NEWSನಮ್ಮಜಿಲ್ಲೆನಮ್ಮರಾಜ್ಯ

KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳು ಸೇವೆಯಲ್ಲಿರುವಾಗ ಅಪಘಾತ ಅಥವಾ ಸ್ವಾಭಾವಿಕವಾಗಿ ಮರಣ ಹೊಂದಿದಲ್ಲಿ ಕುಟುಂಬದವರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ, ಕೆನರಾ ಬ್ಯಾಂಕ್‌ನಲ್ಲಿ ನಮ್ಮ ಸಂಸ್ಥೆಯ ವೇತನ ಖಾತೆದಾರರಿಗೆ Premium Payrol Package ಯೋಜನೆಯಡಿಯಲ್ಲಿ ಅಪಘಾತ ವಿಮೆ ಮತ್ತು ಇತರೇ ಸೌಲಭ್ಯಗಳನ್ನು ನೀಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಇದು ನಿಗಮದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಹಗಲಿರಳು ಶ್ರಮಿಸುತ್ತಿರುವ ಸಿಬ್ಬಂದಿಗಳಿಗಾಗಿ ನಿಗಮದಿಂದ ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಉದ್ದೇಶದಿಂದಲೇ 29-11-2024ರಂದು ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಈ ಒಡಂಬಡಿಕೆ ಅನ್ವಯ ಕೆನರಾ ಬ್ಯಾಂಕ್‌ನ ವೇತನ ಖಾತೆದಾರರಿಗೆ 1 ಕೋಟಿ ರೂಪಾಯಿ ಅಪಘಾತ ವಿಮೆ ಮೊತ್ತವನ್ನು ಹಾಗೂ ಇತರೇ ಸೌಲಭ್ಯಗಳನ್ನು ಮಾಸಿಕ ನಿವ್ವಳ ವೇತನ ಅನುಸಾರ ಈ ಕೆಳಕಂಡಂತೆ ವಿಂಗಡಿಸಲಾಗಿದೆ.

Silver Up to Rs:50,000/-PM Gross Salary.
Gold Rs.50,000/- To Rs:1,00,000/-PM Gross Salary.
Diamond: 1,00,000/- Το 1,50,000/-
Platinum: Above Rs:1,50,000/-PM Gross Salary.

Premium Payroll Package  ಯೋಜನೆಯಡಿ ದೊರಕುವ ಇತರೇ ಹೆಚ್ಚುವರಿ ಸೌಲಭ್ಯಗಳು:

1. ಖಾತೆದಾರರ ಕಟುಂಬ ಸದಸ್ಯರಿಗೆ ಉಚಿತ ಶೂನ್ಯ ಬ್ಯಾಲೆನ್ಸ್ ಖಾತೆಗಳ ಸೌಲಭ್ಯ (Silver ಖಾತೆದಾರರನ್ನು ಹೊರತುಪಡಿಸಿ.)

2. ಎಲ್ಲ ಖಾತೆದಾರರು ATM ಮೂಲಕ ಪ್ರತಿ ದಿನ 1 ಲಕ್ಷ ರೂ. ಹಣವನ್ನು ಶುಲ್ಕವಿಲ್ಲದೇ ಪಡೆಯಬಹುದು.

3. ಎಲ್ಲಾ ಖಾತೆದಾರರು ಸಂಪರ್ಕರಹಿತ NFC ಮೂಲಕ ಪ್ರತಿ ದಿನ 25.000 ರೂ..ಗಳ ವರ್ಗಾವಣೆ ಸೌಲಭ್ಯ ಹಾಗೂ ಎಲ್ಲ ಖಾತೆದಾರರಿಗೆ ಉಚಿತ 200 ಎಲೆಗಳ ಚೆಕ್‌ಬುಕ್‌ ಸೌಲಭ್ಯ

ಮೇಲ್ಕಂಡ ಸೌಲಭ್ಯಗಳ ಜತೆಗೆ ಇತರೇ ಸೌಲಭ್ಯಗಳು ವಿವರವನ್ನು Annexure-1 ರಂತೆ ಅಡಕಗೊಳಿಸಿದೆ.

ಷರತ್ತುಗಳು: 1. ಈ ಯೋಜನೆ ಅಡಿ ಅಪಘಾತ ವಿಮಾ ಸೌಲಭ್ಯವನ್ನು ಪಡೆಯಲು ಇರುವ ನಿಬಂಧನೆಗಳ ವಿವರಗಳನ್ನು ನಮೂನೆಯನ್ನು Annexure -1 ರಲ್ಲಿ ನೀಡಲಾಗಿದೆ.

2. PayRool Packge ಖಾತೆದಾರರು ಬೇರೆ ಬ್ಯಾಂಕ್‌ಗಳಲ್ಲಿ ತನ್ನ ವೇತನದ ಖಾತೆಯನ್ನು ತೆರೆಯಲು ಇಚ್ಛಿಸಿದಲ್ಲಿ, ಕೆನರಾ ಬ್ಯಾಂಕ್‌ನಿಂದ ಆಕ್ಷೇಪಣಾರಹಿತ ದೃಢೀಕರಣ ಪತ್ರವನ್ನು Annexure -2 ರಂತೆ ಪಡೆಯಬಹುದು. ನಂತರ ಅವರ ಬ್ಯಾಂಕ್ ಖಾತೆಯು ಸಾಮಾನ್ಯ ಉಳಿತಾಯ ಖಾತೆಯಾಗಿ ಬದಲಾಗುವುದು.

3. ಅಪಘಾತ ನಡೆದ ದಿನಾಂಕದ ಹಿಂದಿನ 04 ತಿಂಗಳಲ್ಲಿ ನಿರಂತರವಾಗಿ ಅವರ ವೇತನವು Pay Rool Packge ಬ್ಯಾಂಕ್ ಖಾತೆಗೆ ಜಮಾ ಆಗಿರಬೇಕು. ಒಂದು ವೇಳೆ ವೇತನವು ಜಮಾ ಆಗದೇ ಇದ್ದ ಪಕ್ಷದಲ್ಲಿ ಅವರ ಬ್ಯಾಂಕ್ ಖಾತೆಯು ಸಾಮಾನ್ಯ ಉಳಿತಾಯ ಖಾತೆಯಾಗಿ ಬದಲಾಗುವುದು ಮತ್ತು ಅವರು ಈ ಮೇಲ್ಕಂಡ ವಿಮಾ ಹಾಗೂ ಇತರೇ ಸೌಲಭ್ಯಗಳಿಗೆ ಅರ್ಹರಿರುವುದಿಲ್ಲ.

4. ಬ್ಯಾಂಕ್‌ನವರಿಗೆ ಅಪಘಾತ ನಡೆದ 90 ದಿನಗಳ ಒಳಗೆ ಅಪಘಾತದ ಮಾಹಿತಿಯನ್ನು ನೀಡಬೇಕಿರುತ್ತದೆ. ಕ್ಷೇಮ ಅನ್ನು ಪೂರಕ ದಾಖಲೆಗಳೊಂದಿಗೆ 180 ದಿನಗಳ ಒಳಗೆ ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗಾಗಿ, ಒಡಂಬಡಿಕೆ ಪತ್ರ ಹಾಗೂ Annexure-I To  Annexure-7 ಅನ್ನು ನೋಡುವಂತೆ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಅಲ್ಲದೆ ಎಲ್ಲ ಇಲಾಖಾ/ ವಿಭಾಗೀಯ ನಿಯಂತ್ರಣಾಧಿಕಾರಿಯವರ ಮಾಹಿತಿಗಾಗಿ ಹಾಗೂ ಈ ಯೋಜನೆ ಕುರಿತು ಎಲ್ಲ ಸಿಬ್ಬಂದಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ