NEWSನಮ್ಮಜಿಲ್ಲೆನಮ್ಮರಾಜ್ಯ

KSRTC ವಾಹನ ಸ್ವಂತಕ್ಕೆ ಮತ್ತೇ ಬಳಸಿ ಕುಟುಂಬ ಸಹಿತ  ಪ್ರವಾಸ ಮಾಡಿ ಬಂದ ಕೋಲಾರ ಡಿಟಿಒ !

ವಿಜಯಪಥ ಸಮಗ್ರ ಸುದ್ದಿ

ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೋಲಾರ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ (ಡಿಟಿಒ) ಎಂ.ಬಿ.ಜೈಶಾಂತಕುಮಾರ್‌ ಅವರು ಮತ್ತೆ ಸ್ವಂತಕ್ಕೆ ಇಲಾಖಾ ವಾಹನ ಬಳಸಿಕೊಂಡು ಸುತ್ತೋಲೆ ಸಂಖ್ಯೆ 782/2018-19ನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇಲಾಖಾ ವಾಹನವನ್ನು ಸ್ವಂತಕ್ಕೆ ಬಳಸಿಕೊಳ್ಳುವುದನ್ನೇ ಹವ್ಯಾಸ ಮಾಡಿಕೊಂಡಿದ್ದು, ಈ ಮೂಲಕ ಪದೇಪದೆ ನಿಗಮದ ಸುತ್ತೋಲೆ ಉಲ್ಲಂಘನೆ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಅದಕ್ಕೆ ನಿದರ್ಶನ ಎಂಬಂತೆ ಈ ಹಿಂದೆಯೂ ವಿವಾಹ ಸಮಾರಂಭವೊಂದಕ್ಕೆ ಹೋಗಲು ಇಲಾಖಾ ವಾಹನ ಬಳಸಿಕೊಂಡಿದ್ದರು.

ಈ ನಿಗಮದ ಸಿಬ್ಬಂದಿಯೊಬ್ಬರು ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲೆ ಸಹಿತ ದೂರು ನೀಡಿ ಕ್ರಮಕ್ಕೆ ಆಗ್ರಿಸಿದ್ದರು. ಆದರೆ, ಮೇಲಧಿಕಾರಿಗಳು ಈವರೆಗೂ ಯಾವುದೇ ಕ್ರಮ ತೆಗೆದುಕೊಂಡುಲ್ಲ. ಹೀಗಾಗಿ ಮತ್ತೆ ಹಳೇ ಚಾಳಿಯನ್ನೇ ಡಿಟಿಒ ಮುಂದುವರಿಸಿದ್ದು ಸಂಸ್ಥೆಗೆ ಆರ್ಥಿಕ ನಷ್ಟವನ್ನುಂಟು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ದಾಖಲೆ ಸಹಿತ ಕೊಟ್ಟಿದ್ದ ದೂರು: 07-09-2022 ರಂದು ಎಚ್.ಕ್ರಾಸ್ ಬಳಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಡಿಟಿಒಗೆ ಕಾಯ್ದಿರಿಸಿದ ಬೋಲೆರೊ ವಾಹನ ಸಂಖ್ಯೆ : ಕೆಎ57 ಎಫ್ 3922 ಮತ್ತು ತನಿಖಾ ಮಾರ್ಗಕ್ಕೆ ನಿಯೋಜಿಸಿದ ಬೋಲೆರೊ ವಾಹನ ಸಂಖ್ಯೆ : ಕೆಎ57 ಎಫ್ 2600 ವಾಹನದಲ್ಲಿ ಸುಬ್ರಮಣಿ ಸಂಚಾರ ನಿಯಂತ್ರಕರು ಮತ್ತು ಗೋಪಾಲಗೌಡ ಕಿರಿಯ ಸಹಾಯಕ, ಚಾಲಕ ಜಗದೀಶ ಅವರನ್ನು ಒಳಗೊಂಡ ವಾಹನಗಳನ್ನು ಎಚ್.ಕ್ರಾಸ್‌ನಲ್ಲಿ ಇರುವ ಕಲ್ಯಾಣ ಮಂಟಪವೊಂದರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಿಲ್ಲಿಸಿ ಸಮಾರಂಭದಲ್ಲಿ ಪಾಲ್ಗೊಂಡಿದರು.

ತನಿಖಾ ಮಾರ್ಗಕ್ಕೆ ನಿಯೋಜಿಸಿದ ಬೋಲೆರೋ ವಾಹನ ( ಕೆಎ57 ಎಫ್ 2600) ದಲ್ಲಿ ತನಿಖಾಧಿಕಾರಿಗಳಿಗೆ ಯಾವ ಮಾರ್ಗದಲ್ಲಿ(ROUTE PROGRAMME) ಕರ್ತವ್ಯ ನಿರ್ವಹಿಸಬೇಕೆಂದು ಹಿರಿಯ ಅಧಿಕಾರಿಗಳ ಆದೇಶವಿತ್ತು. ಈ ಮಾರ್ಗಕ್ಕೆ ನಿಯೋಜಿಸಿದ ತನಿಖಾ ಸಿಬ್ಬಂದಿಗಳನ್ನು ಮತ್ತು ತನಿಖೆ ಮಾರ್ಗದ ಆದೇಶ ಪತ್ರವನ್ನು ಪರಿಶೀಲಿಸಿ. ನಿಗಮದ ವಾಹನಗಳನ್ನು ದುರುಪಯೋಗ ಮಾಡಿಕೊಂಡ ಸಿಬ್ಬಂದಿಗಳ ವಿರುದ್ಧ ಶಿಸ್ತು ಮತ್ತು ನಡೆತೆ ಕಾಯ್ದೆಯಡಿ ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ಡಿಸಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಬ್ಬಂದಿಯೊಬ್ಬರು ದೂರು ನೀಡಿದ್ದಾರೆ.

ಅಲ್ಲದೆ ನಾನು ಸಂಸ್ಥೆಯ ಒಬ್ಬ ಜವಾಬ್ದಾರಿಯುತ ನೌಕರನಾಗಿದ್ದು ಸಂಸ್ಥೆಯ ವಾಹನಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಕಂಡು ಕೇಂದ್ರ ಕಚೇರಿಯ ನಿಯಂತ್ರಣ ಕೊಠಡಿಗೂ ದೂರವಾಣಿ ಮುಖಾಂತರ ದೂರು ಕೊಟ್ಟಿರುತ್ತೇನೆ. ಮುಖ್ಯ ಭದ್ರತಾ ಮತ್ತು ಜಾಗೃತಾ ಅಧಿಕಾರಿ, ಕೇಂದ್ರ ಕಚೇರಿ, ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕೋಲಾರ. ಇವರಿಗೂ ಸಹ ದೂರವಾಣಿ ಮುಖಾಂತರ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಸಂಸ್ಥೆಯ ವಾಹನಗಳನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ತಕ್ಷಣವೇ ಮಾಹಿತಿ ನೀಡಿದ್ದೆ. ಆದರೆ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ಕ್ರಮ ತೆಗೆದುಕೊಳ್ಳ ಪರಿಣಾಮ ಇತ್ತೀಚೆಗೆ ಮತ್ತೆ ಅದೇ ವಾಹನವನ್ನು ಸ್ವಂತಕ್ಕೆ ಬಳಸಿಕೊಂಡು ಕುಟುಂಬವರು ಮತ್ತು ಸಂಬಂಧಿಕರೊಂದಿಗೆ ಪ್ರವಾಸ ಮಾಡುವ ಮೂಲಕ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಈ ಹಿಂದೆಯೇ ಇವರ ವಿರುದ್ಧ ಸಂಸ್ಥೆಯ ನಿಯಮಗಳ ಪ್ರಕಾರ ಶಿಸ್ತು ಕ್ರಮ ಕೈಗೊಂಡಿದ್ದರೆ ಒಬ್ಬ ಅಧಿಕಾರಿಯಾಗಿ ಮತ್ತೆ ಈ ತಪ್ಪು ಮಾಡುತ್ತಿರಲಿಲ್ಲ.

ಸಂಸ್ಥೆಗೆ ಸಂಬಂಧಪಡದ ವ್ಯಕ್ತಿಗಳನ್ನು ಸಂಸ್ಥೆಯ ವಾಹನದಲ್ಲಿ ಕೂರಿಸಿಕೊಂಡು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಇವರಿಗೆ ಮೇಲ್ನೋಟಕ್ಕೆ ಡಿಸಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೂ ಸಾಥ್‌ ನೀಡಿರುವಂತೆ ಕಂಡು ಬರುತ್ತಿದ್ದು ಈ ಬಗ್ಗೆ ನಿಗಮದ ವ್ಯವಸ್ಥಾಕ ನಿರ್ದೇಶಕರು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸಂಸ್ಥೆಯ ಸಿಬ್ಬಂದಿ ಆಗ್ರಹಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ