್ತಿಗಳು: 34,471, ಪಿ.ಓ.ಪಿ ಗಣೇಶ ಮೂರ್ತಿಗಳು: 306, ದಕ್ಷಿಣ ವಲಯ: ಮಣ್ಣಿನ ಗಣೇಶ ಮೂರ್ತಿಗಳು: 68,521, ಪಿ.ಓ.ಪಿ ಗಣೇಶ ಮೂರ್ತಿಗಳು: 11,402
ದಾಸರಹಳ್ಳಿ ವಲಯ: ಮಣ್ಣಿನ ಗಣೇಶ ಮೂರ್ತಿಗಳು: 1,382, ಪಿ.ಓ.ಪಿ ಗಣೇಶ ಮೂರ್ತಿಗಳು: 22, ಪೂರ್ವ ವಲಯ: ಮಣ್ಣಿನ ಗಣೇಶ ಮೂರ್ತಿಗಳು: 12,750, ಪಿ.ಓ.ಪಿ ಗಣೇಶ ಮೂರ್ತಿಗಳು: 0
ಆರ್.ಆರ್.ನಗರ ವಲಯ: ಮಣ್ಣಿನ ಗಣೇಶ ಮೂರ್ತಿಗಳು: 14,479, ಪಿ.ಓ.ಪಿ ಗಣೇಶ ಮೂರ್ತಿಗಳು: 152, ಬೊಮ್ಮನಹಳ್ಳಿ ವಲಯ: ಮಣ್ಣಿನ ಗಣೇಶ ಮೂರ್ತಿಗಳು: 6,136, ಪಿ.ಓ.ಪಿ ಗಣೇಶ ಮೂರ್ತಿಗಳು: 131.
ಯಲಹಂಕ ವಲಯ: ಮಣ್ಣಿನ ಗಣೇಶ ಮೂರ್ತಿಗಳು: 6000, ಪಿ.ಓ.ಪಿ ಗಣೇಶ ಮೂರ್ತಿಗಳು: 73, ಮಹದೇವಪುರ ವಲಯ: ಮಣ್ಣಿನ ಗಣೇಶ ಮೂರ್ತಿಗಳು: 4155, ಪಿ.ಓ.ಪಿ ಗಣೇಶ ಮೂರ್ತಿಗಳು ಒಂದು ಇಲ್ಲ.