KSRTC: ಅಧಿಕಾರಿಗಳು ಬೀದಿಗಿಳಿಯದ ಹೊರತು ನಾವು ಮುಷ್ಕರ ಬೆಂಬಲಿಸಲ್ಲ- ಸಮಸ್ತ ಚಾಲನಾ ಸಿಬ್ಬಂದಿಗಳು
ಬೆಂಗಳೂರು: ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳ ಎಲ್ಲ ಅಧಿಕಾರಿ ವರ್ಗ, ಆಡಳಿತ ವರ್ಗ, ಭದ್ರತಾ ಸಿಬ್ಬಂದಿಗಳು ಎಲ್ಲರೂ ತಮ್ಮ ತಮ್ಮ ಕರ್ತವ್ಯ ತೊರೆದು ಬಂದು ಎಲ್ಲಿತನಕ ಮುಷ್ಕರಕ್ಕೆ ಬೆಂಬಲ ಕೊಡೋಲ್ವೋ ಅಲ್ಲಿವರೆಗೂ ಚಾಲಕ- ನಿರ್ವಾಹಕರು ಎಲ್ಲರೂ ನಮ್ಮ ನಮ್ಮ ಪಾಡಿಗೆ ನಾವು ಕರ್ತವ್ಯ ಮಾಡುತ್ತೇವೆ. ವೇತನ ಹೆಚ್ಚಳ ನಮಗಷ್ಟೇ ಆಗಲ್ಲ ಆದ್ರೆ ಎಲ್ಲರಿಗೂ ಆಗ್ಲಿ ಇಲ್ಲ ಬಿಡ್ಲಿ ಯಾರು ತಲೆ ಕೆಡಿಸಿಕೊಳ್ಳಬೇಡಿ ಎಂದು ನೌಕರ ನೌಕರರ ನಡುವೆಯೇ ಚರ್ಚೆ ಆರಂಭವಾಗಿದೆ.
ನಿಜಕ್ಕೂ ಸಾರಿಗೆ ಸಂಸ್ಥೆಗಳ ಚಾಲನಾ ಸಿಬ್ಬಂದಿಗಳ ಈ ನಿರ್ಧಾರವನ್ನು ವಿಜಯಪಥ ಕೂಡ ಸ್ವಾಗತಿಸುತ್ತದೆ. ಇದೇ ಆಗಬೇಕು ಎಂದು ಕಳೆದ 6 ವರ್ಷಗಳಿಂದಲೂ ನಿರಂತರವಾಗಿ ವರದಿ ಮಾಡುತ್ತಲೇ ಬಂದಿದೆ. ಅಲ್ಲದೆ ಈ ಬಗ್ಗೆ ಹಲವಾರು ರೀತಿಯಲ್ಲಿ ಚಾಲನಾ ಸಿಬ್ಬಂದಿಗಳ ಕುಟುಂಬಗಳು ಹೇಗೆ ಬೀದಿ ಬರುತ್ತಿವೇ ಎಂಬುದರ ಬಗ್ಗೆ ಎಚ್ಚರಿಸುತ್ತಲೇ ಇದೆ. ಜತೆಗೆ ಅಧಿಕಾರಿಗಳಿಗೂ ನೀವು ಹೋರಾಟಕ್ಕೆ ಇಳಿಯಲೇ ಬೇಕು ಎಂಬುದರ ಬಗ್ಗೆ ಅರಿವು ಮೂಡಿಸುತ್ತಲೇ ಬಂದಿದೆ.
ಇದರಿಂದ ಎಚ್ಚೆತ್ತ ಅಧಿಕಾರಿ ವರ್ಗ ಸರ್ಕಾರಕ್ಕೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಸಾರಿಗೆ ಸಚಿವರಿಗೂ ವೇತನ ಹೆಚ್ಚಳ ಸಂಬಂಧ ಮನವಿ ಪತ್ರ ಸಲ್ಲಿಸಿ 7ನೇ ವೇತನ ಆಯೋಗದಂತೆ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದೆ.
ಈ ನಡುವೆ ಸಾರಿಗೆಯ ಸಮಸ್ತ ಚಾಲನಾ ಸಿಬ್ಬಂದಿಗಳು ಕೂಡ ಯೋಚಿಸಿ ನಾವಷ್ಟೆ ಹೋರಾಟಕ್ಕೆ ಇಳಿದರೆ ಅಧಿಕಾರಿಗಳು ನಮ್ಮನ್ನು ಬಲಿಪಶು ಮಾಡುತ್ತಾರೆ. ಹೀಗಾಗಿ ನಾವು ಹೋರಾಟ ಮಾಡಿ ಅವರಿಗೆ ವೇತನ ಹೆಚ್ಚಿಸಿ ಬಳಿಕ ನಾವು ವಜಾ, ಅಮಾನತು ಜತೆಗೆ ಪೊಲೀಸ್ ಕೇಸ್ ಹಾಕಿಸಿಕೊಂಡು ಬೀದಿಗೆ ಬರುವುದಲ್ಲದೆ ಕುಟುಂಬದವರು ಕೂಡ ಬೀದಿಗೆ ಬರುತ್ತಾರೆ. ಹೀಗೆ ಆಗುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದು ಇಂದಿನ ಚಾಲನಾ ಸಿಬ್ಬಂದಿಗಳ ಪ್ರಜ್ಞಾವಂತಿಕೆಯನ್ನು ತೋರಿಸುತ್ತಿದೆ.
ಇನ್ನು ಯಾಕೆ ಅಧಿಕಾರಿ ವರ್ಗ ಹೊರಗಡೆ ಬಂದು ಹೋರಾಟ ಮಾಡಬೇಕು ನಮಗೆ ಅಂದ್ರೆ ನೌಕರರಿಗೆ ಇರುವ ಭಯ ದೂರವಾಗುತ್ತೆ. ಹೋರಾಟ ಇಮ್ಮಡಿ ಆಗುತ್ತೆ ಅದಕ್ಕೆ ಅಧಿಕಾರಿ ವರ್ಗ ಬೀದಿಗೆ ಇಳಿಯಲೇಬೇಕು. ಅಧಿಕಾರಿ ವರ್ಗ 7ನೇ ವೇತನ ಕೇಳುತ್ತೈತೆ ಅದು ಅವ್ರು ಹೇಳಿದಾಗೆ ಹಿಂದಿನಿಂದ ಆಗಿದೆ. ಈಗಲೂ ಕೂಡ ಅದೇ 7ನೇ ವೇತನವೇ ಆಗೋದು ಅದಕ್ಕೆ ಅಧಿಕಾರಿ ವರ್ಗ ಏನು ಕೇಳುತ್ತೋ ಅದೇ ನಮ್ಮ ಬೇಡಿಕೆ ಕೂಡ. ಹೀಗಾಗಿ ನಾವು ಅವರಂತೆ ನಡೆಯೋಣ ಎಂದು ನೌಕರರು ನಿರ್ಧರಿಸಿದ್ದಾರೆ.
ನಮ್ಮ ಅಧಿಕಾರಿ ವರ್ಗ ಹೊರಗಡೆ ಬಂದ್ರೆ ಏನಾದರೂ ಒಂದು ಆಗೇ ಆಗುತ್ತದೆ. ಇಲ್ಲ ಚಂದ್ರಶೇಖರ್, ಜಂಟಿ ಕ್ರಿಯಾ ಸಮಿತಿ ಇವರ್ಯಾರೆ ಬಂದು ಹೇಳಿದ್ರು ಮುಷ್ಕರ ಆಗಲ್ಲ. ಬೇಕಾದ್ರೆ ನಾವು ಪೇಪರಲ್ಲಿ ಬರೆದುಕೊಡತ್ತೀವಿ ಎಂದು ಕೆಲ ನೌಕರರು ಹೇಳುತ್ತಿದ್ದಾರೆ.
ಹೌದಿಲ್ಲ ಹೇಳಿ ಸರ್ ಡ್ರೈವರ್, ಕಂಡಕ್ಟರ್ ಸ್ಟ್ರೈಕ್ ಮಾಡೋದು ಅದನ್ನು ಇದೆ ಸೆಕ್ಯೂರಿಟಿ ಅವರು ವಿಡಿಯೋ ಮಾಡಿ ರಿಪೋರ್ಟ್ ಮಾಡೋದು ಅದ್ರಮೇಲೆ ಡಿಪೋ ಮ್ಯಾನೇಜರ್ ಸ್ಟ್ರೈಕ್ ಯಾರು ಮಾಡುತ್ತಿದ್ದಾರೋ ಅವರ ಹೆಸರು ಲಿಸ್ಟ್ ಕೊಡೋದು, ಅದನ್ನು ADM ಸೂಪರ್ವೈಜರ್ ಟಪಾಲಿಗೆ ಕೊಡೋದು. ಬಳಿಕ ಡಿಸಿ ಅವರು ವಜಾ, ಅಮಾನತು ಮಾಡೋದು ಇದು ಯಾವ್ ನ್ಯಾಯ ಸ್ವಾಮಿ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನು ಯಾರು ಕೂಡ ತಲೆ ಕೆಡಿಸಿಕೊಳ್ಳಬೇಡಿ ಎಲ್ಲರೂ ಕರ್ತವ್ಯ ನಿರ್ವಹಿಸಿ. ಅಧಿಕಾರಿಗಳು ಸೇರಿದಂತೆ ಸಂಸ್ಥೆಯ ಪ್ರತಿಯೊಬ್ಬ ನೌಕರರು ಬರಬೇಕು. ಆಗ ಸ್ಟ್ರೈಕ್ ಮಾಡೋಕೆ ಮುಂದಾಗಬೇಕು. ಎಲ್ಲರೂ ಕೂಡಿ ಹೋರಾಟ ಮಾಡೋಣ ಇಲ್ಲ ಅವರೆಲ್ಲ ಹೇಗೆ ಕರ್ತವ್ಯ ನಿರ್ವಹಿಸುತ್ತಾರೋ ಹಾಗೆ ನಾವು ಕೂಡಾ ಕರ್ತವ್ಯ ನಿರ್ವಹಿಸೋಣ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ.