NEWSನಮ್ಮಜಿಲ್ಲೆ

KSRTC ಚಾಲನಾ, ತಾಂತ್ರಿಕ ಸಿಬ್ಬಂದಿಗಳ ಪರಿಶ್ರಮದಿಂದ ದೇಶದಲ್ಲಿಯೇ ಮಾದರಿ ಸಂಸ್ಥೆಯಾಗಿದೆ: ಡಿಎಂ ಪ್ರದೀಪ್ ಕುಮಾರ್

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಮತ್ತು ತಾಂತ್ರಿಕ ಸಿಬ್ಬಂದಿಗಳ ಪರಿಶ್ರಮದಿಂದಾಗಿ ದೇಶದಲ್ಲಿಯೇ ಮಾದರಿ ಸಂಸ್ಥೆ ಎಂದು ಹೆಸರುಗಳಿಸಲು ಸಾಧ್ಯವಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ. ರಾಮನಗರ ಘಟಕದ ಘಟಕ ವ್ಯವಸ್ಥಾಪಕ ಕೆ.ಆರ್. ಪ್ರದೀಪ್ ಕುಮಾರ್ ಹೇಳಿದ್ದಾರೆ.

ನಗರದ ಬಸ್ ನಿಲ್ದಾಣದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ರಾಮನಗರ-ಮಾಗಡಿ ನಡುವೆ ಸಂಚರಿಸುವ ನವೀಕೃತ ಬಸ್‌ಗೆ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯ ಸಿಬ್ಬಂದಿ ವರ್ಗ ಪ್ರಯಾಣಿಕರ ಸೇವೆಗಾಗಿ ಪ್ರತಿನಿತ್ಯ ಯಾವುದೇ ದೂರುಗಳಿಗೆ ಆಸ್ಪದ ಇಲ್ಲದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಈ ಸೇವೆಯಿಂದಾಗಿ ಸಾರಿಗೆ ಸಂಸ್ಥೆಗೆ ಹಲವು ಪ್ರಶಸ್ತಿಗಳು ಸಂದಿವೆ ಎಂದು ಹೇಳಿದರು.

ಇನ್ನು ಅದೆಷ್ಟೋ ಹಳ್ಳಿಗಳಿಗೆ ಬಸ್ ಸೌಕರ್ಯವಿರಲಿಲ್ಲ, ಇಂತಹ ಗ್ರಾಮಗಳಿಗೆ ಬಸ್ ಸಂಚಾರ ಆರಂಭಿಸಿದ ಕೀರ್ತಿ ಸಾರಿಗೆ ಸಂಸ್ಥೆಗೆ ಸಲ್ಲುತ್ತದೆ ಎಂದ ಅವರು, ನಾನು ರಾಮನಗರ ಘಟಕಕ್ಕೆ ಬಂದ ಸಂದರ್ಭದಲ್ಲಿ 15 ಲಕ್ಷಕ್ಕೂ ಅಧಿಕ ಕಿ.ಮೀ. ಸಂಚರಿಸುವ ವಾಹನಗಳ ಫೋಟೋ ತೆಗೆಯುತ್ತಿದ್ದೆ. ಆ ಸಂದರ್ಭದಲ್ಲಿ ಕೆಎ-42-ಎಫ್-219 ವಾಹನವನ್ನು ಪರಿಶೀಲನೆ ಮಾಡಿದಾಗ 15 ಲಕ್ಷ ಕಿ.ಮೀ. ಕ್ರಮಿಸಿದ ಬಗ್ಗೆ ಮಾಹಿತಿ ಪಡೆದು ಬಸ್‌ನ ಚಾಲಕ ಶಿವಯ್ಯ ಅವರನ್ನು ಕರೆದು ಮಾಹಿತಿ ಪಡೆದೆ.

ಅವರು ಈ ಸಂದರ್ಭದಲ್ಲಿ ಹೊಸ ವಾಹನವೊಂದನ್ನು 16 ವರ್ಷಗಳ ಹಿಂದೆ ಅಂದಿನ ಅಧಿಕಾರಿಗಳು ಮಾಗಡಿ ಮಾರ್ಗಕ್ಕೆ ನಿಯೋಜಿಸಿದ್ದರು. ಅಂದಿನಿಂದಲೂ ಅಂದರೆ ಸುಮಾರು 16 ವರ್ಷಗಳಿಂದಲೂ ಹಿರಿಯ ಚಾಲಕ ಶಿವಯ್ಯ ಅವರೇ ಈ ವಾಹನವನ್ನು ಓಡಿಸಿದ್ದಾರೆ. ಅವರು ಈ ವಾಹನವನ್ನು ಇಂತಹ ಸಂದರ್ಭದಲ್ಲಿ ತಮ್ಮ ಸ್ವಂತ ವಾಹನದಂತೆ ಸುಸ್ಥಿಯಲ್ಲಿಟ್ಟುಕೊಂಡಿರುವುದನ್ನು ನೋಡಿ ಆ ವಾಹನವನ್ನು ಸ್ಕ್ರ್ಯಾಪ್ ಮಾಡಲು ನನಗೆ ಮನಸ್ಸು ಆಗಲಿಲ್ಲ.

ಆದರೆ ಸಂಸ್ಥೆಯ ನಿಯಮಾವಳಿಯ ಪ್ರಕಾರ ಶಿವಯ್ಯ ಅವರು ಓಡಿಸಿದ ವಾಹನವನ್ನು ಸ್ಕ್ರ್ಯಾಪ್ ಮಾಡಲಾಯಿತು. ಬಳಿಕ ಶಿವಯ್ಯ ಅವರೇ ಮುಂದೆ ನಿಂತು, ತಮ್ಮ ಹಿಂದಿನ ವಾಹನದಂತೆಯೇ ಬೇರೊಂದು ವಾಹನವನ್ನು ನವೀಕರಿಸಿ, ಅದೇ ಬಣ್ಣ, ಅದೇ ರೀತಿಯಲ್ಲಿಯೇ ಸಿದ್ದಗೊಳಿಸಿಕೊಂಡು ಮಾರ್ಗದಲ್ಲಿ ವಾಹನ ಸಂಚಾರ ಆರಂಭಿಸಿದ್ದಾರೆ. ಇದರಿಂದ ಖುಷಿಗೊಂಡ ಮಾರ್ಗದ ಪ್ರಯಾಣಿಕರೇ ಮುಂದೆ ನಿಂತು ವಾಹನಕ್ಕೆ ಪೂಜೆ ಮಾಡಿ ಅಭಿಮಾನ ಮೆರೆದಿದ್ದಾರೆ. ಇದಕ್ಕೆ ನಾವೆಲ್ಲರೂ ಕೃತಜ್ಞರಾಗಿರುತ್ತೇವೆ ಎಂದು ಹೇಳಿದರು.

ಹರೀಸಂದ್ರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾದ್ರಳ್ಳಿ ಚಂದ್ರಶೇಖರ್ ಮಾತನಾಡಿ, ನಮ್ಮ ಹಳ್ಳಿಯ ಕಡೆ ಖಾಸಗಿ ವಾಹನವಿದ್ದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ವತಿಯಿಂದ ಬಸ್ ಬಿಡಲಾಗಿತ್ತು. ಅಂದು ಈ ವಾಹನದಲ್ಲಿ ಚಾಲಕರಾದ ಶಿವಯ್ಯ ಅವರ ಪರಿಶ್ರಮದಿಂದಾಗಿ ಖಾಸಗಿ ಬಸ್‌ಗಳು ಮಾಯವಾದವು, ಇಂದು ನಮ್ಮ ಮಾರ್ಗದಲ್ಲಿ ಸಾರಿಗೆ ಬಸ್‌ಗಳು ಸೇವೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಶಿವಯ್ಯ ಓಡಿಸುತ್ತಿದ್ದ ಹಳದಿ ನೀಲಿ ಬಣ್ಣದ ಬಸ್‌ಗೆ ಜನ ಶಿವಯ್ಯನ ಗಾಡಿ ಎಂದೇ ಹೆಸರು ಇಟ್ಟಿದ್ದರು ಎಂದು ಹೇಳಿದ ಅವರು, ಹಳೆಯ ಬಸ್ ಮಾದರಿಯಲ್ಲಿ ಹಳದಿ ನೀಲಿ ಬಣ್ಣದ ಬಸ್ ನವೀಕರಣ ಮಾಡಿಸಿಕೊಟ್ಟು ಹಳೆಯ ನೆನಪು ಮರುಕಳಿಸುವಂತೆ ಮಾಡಿದ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳನ್ನು ಈ ಮಾರ್ಗದ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಈ ಮಾರ್ಗದ ಸಾರ್ವಜನಿಕರು, ಪ್ರಯಾಣಿಕರೆಲ್ಲ ಸೇರಿ ಘಟಕ ವ್ಯವಸ್ಥಾಪಕ ಕೆ.ಆರ್. ಪ್ರದೀಪ್ ಕುಮಾರ್ ಮತ್ತು ರಾಮನಗರ-ಮಾಗಡಿ ಮಾರ್ಗದ ಬಸ್ ಚಾಲಕ ಶಿವಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು. ಪ್ರಯಾಣಿಕರಿಗೆ ಸಿಹಿ ಹಂಚಲಾಯಿತು.

ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯರಾದ ಪಾದರಹಳ್ಳಿ ಸತೀಶ್, ಸಾಮಾಜಿಕ ಕಾರ್ಯಕರ್ತ ಸುರೇಂದ್ರ, ಮುನಿಯಪ್ಪನದೊಡ್ಡಿ ಗ್ರಾಮದ ಮುಖಂಡ ಪುಟ್ಟಸ್ವಾಮಯ್ಯ, ಸಂಚಾರ ನಿಯಂತ್ರಕಿ ಭಾಗ್ಯಮ್ಮ, ಚಾಲಕ ಅತ್ತಿಂಗೆರೆ ರಾಜು, ನಿರ್ವಾಹಕ ಮಂಜುನಾಥ್ ಸೇರಿದಂತೆ ಪಾದರಹಳ್ಳಿ, ತಿಮ್ಮಸಂದ್ರ, ಲಕ್ಷ್ಮೀಪುರ ವಿ.ಜಿ.ದೊಡ್ಡಿ ಗ್ರಾಮದ ಪ್ರಯಾಣಿಕರು, ಮುಖಂಡರು ಇದ್ದರು.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ