CRIMENEWSನಮ್ಮಜಿಲ್ಲೆ

KKRTC: ಬಸ್‌ ಕಂದಕಕ್ಕೆ ಉರುಳಿ ಇಬ್ಬರಿಗೆ ಗಾಯ- ತಪ್ಪಿದ ಭಾರಿ ಅನಾಹುತ

ವಿಜಯಪಥ ಸಮಗ್ರ ಸುದ್ದಿ

ಔರಾದ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಪಲ್ಟಿಯಾಗಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಔರಾದ್ ತಾಲೂಕಿನ ಜಮಲಾಪುರ ಕ್ರಾಸ್ ಬಳಿ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ.

ಔರಾದ್ ಘಟಕಕ್ಕೆ ಸೇರಿದ KA 38, F0882 ಬಸ್ ಔರಾದ್‌ದಿಂದ ಭಾಲ್ಕಿಗೆ ತೆರಳುತ್ತಿದ್ದ ವೇಳೆ ಕಮಲನಗರ ರಸ್ತೆಯಲ್ಲಿ ಈ ಘಟನೆ ಜರುಗಿದೆ.

ಎದುರಿನಿಂದ ಬರುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಯವ ವೇಳೆ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಬಸ್ ಉರುಳಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಖಂಡೇಕೆರಿ ಗ್ರಾಮದ ವೃದ್ಧ ಸೋಪನರಾವ್ ಬಿರಾದಾರ ಹಾಗೂ ವಿದ್ಯಾರ್ಥಿ ನರಸಿಂಗ್ ಬಿರಾದಾರ ಗಾಯಗೊಂಡಿದ್ದು, ಅವರನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಬಸ್‌ನಲ್ಲಿ 9 ಜನ ಪ್ರಯಾಣಿಸುತ್ತಿದ್ದರು. ಇಬ್ಬರಿಗೆ ಗಾಯವಾಗಿದೆ. ಉಳಿದ ಎಲ್ಲರೂ ತರಚಿದ ಗಾಯಗಳೊಂದಿಗೆ ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಔರಾದ್ ಘಟಕ ವ್ಯವಸ್ಥಾಪಕ ರಾಜೇಂದ್ರ ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ಮಾಗಿಹಿ ನೀಡಿದರು.

Megha
the authorMegha

Leave a Reply

error: Content is protected !!