NEWSನಮ್ಮಜಿಲ್ಲೆನಮ್ಮರಾಜ್ಯ

ಕೂಟದ ಮನವಿಗೆ ಸ್ಪಂದಿಸಿದ NWKRTC ವ್ಯವಸ್ಥಾಪಕ ನಿರ್ದೇಶಕರಾದ ಭರತ್‌ – ಹೃದಯ ಪೂರ್ವಕ ಧನ್ಯವಾದಗಳು

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಮಸ್ಯೆ ಪರಿಹರಿಸುವಂತೆ ಹುಬ್ಬಳ್ಳಿ ವಿಭಾಗ ಕೂಟ ಮಾಡಿದ ಮನವಿಗೆ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕ ಭರತ್‌ ಅವರು  ನೌಕರರ ಬುತೇಕ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ.

ಇನ್ನು ವಾಯುವ್ಯ ನಿಗಮವನ್ನು ಆರ್ಥಿಕವಾಗಿ ಮೇಲೇತ್ತುವ ಜತೆಗೆ ನೌಕರರ ಏಳಿಗೆಗಾಗಿ ಅವರು ಹಲವು ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ LMS ರಜೆಕೂಡ ಒಂದಾಗಿದೆ. ಇನ್ನು ಕೆಎಸ್‌ಆರ್‌ಟಿಸಿ ನಿಗಮದಲ್ಲಿ ಈಗಾಗಲೇ ಅಳವಡಿಸಿಕೊಂಡಿರುವಂತೆ ವಾಯುವ್ಯದಲ್ಲೂ ಕೂಡ 1 ಕೋಟಿ ಅಪಘಾತ ವಿಮೆ ಮಾಡಿಸುವ ಬಗ್ಗೆ ಕಾರ್ಯ ನಿರತರಾಗಿದ್ದಾರೆ.

ಈ ಹಿಂದೆ ವಾಯುವ್ಯದಲ್ಲಿ ತಡವಾಗಿ ವೇತನವಾಗುತ್ತಿತ್ತು. ಭರತ್‌ ಅವರು ಅಧಿಕಾರ ವಹಿಸಿಕೊಂಡ ಮೇಲೆ ಪ್ರತಿ ತಿಂಗಳೂ 10 ನೇ ತಾರೀಖಿಗೆ ವೇತನ ಆಗುತ್ತಿದೆ. ಹಾಗೆ ಮುಂದೆ ಎರಡು ನಿಗಮಗಳಲ್ಲಿ (ಕೆಕೆಆರ್‌ಟಿಸಿ ಹಾಗೂ ಕೆಎಸ್‌ಆರ್‌ಟಿಸಿ) ಆಗಿರುವಂತೆ ನಮ್ಮ ನಿಗಮದಲ್ಲೂ ಮುಷ್ಕರದ ವೇಳೆ ಆಗಿರುವ ಕೆಲವೊಂದು ಪ್ರಕರಣಗಣನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ನಮಗೂ ಸಂತಸ ತಂದಿದೆ.

ಇನ್ನು ನಮ್ಮ ಸಮಸ್ತ ನಾಲ್ಕೂ ನಿಗಮಗಳ ನೌಕರರ ಪರವಾಗಿ ವೇತನ ಆಯೋಗದ ಮಾದರಿಯಲ್ಲಿ ಸರಿ ಸಮಾನ ವೇತನ ನೀಡಬೇಕು ಎಂಬ ನಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ನೌಕರರಿಗೆ ಒಳ್ಳೇದು ಮಾಡುತ್ತಾರೆ ಎಂಬ ಭರವಸೆ ನೌಕರರ ಕೂಟಕ್ಕೆ ಇದೆ. ಹೀಗಾಗಿ ನಮ್ಮ ನ್ಯಾಯಯುತ ಹೋರಾಟದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರದ ಕಣ್ಣು ತೆರೆಸುತ್ತಾರೆ ಎಂದು ನಾವು ನಂಬಿದ್ದೇವೆ.

ಇದಿಷ್ಟೇ ಅಲ್ಲದೆ ನಮ್ಮ ನೌಕರರ ಪರವಾಗಿ ಮತ್ತು ಸಂಸ್ಥೆಯ ಪರವಾಗಿ ಒಳ್ಳೆಯ ಯೋಜನೆಗಳನ್ನು ರೂಪಿಸುತ್ತಿದ್ದೂ, ಇಂತಹ ವ್ಯವಸ್ಥಾಪಕ ನಿರ್ದೇಶಕರು ಸಿಕ್ಕಿದ್ದು ಕೂಡ ನಮ್ಮ ಪುಣ್ಯ. ಹಾಗೆಯೇ ನಮ್ಮ ವಾಯುವ್ಯ ನೌಕರರ ಕೂಟ ನೌಕರರು ಅನುಭವಿಸುತ್ತಿರುವ ಹಲವು ಸಮಸ್ಯೆಗಳನ್ನು ವಿವರವಾಗಿ ತಿಳಿಸಿದಾಗ ಅತ್ಯಂತ ಕಾಳಜಿಯಿಂದ ಅವರೇ ಖುದ್ದಾಗಿ ನಿಂತು ಸಮಸ್ಯೆಗಳನ್ನು ಬಗೆಹರಿಸಿ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ನಮ್ಮ ವಾಯುವ್ಯ ನೌಕರರ ಕೂಟದ ಪರವಾಗಿ ಹೃದಯದ ಪೂರ್ವಕ ಧನ್ಯವಾದಗಳು.

                                                              l ಜಾಹೀರಾತು

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?