
ಬೆಂಗಳೂರು: ರಾಜ್ಯ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಿಗೆ ಕೊಡುವಂತ ವೇತನವನ್ನು ಆಯಾ ಹುದ್ದೆಗಳಿಗೆ ಅನುಗುಣವಾಗಿ ಸರಿ ಸಮಾನ ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಭರವಸೆ ಕೊಟ್ಟಿದೆ.
ಆದರೆ, ಸರ್ಕಾರ ರಚನೆಯಾಗಿ 2 ವರ್ಷ ಕಳೆಯುತ್ತಾ ಬಂದರೂ ಈವರೆಗೂ ಕೊಟ್ಟ ಭರವಸೆಯಂತೆ ಸಾರಿಗೆ ನೌಕರರಿಗೆ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ಈ ನಡುವೆ 2024 ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಆಗಬೇಕಾಗಿದೆ. ಅದನ್ನು ಮಾಡುತ್ತಿಲ್ಲ.
ಈ ಎಲ್ಲದರ ಮಧ್ಯೆ ಎಲ್ಲ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಸರಿ ಸಮಾನ ವೇತನಕ್ಕಾಗಿ ಮನವಿ ಕೊಡಬೇಕಾಗಿತ್ತು. ದುರ್ದೈವದ ಸಂಗತಿ ಏನಂದರೆ ಕೆಲವು ಸಂಘಟನೆಗಳು ಸೇರಿಕೊಂಡು ಜಂಟಿ ಕ್ರಿಯಾ ಸಮೀತಿ ಎಂದು ನಾಮಕರಣ ಮಾಡಿಕೊಂಡು ಶೇ.25 ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಇದನ್ನು ಗಮನಿಸಿದರೆ ಈಗಾಗಲೇ ಸರ್ಕಾರಿ ನೌಕರರಿಗಿಂತ ಶೇ.40 ರಿಂದ 50ರವರೆಗೆ ಕಡಿಮೆ ವೇತನ ಪಡೆಯುತ್ತಿರುವ ನಾವು ಸರ್ಕಾರಿ ನೌಕರರ ಸರಿ ಸಮಾನ ವೇತನ ಪಡೆಯುವ ಮಟ್ಟಕ್ಕೆ ಬರಲು ಸಾಧ್ಯವೇ? ಈ ಬಗ್ಗೆ ಯೋಚನೆ ಮಾಡಬೇಕಿದೆ.
ಇದರ ಜತೆಗೆ ಈಗಾಗಲೇ 1-1-2024 ರಿಂದ ಇಚೇಗೆ ಹಲವಾರು ನೌಕರರು ನಿವೃತ್ತಿ ಹೊಂದಿದ್ದರೆ, ಮುಂದಿನ ದಿನಗಳಲ್ಲಿ ಅಂದರೆ 31-12-2027 ನಿವೃತ್ತಿ ಹೊಂದುವವರಿಗೆ, ಸರಿ ಸಮಾನ ವೇತನವಾದರೆ ಲಕ್ಷ ರೂ.ಗಳಿಗೂ ಹೆಚ್ಚು ಗ್ರಾಚುಟಿ ಹಣ ನಮಗೆ ಬರುತ್ತದೆ. ಅಲ್ಲದೆ ಇದರಿಂದ ಹೆಚ್ಚಿನ ಲಾಭ ನೌಕರರಿಗೆ ಆಗುತ್ತದೆ. ಇತರ ಸೌಲಭ್ಯಗಳು ಸಿಗುತ್ತವೆ.
ಆದರೆ ಜಂಟಿ ಕ್ರಿಯಾ ಸಮೀತಿ ಪದಾಧಿಕಾರಿಗಳು ತಾವು 7ನೆಯ ವೇತನ ಆಯೋಗದ ಪ್ರಕಾರ ಸರಿ ಸಮಾನ ವೇತನಕ್ಕೆ ಮನವಿ ಕೊಡದೆ ಹೋದರೆ, ಈ ನಿವೃತ್ತಿ ಹೊಂದಿರುವ ಮುಂದೆ ಹೊಂದುವ ನೌಕರರಿಗೆ ಆಗುವ ನಷ್ಟವನ್ನು ಹೇಗೆ ಸರಿಪಡಿಸುತ್ತೀರಿ. ಆ ನಷ್ಟವನ್ನು ಯಾರು ಭರಿಸುವರು ಈ ಬಗ್ಗೆ ತಾವು ಸ್ಪಷ್ಟನೆ ಕೊಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಈ ಎಲ್ಲದ ನಡುವೆ ತಮ್ಮಲ್ಲಿ ಮತ್ತೊಮ್ಮೆ ಮನವಿ ಮಾಡಿಕೋಳ್ಳುತ್ತಿದ್ದೇವೆ ತಾವು ಸಹ 7ನೇ ವೇತನ ಆಯೋಗದ ಪ್ರಕಾರ ಸರಿ ಸಮಾನ ವೇತನಕ್ಕೆ ಮನವಿ ಕೊಡಿ ಎಂದು ನಿಮ್ಮ ಮೇಲೆ ನಿರೀಕ್ಷೆ ಇಟ್ಟಿರುವ ನೊಂದ ಸಾರಿಗೆ ನೌಕರರು ಮನವು ಮಾಡುತ್ತಿದ್ದೇವೆ ಎಂದ್ದಾರೆ.