NEWSದೇಶ-ವಿದೇಶವಿಶೇಷ

ISRO ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್ ಡೌನ್ ಶುರು

ವಿಜಯಪಥ ಸಮಗ್ರ ಸುದ್ದಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಇಂದು (ಶುಕ್ರವಾರ) ಮಧ್ಯಾಹ್ನ 2:35ಕ್ಕೆ ಗಗನನೌಕೆ ನಭಕ್ಕೆ ಚಿಮ್ಮಲಿದೆ.

ಚಂದ್ರಯಾನ-3 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆ ಮಾಡಲಾಗುವುದು. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಗಗನನೌಕೆಯನ್ನು ಇಳಿಸಲಾಗುವುದು.

ಈ ಮೂಲಕ ನಮ್ಮ ಹೆಮ್ಮೆಯ ಇಸ್ರೋ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಜತೆಗೆ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. ಬಾಹುಬಲಿ ಎಂದೇ ಖ್ಯಾತಿಯಾಗಿರುವ ರಾಕೆಟ್ LVM-III (Launch Vehicle Mark-III) ಪ್ರೊಪುಲ್ಷನ್ ಮಾಡ್ಯೂಲ್, ಲ್ಯಾಂಡರ್​ ಮತ್ತು ರೋವರ್​​ಗಳನ್ನು ಹೊತ್ತು ನಭಕ್ಕೆ ಚಿಮ್ಮಲಿದೆ.

45 ರಿಂದ 48 ದಿನಗಳ ಸುದೀರ್ಘ ಜರ್ನಿ ಬಳಿಕ ಪ್ರಫುಲ್ಷನ್ ಮಾಡ್ಯೂಲ್​​ನಿಂದ ಬೇರ್ಪಟ್ಟು ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಸಾಫ್ಟ್​ ಲ್ಯಾಂಡಿಂಗ್ ಆಗಲಿದೆ. ಈ ಮೂಲಕ ಭಾರತದ ವಿಜ್ಞಾನಿಗಳು ಸಂಶೋಧನಾ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆಯಲಿದ್ದಾರೆ.

ಲ್ಯಾಂಡರ್ ವಿಕ್ರಂ: ಈ ಲ್ಯಾಂಡರ್​​ಗೆ ಕಳೆದ ಬಾರಿಯಂತೆ ವಿಕ್ರಂ ಎಂದು ಹೆಸರು ಇಡಲಾಗಿದೆ. ಇದು ಚಂದ್ರನ ಮೇಲ್ಮೈ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಆದ ಮೇಲೆ ತನ್ನೊಳಗೆ ಇರುವ ರೋವರ್​​ ಅನ್ನು ಚಂದ್ರನ ಅಂಗಳಕ್ಕೆ ಇಳಿಸಲಿದೆ. ಲ್ಯಾಂಡರ್​ನಲ್ಲಿ ರಂಭಾ (RAMBHA), ChaSTE, ಇಲ್ಸಾ (ILSA), ಎಲ್​ಆರ್​ಎ ಎಂಬ ಉಪಕರಣಗಳಿವೆ.

ರಂಭಾ: (Radio Anatomy of Moon Bound Hypersensitive ionosphere and Atmosphere) ಈ ತಂತ್ರಜ್ಞಾನವು ಚಂದ್ರನಲ್ಲಿ ಪ್ಲಾಸ್ಮಾದ ಸಾಂದ್ರತೆ ಇದೆಯೇ ಎಂದು ಗುರುತಿಸಲಿದೆ. ಜತೆಗೆ ಕಾಲ ಕಾಲಕ್ಕೆ ಅದು (ಪ್ಲಾಸ್ಮಾ) ಯಾವೆಲ್ಲ ರೀತಿ ಬದಲಾಗುತ್ತದೆ ಎಂದು ತಿಳಿಸಲಿದೆ.

ChaSTE: (Chandra’s Surface Thermophysical Experiment) ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್​ಗೆ ಸಹಾಯ ಮಾಡುವ ಈ ಲ್ಯಾಂಡರ್​​ ಪ್ಲೇಲೋಡ್​ಗೆ ಚಂದ್ರನ ಮೇಲ್ಮೈನ ಥರ್ಮೋಫಿಸಿಕಲ್ ಮಾಡೆಲ್ ಅಳವಡಿಸಲಾಗಿದೆ. ಇದು ಚಂದ್ರನ ಮೇಲ್ಮೈ ತಾಪಮಾನವನ್ನು ತಿಳಿದುಕೊಳ್ಳಲಿದೆ. ಇದನ್ನು ಗುಜರಾತಿನ ಅಹ್ಮದಾಬಾದ್ ನಲ್ಲಿರುವ ಪಿಆರ್‌ಎಲ್ ಲ್ಯಾಬ್ ಸಿದ್ಧಪಡಿಸಲಾಗಿದೆ. ಚಂದ್ರನ ಕಿರಣಗಳ ಅಧ್ಯಯನಕ್ಕಾಗಿ ಪ್ಯಾಸೀವ್ ಲೇಸರ್ ರೆಟ್ರೋರೇಪ್ಲೆಕ್ಟರ್​​​ ಒತ್ತು ನೀಡಲಾಗಿದೆ.

ILSA: (Instrument for Lunar Seismic Activity) ಇದನ್ನು ಇನ್ ಸ್ಟ್ರುಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ ಅಂತಾ ಕರೆಯುತ್ತಾರೆ. ಇದು ಚಂದ್ರನ ಮೇಲ್ಮೈನ ಕಂಪನಗಳ ಬಗ್ಗೆ ಮಾಹಿತಿ ನೀಡಲಿದ್ಯಂತೆ. ಲ್ಯಾಗ್ಮುಯಿರ್ ಪ್ರೋಬ್ (Langmuir Probe): ಈ ಯಂತ್ರವನ್ನೂ ಕೂಡ ಲ್ಯಾಂಡರ್​ನಲ್ಲಿಯೇ ಅಳವಡಿಸಲಾಗಿದ್ದು, ಇದು ಚಂದ್ರನ ಮೇಲಿನ ಸಾಂದ್ರತೆ ಮತ್ತು ಅದರಲ್ಲಿನ ವ್ಯತ್ಯಾಸವನ್ನು ಪತ್ತೆಹಚ್ಚಲಿದೆ.

ರೋವರ್​​ನಲ್ಲಿ ಏನೇನಿದೆ..?: ವಿಕ್ರಂ ಲ್ಯಾಂಡ್​​ನಿಂದ ಹೊರಬರುವ ರೋವರ್​​ನಲ್ಲಿ ಎಲ್​​ಐಬಿಎಸ್ (LIBS)​, ಎಪಿಎಕ್ಸ್​​ಎಸ್ (APXS)​​ ಎಂಬ ಎರಡು ಉಪಕರಣಗಳಿವೆ. ರೊವರ್​ಗೆ ಪ್ರಗ್ಯಾನ್ ಎಂದು ಹೆಸರಿಡಲಾಗಿದೆ. ಇದರ ಜೀವಿತಾವದಿ ಭೂಮಿಯ 14 ದಿನ. ಅಂದರೆ ಚಂದ್ರನ ಒಂದು ದಿನ.

APXS (Alpha Particle X-ray): ಇದು ರೋವರ್ ಪೆಲೋಡ್​​ಗೆ ಸಂಬಂಧಿಸಿದ್ದಾಗಿದೆ. ರೋವರ್​​ನಲ್ಲಿ ಅಲ್ಫಾ ಪಾರ್ಟಿಕಲ್ ಎಕ್ಸ್ ರೇ ಸ್ಟೋಕೊಮೀಟರ್ ಮತ್ತು ಲೇಸರ್ ಇಂಡ್ಯೂಸ್ಡ್ ಬ್ರೇಕ್ಡೌನ್ ಸ್ಪೆಕ್ಟ್ರೋಸ್ಕೋಪ್ ಅಳವಡಿಕೆಯಾಗಿದೆ. ಲ್ಯಾಂಡಿಂಗ್ ಸ್ಥಳದಲ್ಲಿನ ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನಿಸಲಿದೆ. ಇನ್ನು ಪ್ರೊಪುಲ್ಷನ್ ಮಾಡೆಲ್ ಚಂದ್ರನ ಕಕ್ಷೆಯಲ್ಲಿ ಅಂದರೆ ಸುಮಾರು 100 ಕಿಲೋ ಮೀಟರ್ ದೂರವೇ ಉಳಿಯಲಿದ್ದು, ಅದರು ಉಪಗ್ರಹ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ.

LIBS: (LASER Induced Breakdown Spectroscope): ಚಂದ್ರನ ಆಳದಲ್ಲಿರುವ ಖನೀಜಗಳು, ಲೋಹಗಳನ್ನು ಪತ್ತೆ ಹಚ್ಚಲಿದೆ. ಇನ್ನು ಪ್ರಫುಲ್ಷನ್ ಮಾಡ್ಯೂಲ್, ಲ್ಯಾಂಡರ್​ಗೆ ಚಂದ್ರನ ಮೇಲ್ಮೈ ಮೇಲೆ ಇಳಿಯಲು ಸಹಾಯ ಮಾಡಲಿದೆ. ಜೊತೆಗೆ ಅದು ಚಂದ್ರನ ಸುತ್ತ ತಿರುಗುತ್ತ ಉಪಗ್ರಹವಾಗಿ ಕೆಲಸ ಮಾಡಲಿದೆ.

ಒಟ್ಟಾರೆ ನಮ್ಮ ವಿಜ್ಞಾನಿಗಳು ಚಂದ್ರಯಾನ-2ನಲ್ಲಿ ಆಗಿದ್ದ ತಪ್ಪುಗಳನ್ನು ತಿದ್ದುಕೊಂಡು ನಾಲ್ಕು ವರ್ಷಗಳ ಬಳಿಕ ಮತ್ತೆ ಇಡೀ ವಿಶ್ವವನ್ನೇ ತನ್ನತ್ತ ತಿರುಗುವಂತೆ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಒಂದು ವೇಳೆ ಚಂದ್ರನ ಅಂಗಳದಲ್ಲಿ ಲ್ಯಾಂಡರ್​ ಸುರಕ್ಷಿತವಾಗಿ ಲ್ಯಾಂಡ್ ಆದರೆ, ವಿಶ್ವದಲ್ಲಿ ಚಂದ್ರನ ಅಂಗಳಕ್ಕೆ ಸುರಕ್ಷಿತವಾಗಿ ಕಾಲಿಟ್ಟ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ದಕ್ಕಲಿದೆ. ಇದುವರೆಗೆ ರಷ್ಯಾ, ಅಮೆರಿಕ, ಚೀನಾ ಮಾತ್ರ ಇಂತಹ ಸಾಧನೆ ಮಾಡಿವೆ. ಇಸ್ರೋದ ಈ ಸಾಹಸಕ್ಕೆ ಒಳ್ಳೆಯದಾಗಲಿ.

ಇನ್ನು ISRO ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆಗಾಗಿ ಸಾವಿರಾರು ವಿಜ್ಞಾನಿಗಳು, ತಂತ್ರಜ್ಞರು ಕೆಲಸ ಮಾಡಿದ್ದು, ಸುಮಾರು 600 ಕೋಟಿ ರೂ.ಗಳ ವೆಚ್ಚದಲ್ಲಿ ಇದನ್ನು ಸಿದ್ಧಗೊಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು