Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಬಿಎಂಟಿಸಿ ಜಯನಗರ ಘಟಕಕ್ಕೆ  KSRTC ನೌಕರರ ಸಂಘ ಭೇಟಿ : ಕಾರ್ಮಿಕರ ಸಮಸ್ಯೆ ಆಲಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಸೋಮವಾರ ಮಧ್ಯಾಹ್ನ ಬಿಎಂಟಿಸಿ ಜಯನಗರ ಘಟಕಕ್ಕೆ ಭೇಟಿ ನೀಡಿ ನೌಕರರ ಕುಂದುಕೊರತೆ ಆಲಿಸಿದರು.

ಸಂಘದ ಗೌರವಾಧ್ಯಕ್ಷ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರ ನೇತೃತ್ವದಲ್ಲಿ ಸಂಘದ ಎಲ್ಲ ಪದಾಧಿಕಾರಿಗಳು ನೌಕರರ ಜತೆ ಚರ್ಚಿಸಿದರು. ಈ ವೇಳೆ ಹಲವು ನೌಕರರು ರಜೆ ವಿಷಯದಲ್ಲಿ ತಾರತಮ್ಯ ಎಸಗಲಾಗುತ್ತಿದೆ. ನಮಗೆ ರಜೆ ಕೊಡುವುದಕ್ಕೆ ಭಾರಿ ಕಾಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಇನ್ನು ಕಳೆದ 2020ರ ಜನವರಿಯಲ್ಲಿ ವೇತನ ಹೆಚ್ಚಳವಾಗಬೇಕಾಗಿದ್ದು, ಈವರೆಗೂ ಅದು ಆಗಿಲ್ಲ. ಹಾಗಾಗಿ ಕೂಡಲೇ ವೇತನ ಪರಿಷ್ಕರಣೆಗೆ ಆದ್ಯತೆ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸರ್ಕಾರ ಸೇರಿದಂತೆ ಆಡಳಿತ ಮಂಡಳಿಯ ಗಮನಕ್ಕೆ ತರಬೇಕು ಎಂಬ ಒತ್ತಾಯ ಮಾಡಿದರು.

ಇದಿಷ್ಟೇ ಅಲ್ಲದೆ ಕೋವಿಡ್‌ ಸಮಯದಲ್ಲಿ ಇದ್ದಂತೆ ಈಗಲೂ ಎರಡರಿಂದ ನಾಲ್ಕುಗಂಟೆವರೆಗೆ ಬಸ್‌ನಲ್ಲಿ ರೆಸ್ಟ್‌ ಮಾಡಬೇಕು. ಇದರಿಂದ ಸಮಯ ವ್ಯರ್ಥವಾಗುತ್ತದೆ ಅಲ್ಲದೆ ನಾವು 8 ಗಂಟೆಯ ಬದಲಿಗೆ 12ರಿಂದ 13 ಗಂಟೆಗಳು ಕೆಲಸ ಮಾಡಿದಂತಾಗುತ್ತಿದೆ. ಹೀಗಾಗಿ ಈ ರೆಸ್ಟ್‌ ಸಮಯವನ್ನು ಬಿಟ್ಟು 8 ಗಂಟೆಗಳ ಕಾಲ ಕೆಲಸ ಮಾಡುವಂತೆ ಈ ಹಿಂದೆ ಇದ್ದಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಈಗ ನೌಕರರು ಕಡಿಮೆ ಇದ್ದಾರೆ ಎಂದು ಹೆಚ್ಚು ಸಮಯದ ವರೆಗೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಆ ಹೆಚ್ಚುವರಿ (ಓಟಿ) ಸಮಯಕ್ಕೆ ಯಾವುದೆ ವೇತನ ಕೊಡುತ್ತಿಲ್ಲ. ನಾವು 8 ಗಂಟೆ ಬಳಿಕ ಮಾಡುವ ಕೆಲಸಕ್ಕೆ ತಕ್ಕ ಓಟಿ ಕೊಡಬೇಕು ಎಂದು ಮನವಿ ಮಾಡಿದರು. ಹೀಗೆ ನೌಕರರ ಸಂಘದ ಪದಾಧಿಕಾರಿಗಳ ಮುಂದೆ ನೌಕರರು ಹತ್ತು ಹಲವು ಸಮಸ್ಯೆಗಳನ್ನು ತೆರೆದಿಟ್ಟರು.

ಎಲ್ಲ ನೌಕರರ ಸಮಸ್ಯೆ ಆಲಿಸಿದ ಸಂಘದ ಪದಾಧಿಕಾರಿಗಳು ಬಳಿಕ ಡಿಪೋ ವ್ಯವಸ್ಥಾಪಕರಾದ ನಯನಾ ಅವರನ್ನು ಭೇಟಿ ಮಾಡಿ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಡಿಎಂ ಅವರು ನಮ್ಮ ವ್ಯಾಪ್ತಿಗೆ ಬರುವ ರಜೆ, ಫಾರಂ -4 ಇತರ ವಿಷಯದ ಬಗ್ಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ. ಆದರೆ, ನಮ್ಮ ವ್ಯಾಪ್ತಿ ಮೀರಿದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.

ಇನ್ನು ನೌಕರರು ರಜೆ ಹಾಕಿಕೊಳ್ಳುವುದಕ್ಕೆ ರಜೆ ನಿರ್ವಾಹಣೆ ಮಷಿನ್‌ ಅನ್ನು ಲಾಕ್‌ ಮಾಡಿರುತ್ತಾರೆ ಮತ್ತು ಈ ಹಿಂದೆ ಸಿಗುತ್ತಿದ್ದ 5 ರಾಷ್ಟ್ರೀಯ ಹಬ್ಬಗಳಂದು ( ಸ್ವಾತಂತ್ಯ್ರ ದಿನಾಚರಣೆ, ಗಾಂಧಿ ಜಯಂತಿ, ಜನವರಿ 26 ಗಣರಾಜ್ಯೋತ್ಸವ, ನವೆಂಬರ್‌ 1 ಕನ್ನಡ ರಾಜ್ಯೋತ್ಸವ ಮತ್ತು ಮೇ 1ರ ಕಾರ್ಮಿಕ ದಿನಚಾರಣೆ) ರಜೆ ತೆಗೆದುಕೊಳ್ಳುತ್ತಿದ್ದೆವು. ಆದರೆ ಈಗ ಅದನ್ನು ಸಹ ಕೊಡುವುದಕ್ಕೆ ಮೀನಮೇಷ ಎಣಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಸಂಘ ಮನವಿ ಮಾಡಿತು.

ಅದಕ್ಕೆ ಸಹಕಾರತ್ಮಕವಾಗಿ ಸ್ಪಂದಿಸಿದ ಡಿಎಂ ಈ ಎಲ್ಲ ಸಮಸ್ಯೆಗಳನ್ನು ನಮ್ಮ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಭೇಟಿ ವೇಳೆ ಸಂಘದ ಗೌರವಾಧ್ಯಕ್ಷ ಭಾಸ್ಕರ್‌ ರಾವ್‌, ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಡಿ.ರಾಮು, ಖಜಂಜಿ ಯೋಗೇಶ್, ಉಪಾಧ್ಯಕ್ಷ ಸುಧಾಕರೆಡ್ಡಿ, ಪ್ರಚಾರ ಸಮಿತಿ ವಕ್ತಾರ ನಾಗೇಂದ್ರ, ಸಂಘಟನಾ ಕಾರ್ಯದರ್ಶಿಗಳಾದ ಸಮಾಚಾರ ವಿನಯ್, ಲಕ್ಷ್ಮಣ್, ಶ್ರೀನಿವಾಸ್ ಇತರರು ಇದ್ದರು.

Leave a Reply

error: Content is protected !!
LATEST
Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತೆಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ KSRTC: ಗೊಂದಲದ ನಡುವೆಯೂ 1280 ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮದುವೆಗೆ ಒಪ್ಪಿ ಬಳಿಕ ತಿರಸ್ಕರಿಸಿದ ಪ್ರಿಯತಮೆ: ಕೋಪಗೊಂಡು ಇರಿದ ಪ್ರಿಯತಮ