ಗದಗ: ಪ್ರಾಂಶುಪಾಲರ ಮೊಬೈಲ್ ಕಳ್ಳತನ ಮಾಡಿದ್ದಲ್ಲದೇ ದುಷ್ಕರ್ಮಿಗಳು ಅದೇ ಮೊಬೈಲ್ನ ಆನ್ಲೈನ್ ಆ್ಯಪ್ ಮೂಲಕ 1.40 ಲಕ್ಷ ರೂ.ಗಳನ್ನು ರ್ಗಾವಣೆ ಮಾಡಿಕೊಂಡಿದ್ದಾರೆ.
ಈ ಘಟನೆ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಪ್ರಾಂಶುಪಾಲರಾದ ಶ್ರೀಕಾಂತ ಕೃಷ್ಣಾಜಿ ಜೋಷಿ ಅವರು ಎಂದಿನಂತೆ ಕಾಲೇಜಿಗೆ ತೆರಳುತ್ತಿದ್ದರು. ಈ ವೇಳೆ ನರಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು 20 ಸಾವಿರ ರೂ. ಮೌಲ್ಯದ ಮೊಬೈಲನ್ನು ಪ್ರಾಂಶುಪಾಲರ ಜೇಬಿನಿಂದ ಕದ್ದಿದ್ದಾರೆ.
ಬಳಿಕ ಮೊಬೈಲ್ನಲ್ಲಿದ್ದ ಎಸ್ಬಿಐ ಖಾತೆಯ ಯುಪಿಐ ಬಳಸಿಕೊಂಡು ಬರೋಬ್ಬರಿ 1 ಲಕ್ಷದ 40 ಸಾವಿರ ರೂ.ಗಳನ್ನು ತಮ್ಮ ಅಕೌಂಟ್ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಮೊದಲು 75 ಸಾವಿರ ರೂ. 50 ಸಾವಿರ ರೂ. ಹಾಗೂ 15 ಸಾವಿರ ರೂ. ಎಂಬಂತೆ ಒಟ್ಟು ಮೂರು ಹಂತದಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
ಪ್ರಾಂಶುಪಾಲರ ಎಸ್ಬಿಐ ಖಾತೆಯಿಂದ ಹಣವನ್ನು ಖದೀಮರು ಅಕೌಂಟ್ಗೆ ಹಾಕಿಕೊಂಡಿದ್ದು, ಸದ್ಯ ಈ ಸಂಬಂಧ ಆರೋಪಿಗಳನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.