ಹುಬ್ಬಳ್ಳಿ: ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಹುಬ್ಬಳಿ ವಿಭಾಗದ ಕೂಟದ ಪದಾಧಿಕಾರಿಗಳು ಇಂದು ಹುಬ್ಬಳ್ಳಿಯಲ್ಲಿ ಭೇಟಿಯಾಗಿ ಬೆಳಗಾವಿಯಲ್ಲಿ ಇದೇ 19ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ವೇತನ ಆಯೋಗ ಮಾದರಿಯಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ವೇತನ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಾಯ ಮಾಡಬೆಕು ಎಂದು ಮನವಿ ಮಾಡಿದರು.
ಕೂಟದ ಪದಾಧಿಕಾರಿಗಳ ಮನವಿ ಪತ್ರ ಸ್ವೀಕರಿಸಿದ ಜಗದೀಶ ಶೆಟ್ಟರ್ ಅವರು ಮಾತನಾಡಿ, ನಿಮ್ಮ ಬೇಡಿಕೆಗಳ ಬಗ್ಗೆ ನಾನು ಅಧಿವೇಶನದಲ್ಲಿ ಮತ್ತು ನಮ್ಮ ಪಕ್ಷದ ಮುಖಂಡರೊಂದಿಗೆ ಮಾತನಾಡಿ, ಆದಷ್ಟು ಶೀಘ್ರದಲ್ಲೇ ಈ ಸರ್ಕಾರದಲ್ಲೇ ನಿಮಗೆ ಉತ್ತಮ ವೇತನ ಸಿಗುವ ರೀತಿಯಲ್ಲಿ ಘೊಷಣೆ ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ಭವರವಸೆ ನೀಡಿದರು.
ಇನ್ನು ಮುಷ್ಕರದ ವೇಳೆ ಪ್ರಮುಖವಾಗಿ ಬಿಎಂಟಿಸಿಯಲ್ಲಿ ವಜಾ ಆದ ನೌಕರರನ್ನು ಬೇಷರತ್ತಾಗಿ ಪುನರ್ ನೇಮಕ ಮಾಡಿಕೊಳ್ಳುವುದಕ್ಕೆ ನಿಮ್ಮದೇ ಸರ್ಕಾರದಲ್ಲಿ ಕ್ರಮ ತೆಗೆದುಕೊಳ್ಳುವುದಕ್ಕೆ ಒತ್ತಾಯ ಮಾಡುವಂತೆ ಪದಾಧಿಕಾರಿಗಳು ಕೇಳಿಕೊಂಡರು.
ಅಲ್ಲದೆ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಮಾಡುವಂತೆ ಹಾಗೂ ಕೆಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕಾರದ ಗಮನ ಸೆಳೆಯಲು ಈ ಅಧಿವೇಶನದಲ್ಲಿ ನೌಕರರ ಪರವಾಗಿ ಧ್ವನಿ ಎತ್ತುವಂತೆ ಮನವಿ ಸಲ್ಲಿಸಿದರು.
ಈಗಾಗಲೇ ಕಳೆದ 2020ರಲ್ಲಿ ಸಾರಿಗೆ ನೌಕರರಿಗೆ ವೇತನ ಹೆಚ್ಚಳವಾಗಬೇಕಿತ್ತು. ಅದು ಇನ್ನೂ ಕೂಡ ಆಗಿಲ್ಲ. ಹೀಗಾಗಿ ನಮಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬಂತೆ ಸರಿ ಸಮಾನ ವೇತನ ಕೊಡಿಸಬೇಕು ಎಂದು ನೌಕರರು ಕೇಳಿದದರು ಮಾಝಿ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಕೂಟದ ಮುಖಂಡರಾದ ವಿ.ಜಿ. ಪೂಜಾರ, ವಿನಾಯಕ ಕಲ್ಲನ್ನವರ, ಎಸ್.ಡಿ. ದ್ಯಾಮಣ್ಣವರ, ನಾಗರಾಜ ಭೂಮಣ್ಣವರ್, ಸಂಗಣ್ಣ ಗುರಿಕಾರ, ಜಗನ್ನಾಥ, ಸಂಗಣ್ಣ,ಜಾಧವ, ಮಾಳೆ, ಕಡ್ಡಿಪುಡಿ, ಮಡಿವಾಳರ ಇನ್ನಿತರ ನೌಕರರೂ ಉಪಸ್ಥಿತರಿದ್ದರು.