NEWSದೇಶ-ವಿದೇಶನಮ್ಮರಾಜ್ಯ

ಭಾರತೀಯ ಮಾಧ್ಯಮಗಳಲ್ಲಿ ಮೇಲ್ಜಾತಿಗಳ ಪ್ರಾಬಲ್ಯ: ಸಮೀಕ್ಷೆಯಿಂದ ಬಹಿರಂಗ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ‘ಭಾರತೀಯ ಮಾಧ್ಯಮಗಳ ಉನ್ನತ ಸ್ಥಾನಗಳಲ್ಲಿ ಶೇ 90ರಷ್ಟು ಮೇಲ್ಜಾತಿಯವರೇ ಇದ್ದಾರೆ. ದಲಿತ ಅಥವಾ ಆದಿವಾಸಿಗೆ ಸೇರಿದ ಒಬ್ಬರೂ ಈ ಸ್ಥಾನದಲ್ಲಿಲ್ಲ’ ಎಂದು ಹೊಸ ಸಮೀಕ್ಷಾ ವರದಿಯು ತಿಳಿಸಿದೆ.

‘ನಮ್ಮ ಸುದ್ದಿಯನ್ನು ಯಾರು ತಿಳಿಸುತ್ತಿದ್ದಾರೆ ಎಂಬುದೂ ಮುಖ್ಯ: ಭಾರತೀಯ ಮಾಧ್ಯಮಗಳಲ್ಲಿ ನಿರ್ಲಕ್ಷ್ಯಿತ ಜಾತಿಗಳಿಗೆ ಪ್ರಾತಿನಿಧ್ಯ ‘ ವಿಷಯವನ್ನು ಕುರಿತ ಸಮೀಕ್ಷೆಯ ಎರಡನೇ ಆವೃತ್ತಿಯನ್ನು ಆಕ್ಸ್‌ಫಮ್ ಇಂಡಿಯಾ -ನ್ಯೂಸ್‌ ಲಾಂಡ್ರಿ ಸಂಸ್ಥೆಯು ದಕ್ಷಿಣ ಭಾರತದ ಅತಿದೊಡ್ಡ ಸುದ್ದಿ ಮಾಧ್ಯಮ ವೇದಿಕೆ ‘ದ ಮೀಡಿಯಾ ರಂಬಲ್‌’ನಲ್ಲಿ ಬಿಡುಗಡೆ ಮಾಡಿದೆ.

ಈ ವರದಿಯ ಪ್ರಕಾರ, ಮುದ್ರಣ, ಟಿ.ವಿ., ಡಿಜಿಟಲ್ ಮೀಡಿಯಾ ಸಂಸ್ಥೆಗಳ ಉನ್ನತ ಸ್ಥಾನಗಳಲ್ಲಿ ಶೇ 90ರಷ್ಟು ಸಾಮಾನ್ಯ ವರ್ಗ ಪ್ರತಿನಿಧಿಸುವ ಮೇಲ್ಜಾತಿಯವರೇ ಇದ್ದಾರೆ. ಪರಿಶಿಷ್ಟ ಜಾತಿ (ಎಸ್‌ಸಿ), ಪಂಗಡದ (ಎಸ್‌ಟಿ) ಒಬ್ಬರೂ ಇಲ್ಲ.

ಹಿಂದಿ ಮತ್ತು ಇಂಗ್ಲಿಷ್ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವ 5 ಲೇಖನಗಳಲ್ಲಿ ಮೂರನ್ನು ಮೇಲ್ಜಾತಿಯವರೇ ಬರೆದಿರುತ್ತಾರೆ. ಒಂದನ್ನು ನಿರ್ಲಕ್ಷ್ಯಿತ ಜಾತಿಗಳನ್ನು (ಎಸ್‌ಸಿ., ಎಸ್‌ಟಿ., ಒಬಿಸಿ) ಪ್ರತಿನಿಧಿಸಿರುವವರು ಬರೆದಿರುತ್ತಾರೆ.

ವೃತ್ತಪತ್ರಿಕೆಗಳು, ಟಿ.ವಿ. ನ್ಯೂಸ್‌ ಚಾನಲ್‌ಗಳು, ವೆಬ್‌ಸೈಟ್‌ಗಳು, ನಿಯತಕಾಲಿಕೆಗಳು ಒಳಗೊಂಡು 121 ಸುದ್ದಿಮನೆಗಳಲ್ಲಿ ಪ್ರಧಾನ ಸಂಪಾದಕ, ವ್ಯವಸ್ಥಾಪಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೊ ಮುಖ್ಯಸ್ಥರು, ಇನ್‌ಪುಟ್/ಔಟ್‌ಪುಟ್‌ ಎಡಿಟರ್‌ಗಳ 121 ಸ್ಥಾನಗಳ ಪೈಕಿ 106 ಸ್ಥಾನಗಳಲ್ಲಿ ಮೇಲ್ಜಾತಿಯವರೇ ಇದ್ದಾರೆ. ಹಿಂದುಳಿದ ವರ್ಗಗಳ ಐವರು, ಅಲ್ಪಸಂಖ್ಯಾತ ಸಮುದಾಯದ 6 ಮಂದಿ ಇದ್ದಾರೆ. ನಾಲ್ವರ ಜಾತಿಯ ಗುರುತು ತಿಳಿದುಬಂದಿಲ್ಲ.

ನ್ಯೂಸ್ ಚಾನಲ್‌ಗಳ ಚರ್ಚೆ ನಡೆಸಿಕೊಡುವ ಆಯಂಕರ್‌ಗಳಲ್ಲಿ ಪ್ರತಿ ನಾಲ್ವರಲ್ಲಿ ಮೂವರು ಮೇಲ್ಜಾತಿಯವರು. ಹಿಂದಿ ಚಾನಲ್‌ಗಳಲ್ಲಿ 40, ಇಂಗ್ಲಿಷ್ ಚಾನಲ್‌ಗಳಲ್ಲಿ 47 ಮಂದಿ ಆಯಂಕರ್‌ಗಳು ಇದ್ದಾರೆ. ದಲಿತ, ಆದಿವಾಸಿ, ಒಬಿಸಿಯ ಒಬ್ಬರೂ ಆಯಂಕರ್‌ಗಳಿಲ್ಲ.

ನ್ಯೂಸ್‌ ವೆಬ್‌ಸೈಟ್‌ಗಳಲ್ಲಿ ಹೆಸರಿನ ಜೊತೆಗೆ ಪ್ರಕಟವಾಗುವ ಶೇ 72 ಲೇಖನಗಳ ಬರಹಗಾರರು ಮೇಲ್ಜಾತಿಯವರು. ಸಮೀಕ್ಷೆಗೆ ಒಳಪಡಿಸಿದ 12 ನಿಯತಕಾಲಿಕಗಳ ಮುಖಪುಟಗಳ 972 ಲೇಖನಗಳಲ್ಲಿ 10 ಲೇಖನಗಳ ವಿಷಯ ಜಾತಿಗೆ ಸಂಬಂಧಿಸಿದ್ದಾಗಿತ್ತು.

43 ವೃತ್ತಪತ್ರಿಕೆಗಳು, ಟಿ.ವಿ, ಡಿಜಿಟಲ್‌ ಮಾಧ್ಯಮ ಸಂಸ್ಥೆಗಳು, ಅವುಗಳು ಪ್ರಕಟಿಸಿದ ವರದಿಗಳು, ಪ್ರಮುಖ ಸ್ಥಾನಗಳಲ್ಲಿ ಇರುವವರ ಸಾಮಾಜಿಕ ಸ್ಥಿತಿಯನ್ನು ಆಧರಿಸಿದೆ. 2,075 ಪ್ರೈಮ್‌ಟೈಂ ಚರ್ಚೆಗಳು, 76 ಆಯಂಕರ್‌ಗಳ ಜಾತಿ, ಚರ್ಚೆಗಳಲ್ಲಿ ಪಾಲ್ಗೊಂಡಿದ್ದ 3,318 ಜನರ ಜಾತಿ, 12 ತಿಂಗಳ ಅವಧಿಯ ಆನ್‌ಲೈನ್‌ ಸುದ್ದಿ ಪ್ರಸಾರ, ಏಪ್ರಿಲ್‌ 2021 ಮತ್ತು ಮಾರ್ಚ್ 2022 ನಡುವೆ ನಿಯತಕಾಲಿಕೆಗಳು, ವೃತ್ತಪತ್ರಿಕೆಗಳಲ್ಲಿ ಪ್ರಕಟವಾದ 20,000 ಲೇಖನಗಳನ್ನು ಸಮೀಕ್ಷೆಯು ಆಧರಿಸಿದೆ.

ಸುದ್ದಿಗೆ ನೀಡಲಾದ ಪ್ರಾಮುಖ್ಯತೆ, ಆಯ್ಕೆ ಮಾಡಿಕೊಂಡಿರುವ ವಿಷಯ ವಸ್ತು, ಆಯಂಕರ್‌ಗಳು ಮತ್ತು ಚರ್ಚೆಗಳಲ್ಲಿ ಭಾಗಿಯಾದವರ ಸಾಮಾಜಿಕ ಸ್ಥಿತಿಯನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

ಆಕ್ಸ್‌ಫಮ್‌ ಇಂಡಿಯಾದ ಸಿಇಒ ಅಮಿತಾಬ್ ಬೆಹರ್ ಅವರು, ಮೂರು ವರ್ಷಗಳಲ್ಲಿ ಬಿಡುಗಡೆ ಆಗುತ್ತಿರುವ ನಮ್ಮ ಎರಡನೇ ವರದಿಯಿಂದ ಸುದ್ದಿಮನೆಗಳಲ್ಲಿ ನಿರ್ಲಕ್ಷ್ಯಿತ ವರ್ಗಗಳು ಸೇರ್ಪಡೆ ಆಗಿಲ್ಲ ಎಂಬುದು ತಿಳಿಯಲಿದೆ. ಮಾಧ್ಯಮ ಸಂಸ್ಥೆಗಳ ಪ್ರಮುಖರು ಸುದ್ದಿಮನೆಗಳಲ್ಲಿ ದಲಿತರು, ಆದಿವಾಸಿಗಳ, ಬಹುಜನರು ಇರಬಹುದಾದ ವಾತಾವರಣ ಸೃಷ್ಟಿಸಲು ವಿಫಲವಾಗಿದ್ದಾರೆ’ ಎಂದರು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ