CRIMENEWSನಮ್ಮಜಿಲ್ಲೆ

ಚಾಲಕ‌ನ ನಿಯಂತ್ರಣ ತಪ್ಪಿ KSRTC ಬಸ್‌ ಪಲ್ಟಿ: 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ಚಾಲಕ‌ನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿ ಹೊಡೆದ ಪರಿಣಾಮ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಹುಲಿಕಟ್ಟೆ ಗ್ರಾಮದ ಬಳಿ ನಡೆದಿದೆ.

ಇಂದು ಮೇ 24ರ ಮಧ್ಯಾಹ್ನ ಈ ಅವಘಡ ಸಂಭವಿಸಿದ್ದು, ಹುಲಿಕಟ್ಟೆಯಿಂದ ದಾವಣಗೆರೆಗೆ ಬರುತ್ತಿದ್ದ ಬಸ್ ಎದುರಿಗೆ ಕುರಿಹಿಂಡು‌ ಬಂದ ಹಿನ್ನೆಲೆ ಚಾಲಕ ರಸ್ತೆ ಪಕ್ಕ ತೆಗೆದುಕೊಳ್ಳಲು ಹೋಗಿ ಪಲ್ಟಿಯಾಗಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ. ​ಅಪಘಾತ ಆಗಿದ್ದನ್ನು ಕಂಡ‌ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ.

ಬಸ್‌ಪಲ್ಟಿ ಹೊಡೆದಿದ್ದರಿಂದ ಡೋರ್‌ಸೈಟ್‌ ನೆಲೆಕ್ಕೆ ಕಚ್ಚಿಕೊಂಡಿದ್ದರಿಂದ ಬಸ್‌ ಒಳಗಿದ್ದ ಪ್ರಯಾಣಿಕರನ್ನು ಏಣಿಹಾಕಿ ಹೊರಗೆ ಕರೆತರುವ ಮೂಲಕ ಸ್ಥಳೀಯರು ರಕ್ಷಿಸಿದರು.

ಇದು ಚಾಲಕ‌ನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಈ ವೇಳೆ ಬಸ್​ನಲ್ಲಿ 40ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ದರು. ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗುವ ಮೂಲಕ ಆದರೆ, ಭಾರಿ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಹೇಳಿದರು.

ಇನ್ನು ಬಸ್‌ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವರಿಗೆ ಸಣ್ಣ- ಪುಟ್ಟ ಗಾಯಗಳಾಗಿದ್ದರೂ ಅವರೆಲ್ಲರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಬಸ್ ಕಂದಕಕ್ಕೆ ಬಿದ್ದ ಹಿನ್ನೆಲೆ ಅಲ್ಲಿದ್ದ ಸ್ಥಳೀಯರು ಏಣಿ ಹಾಕಿ ಬಸ್ ಮೇಲೆ ಹತ್ತಿ ಪ್ರಯಾಣಿಕರನ್ನು ರಕ್ಷಿಸಿದ್ದಲ್ಲದೇ, ಗಾಯಾಳುಗಳನ್ನು ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನು ಕಂದಕಕ್ಕೆ ಬಿದ್ದ ಬಸ್ ಅನ್ನು ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ಅಲ್ಲದೇ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ಅಗತ್ಯ ನೆರವು ನೀಡಿದರು.

ಅವಘಡ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!