VIJAYAPATHA.IN > ವಿಜಯಪಥ > NEWS > ನಮ್ಮಜಿಲ್ಲೆ > KKRTC ಕೊಪ್ಪಳ ಘಟಕಕ್ಕೆ RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು
KKRTC ಕೊಪ್ಪಳ ಘಟಕಕ್ಕೆ RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು
HardikrajdNovember 20, 2024
ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ಘಟಕಕ್ಕೆ ಭೇಟಿ ನೀಡಿದ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (RTO) ತಂಡ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿತು.
ಬಳಿಕ ಸಂಸ್ಥೆಯ ಎಲ್ಲ ಬಸ್‌ಗಳಿಗೆ ಅಂಟಿಸಲಾಯಿತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿಕಾಂತ ಭೀ ನಾಲವಾರ, ವಿಭಾಗೀಯ ನಿಯಂತ್ರಣ ಅಧಿಕಾರಿ ಎಂ.ವೆಂಕಟೇಶ್ ಅವರಿಗೆ ಪೋಸ್ಟರ್‌ಗಳನ್ನು ಈ ತಂಡ ಹಸ್ತಾಂತರಿಸಿತು.
ಈ ಸಂದರ್ಭದಲ್ಲಿ ಘಟಕದ ಎಲ್ಲ ಮೆಕ್ಯಾನಿಕ್‌ಗಳು, ಚಾಲಕರು ಮತ್ತು ನಿರ್ವಾಹಕರಿಗೆ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ಹಾಗೂ ಅದರ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
ವಿಭಾಗಿಯ ಸಂಚಾರ ಅಧಿಕಾರಿ ಜಾಧವ್, ವಿಭಾಗಿಯ ತಾಂತ್ರಿಕ ಶಿಲ್ಪಿ ಅಶ್ರಫ್ ಅಲಿ, ಘಟಕ ವ್ಯವಸ್ಥಾಪಕ ಪಿ.ಬಿ.ಭಟ್ಟೂರ ಮತ್ತು ಹಿರಿಯ ಮೋಟಾರು ವಾಹನ ನಿರೀಕ್ಷಕ ವಿನಾಯಕ ನಾಯಕ್, ಘಟಕದ ಸಹಾಯಕ ಸಿಬ್ಬಂದಿ ಸಂತೋಷ್ ಉಪಸ್ಥಿತರಿದ್ದರು.
Related
Hardikrajd