NEWSಲೇಖನಗಳು

ಸಾರಿಗೆ ಜಂಟಿ ಸಮಿತಿ ಮುಖಂಡರು ಕಾರ್ಮಿಕರ ಹಿತದೃಷ್ಟಿಯಿಂದ ತಮ್ಮ ಬೇಡಿಕೆ ಪರಿಷ್ಕರಿಸಿ – ನೌಕರರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಜಂಟಿ ಸಮಿತಿಯ ನಾಯಕರು ಯಾವಾಗಲೂ ಹೇಳುತ್ತಿರುತ್ತೀರಿ, ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದಂತೆ ವೇತನ ನೀಡಿದರೆ, ಸಾರಿಗೆ ನಿಗಮಗಳು ಮುಚ್ಚಿ ಹೋಗುತ್ತವೆ, ದಿವಾಳಿಯಾಗುತ್ತವೆ ಮತ್ತು ಭವಿಷ್ಯದಲ್ಲಿ ಯುವಕರು ನಿರುದ್ಯೋಗಿಗಳಾಗಲಿದ್ದಾರೆ ಎಂದು.

ಈ ಒಂದು ಕಾರಣದ ಸತ್ಯಾಸತ್ಯತೆ ಬಗ್ಗೆ ತಿಳಿಯಲು ಅಂಕಿ ಅಂಶಗಳು, ಲೆಕ್ಕಾಚಾರ ಮಾಡಿನೋಡಿ ತೀರ್ಮಾನಕ್ಕೆ ಬರಬೇಕಾಗಿತ್ತು, ಹಾಗೆ ಮಾಡಿಲ್ಲದಿರುವುದು ಕಂಡುಬರುತ್ತದೆ. ಆದರೆ ಇಲ್ಲಿ ಜಂಟಿ ಸಮಿತಿಯು ನೈಜ ಲೆಕ್ಕಾಚಾರ ಮಾಡದೇ ಊಹಾತ್ಮಕವಾಗಿ ಹೇಳುತ್ತಿರುವುದು ಸರಿಯಲ್ಲ.

ನಾಲ್ಕು ನಿಗಮಗಳಲ್ಲಿ ಒಟ್ಟು ನೌಕರರ ಸಂಖ್ಯೆ ನವೆಂಬರ್-2022 ಅಂತ್ಯಕ್ಕೆ 1,06,747 ಇದ್ದು, ಇಷ್ಟು ಜನ ನೌಕರರಿಗೆ ಜಂಟಿ ಸಮಿತಿಯ ಬೇಡಿಕೆಯಾದ Basic+BDA ಮೇಲೆ 25% ರಂತೆ ಲೆಕ್ಕಾಚಾರ ಮಾಡಿದಲ್ಲಿ ನಾಲ್ಕು ನಿಗಮ ಸೇರಿ ವಾರ್ಷಿಕ ಒಟ್ಟು ರೂ.1248.69 ಕೋಟಿ ಗಳಷ್ಟು ಹೊರೆಯಾಗುತ್ತದೆ.

ಅದೇ 6 ನೇ ವೇತನ ಆಯೋಗದಂತೆ ವೇತನ ನೀಡಿದಲ್ಲಿ ನಾಲ್ಕು ನಿಗಮಗಳೂ ಸೇರಿ ವಾರ್ಷಿಕ ಒಟ್ಟು ರೂ.1793.88 ಕೋಟಿ ಗಳಷ್ಟು ಹೊರೆಯಾಗುತ್ತದೆ. ಅಂದರೆ 25%.ಬೇಡಿಕೆಗೂ ಹಾಗೂ 6ನೇ ವೇತನಕ್ಕೂ ವ್ಯತ್ಯಾಸ ವಾರ್ಷಿಕ ರೂ.545.19 ಕೋಟಿಗಳಷ್ಟು ಮಾತ್ರ.

ಹಾಗಾದರೆ ರೂ.545.19 ಕೋಟಿಗಳಿಗೆ ಇಂತಹ ಬೃಹತ್ತಾದ ನಾಲ್ಕು ನಿಗಮಗಳು ಮುಚ್ಚಲು ಸಾಧ್ಯವೇ ಅಥವಾ ಇದು ವೈಜ್ಞಾನಿಕ ಕಾರಣವೇ… ಯೋಚಿಸಬೇಕು?

ಸರ್ಕಾರದ ಅತಿ ಮುಖ್ಯ ಸಾಮಾಜಿಕ ಜವಾಬ್ದಾರಿಗಳಾದ 22 ಲಕ್ಷ ವಿದ್ಯಾರ್ಥಿಗಳ ಪಾಸ್, ಹಿರಿಯ ನಾಗರಿಕರಿಗೆ ರಿಯಾಯಿತಿ, ಅಂಗವಿಕಲ ಪಾಸ್, ಇತರ ವಿವಿಧ 22 ರೀತಿಯ ಪಾಸ್‌ಗಳಿಂದ ನಷ್ಟವನ್ನು ಹೊರುತ್ತಿರುವ ಇಂತಹ ದೊಡ್ಡ ಸಂಸ್ಥೆಗಳು ಕೇವಲ ರೂ.545.19 ಕೋಟಿ ಗಳಿಗೆ ಮುಚ್ಚಿ ಹೋಗುತ್ತವೆ ಎಂಬುದು ದಡ್ಡತನದ ಪರಾಮಾವಧಿ ಅಷ್ಟೆ.

ಕರ್ನಾಟಕ ರಾಜ್ಯ ಸರ್ಕಾರದ 2022-23 ಸಾಲಿನ ಬಜೆಟ್ ರೂ. 2.62 ಲಕ್ಷ ಕೋಟಿಯಷ್ಟು ಇದ್ದು, ಯಾವ ಯಾವುದಕ್ಕೊ ಖರ್ಚುಮಾಡುವ ಸರ್ಕಾರ ಸಾರಿಗೆ ಸಂಸ್ಥೆಗೆ ಬಜೆಟ್‌ನ ಶೇಕಡಾ 0.98 ರಷ್ಟಾಗುವ 6ನೇ ವೇತನದಿಂದಾಗುವ ಹೊರೆಯನ್ನು ಹೊರಲು ಅಸಾಧ್ಯವೇ…?

ಸುಳ್ಳು… ಸುಳ್ಳು…… ಇಲ್ಲಿ ಇಚ್ಛಾಶಕ್ತಿ ಮುಖ್ಯ. ಇಲ್ಲಿ ಜಂಟಿ ಸಮಿತಿಯ ಮಾನಸಿಕ ಬಡತನವೇ…ಹೊರತು ಬೇರೇನೂ ಅಲ್ಲ ಎಂಬುವುದು ನಮ್ಮ ಅನಿಸುತ್ತಿದೆ.

ಆದ್ದರಿಂದ ಜಂಟಿ ಸಮಿತಿಯ ಬೇಡಿಕೆ 25% ಗೂ ಹಾಗೂ 6ನೇ ವೇತನಕ್ಕೂ ಇರುವ ನೈಜ ಆರ್ಥಿಕ ಹೊರೆ ವ್ಯತ್ಯಾಸವನ್ನು ಗಮನಿಸಿ ಜಂಟಿ ಸಮಿತಿಯ ತಂಡದ ಮುಖಂಡರು ಕಾರ್ಮಿಕರ ಹಿತದೃಷ್ಟಿಯಿಂದ ತಮ್ಮ ಬೇಡಿಕೆ ಪರಿಷ್ಕರಿಸಿ ಸಾರಿಗೆ ನೌಕರರನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬುದು ನಮ್ಮ ಕಳಕಳಿ ಅಷ್ಟೆ……!!!!

ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಆರ್ಥಿಕವಾಗಿ ಬಳಲುತ್ತಿರುವ ಸಾರಿಗೆ ನೌಕರರಾದ ನಮ್ಮ ಬಗ್ಗೆ ನೀವು ಈ ಪ್ರಾಮಾಣಿಕ ಪ್ರಯತ್ನ ಮಾಡಿ ನೀವು ನೀವು ಕಿತ್ತಾಡಿಕೊಂಡು ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ನಮ್ಮನ್ನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಸದಿರಿ ಎಂಬುವುದು ಸಮಸ್ತ ನಾಲ್ಕೂ ನಿಗಮಗಳ ನೌಕರರಾದ ನಮ್ಮ ವಿನಮ್ರ ಮನವಿ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ