NEWSನಮ್ಮಜಿಲ್ಲೆನಮ್ಮರಾಜ್ಯ

KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಇಂಡಿ: ನಾನು ಭಿಮಾತೀರದವನು ನನಗೆ ಭೀಮಾತೀರದ ಎಲ್ಲ ರೌಡಿಗಳು ಪರಿಚಯವಿದ್ದಾರೆ ನೀವು ಏನಾದರೂ ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ಜೀವ ಬೇದರಿಕೆ ಹಾಕಿದ್ದ ಇಂಡಿ ಘಟಕದ ವ್ಯವಸ್ಥಾಪಕ ಸಂಗನಗೌಡ ಬಿರಾದಾರ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಕಳೆದ ಅಕ್ಟೋಬರ್‌ 19ರಂದು ಡಿಎಂ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವಿಜಯಪಥ “KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ – ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ” ಶೀರ್ಷಿಕೆಯಡಿ ಸಮಗ್ರವಾದ ವರದಿ ಮಾಡಿತ್ತು.

ವಿಜಯಪಥ ಮೀಡಿಯಾದಲ್ಲಿ ವರದಿ ಬಂದಿದ್ದರಿಂದ ಅಧಿಕಾರಿಗಳು ತನಿಖೆ ನಡೆಸಿದ್ದು, ಡಿಎಂ ವಿರುದ್ಧ ದಾಖಲಾಗಿರುವ ದೂರು ಮೇಲ್ನೋಟಕ್ಕೆ ಸತ್ಯವಾಗಿದೆ ಎಂದು ತಿಳಿದ ಅಧಿಕಾರಿಗಳು ಇಂಡಿ ಘಟಕದಿಂದ ವಿಜಯಪುರ ಘಟಕ-1ಕ್ಕೆ ವರ್ಗಾವಣೆ ಮಾಡಿ ನಿನ್ನೆ ಅಂದರೆ ನ.7ರಂದು ಆದೇಶ ಹೊರಡಿಸಿದ್ದಾರೆ.

ವಿಜಯಪುರ ವಿಭಾಗದ ಕೂಟದ ಗೌರವ ಅಧ್ಯಕ್ಷ ಯಾಕೂಬ ನಾಟಿಕಾರ ಅವರು ಕೂಡ ಭ್ರಷ್ಟ ಡಿಎಂ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹ ಮಾಡಿದ್ದರು.

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿ ಇಂಡಿ ಘಟಕದ ಘಟಕ ವ್ಯವಸ್ಥಾಪಕರನ್ನು ಭ್ರಷ್ಟಾಚಾರದ ಆರೋಪದ ಮೇಲೆ ವರ್ಗಾವಣೆ ಮಾಡಿರುವುದಕ್ಕೆ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅವರಿಗೆ ಹಾಗೂ ವಿಜಯಪಥ ಮೀಡಿಯಾಗೆ ನಾಟಿಕಾರ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ – ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ

Leave a Reply

error: Content is protected !!
LATEST
KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ ಸಿಎಂ ಸ್ವಕ್ಷೇತ್ರ ರಂಗಸಮುದ್ರ ಸ್ಮಶಾನ ಭೂಮಿ ಮೇಲು ಬಿದ್ದ ವಕ್ಫ್‌ ಕಣ್ಣು- ಪಹಣಿಯಲ್ಲಿ 2021-22ರಿಂದ ವಕ್ಫ್‌ ಬೋರ್ಡ್ ಹ... BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ”