NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಸರಿಸಮಾನ ವೇತನ ಘೋಷಣೆ ಮಾಡಿ ಇಲ್ಲ ತೀವ್ರ ಹೋರಾಟ- ಎಚ್ಚರಿಕೆ ಕೊಟ್ಟ 4 ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯಾವಾಗ ಸ್ವಾಮಿ ನಮಗೆ ತಾವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಕೊಡುವುದು. ನಿತ್ಯ ಒಂದೊಂದು ಕಾರಣ ಹೇಳಿಕೊಂಡೇ ಬರುತ್ತಿದ್ದೀರಲ್ಲ ಸ್ವಾಮಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಸಾರಿಗೆ ಅಧಿಕಾರಿಗಳು/ನೌಕರರು ಪ್ರಶ್ನಿಸುತ್ತಿದ್ದಾರೆ.

ಈ ಹಿಂದೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುತ್ತೇವೆ ಎಂದು 1/1/2020ರ ವೇತನ ಅಗ್ರಿಮೆಂಟ್‌ ಬೇಡ ಎಂದು ‌ ಮುಷ್ಕರ ಮಾಡಿದ್ದ ಸಾರಿಗೆ ನೌಕರರ ಕೂಟವು ಈಗ ನಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಲೇ ಇದ್ದು ಇದರಿಂದ 2020ರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ, ಜತೆಗೆ 2024 ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳದ ಬಗ್ಗೆ ತಾವು ಈವರೆಗೂ ಒಂದು ದೃಢನಿರ್ಧಾರವನ್ನೇ ತೆಗೆದುಕೊಂಡಿಲ್ಲ.

ಈಗ ಅಂದರೆ ಪ್ರಸ್ತುತ ತಾವು 38 + 14 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡುವುದು ಬಾಕಿಯಾದಂತಾಗಿದೆ. ಅಂದರೆ ಇದೆಲ್ಲವನ್ನು ಯಾವಾಗ ನಮಗೆ ಕೊಡುತ್ತೀರಿ ಎಂದು ಹೇಳಿ ಇಲ್ಲ ನಾವು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟವನ್ನು ಮಾಡಬೇಕಾಗುತ್ತದೆ. ಅದಕ್ಕೆ ಅಧಿಕಾರಿಗಳು/ನೌಕರರು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇನ್ನು ಶೇ.15ರಷ್ಟು ವೇತನ ಹೆಚ್ಚಳ 2020ರ ಜ.1ರಿಂದ ಜಾರಿಗೆ ಬರುವಂತೆ ಅಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದು 2023ರ ಮಾರ್ಚ್‌ನಲ್ಲಿ. ಆ ಬಳಿಕ ಸರ್ಕಾರ ಮಾಡಿರುವ ಹೆಚ್ಚಳದ ಹಿಂಬಾಕಿ ಕೊಡುವುದಕ್ಕಾರೂ ತಾವು ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ ಆ ಕೆಸಲ ಸಮಾಡಿಲ್ಲ. ಇನ್ನು ಸಮರ್ಪಕವಾಗಿ ಕೂಟ ಕೂಡ ತೊಡಗಿಸಿಕೊಳ್ಳಲಿಲ್ಲ. ಈಗಲೂ ಆ ಬಗ್ಗೆ ತೊಡಗಿಸಿಕೊಂಡಿಲ್ಲ. ಇದಕ್ಕೆ ಸರ್ಕಾರದ ಧೋರಣೆಯೂ ಕಾರಣವಾಗುತ್ತಿದೆ ಎಂದೇ ಹೇಳಬಹುದು.

ನೌಕರರು ಸರ್ಕಾರದ ಜತೆಗೆ ಕೂಟವನ್ನು ನಂಬಿಕೊಂಡು ಈಗಲೂ ನಮಗೆ ಸರಿ ಸಮಾನ ವೇತನ ಆಗುತ್ತದೆ ಎಂದು ಚಾತಕಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ ಸಾರಿಗೆ ಸಚಿವರಾದ ತಾವು ಏನು ಮಾಡಿದ್ದೀರಿ 38 ತಿಂಗಳ ಹೀಮಬಾಕಿ ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಸರಿ ಸಮಾನ ವೇತನ ಕೊಡುವುದಕ್ಕೆ ಸಭೆ ಕರೆಯುತ್ತೇವೆ ಎಂದು ಹೇಳಿಕೊಂಡೆ 19 ತಿಂಗಳು ಕಳೆದಿದ್ದೀರಿ ಇನ್ನು ಎಷ್ಟು ತಿಮಗಳುಗಳು ನಿಮಗೆ ಕಾಲವಕಾಶ ಬೇಕು ಹೇಳಿ ಎಂದು ಅಧಿಕಾರಿಗಳು/ನೌಕರರು ಪ್ರಶ್ನಿಸಿದ್ದಾರೆ.

2020ರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯೂ ಈವರೆಗೂ ಬಂದಿಲ್ಲ ಏನು ಮಾಡುತ್ತಿದ್ದೀರಿ? ತಾವು ನಮ್ಮ ಸರ್ಕಾರ ಬಂದ ಬಳಿಕ ಸರಿ ಸಮಾನ ವೇತನ ಕೊಡುತ್ತೇವೆ ಎಂದು ಓಟು ಹಾಕಿಸಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ. ಅಧಿಕಾರಕ್ಕೆ ಬಂದ ಮೇಲೆ ಆ ಬಗ್ಗೆ ಮಾತೇ ಇಲ್ಲ ಎಂದರೆ ಹೇಗೆ ಸ್ವಾಮಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

2024ರ ಜನವರಿ 1ರಿಂದ ಅಗ್ರಿಮೆಂಟ್ ಮಾಡುವುದಕ್ಕೋ ಇಲ್ಲ ನಿಮ್ಮ ಹೇಳಿಕೆಯಂತೆ ಸರಿ ಸಮಾನವೇತನ ಮಾಡುವುದಕ್ಕೋ ಈ 14 ತಿಂಗಳಿಂದ ಏಕೆ ಸಾಧ್ಯವಾಗಿಲ್ಲ. ಸರ್ಕಾರದ ಖಜಾನೆಯಲ್ಲಿ ನೌಕರರಿಗೆ ಕೊಡಲು ಹಣವಿಲ್ಲವೇ? ಈ ಕಾಲವಕಾಶದಲ್ಲಿ ಅಂದರೆ ಕಳೆದ 14 ತಿಂಗಳಲ್ಲಿ ತಾವು ನೌಕರರಿಗೆ ಸರಿ ಸಮಾನ ವೇತನ ಕೊಡುವ ಘೋಷಣೆ ಮಾಡಬಹುದಾಗಿತ್ತು. ಆದರೆ ಇದರ ಬಗ್ಗೆ ಈವರೆಗೂ ದೃಢ ನಿರ್ಧಾರ ತೆಗೆದುಕೊಂಡಿಲ್ಲ.

ಬದಲಿಗೆ ಸಂಕ್ರಾಂತಿ, 2025-26ನೇ ಸಾಲಿನ ಬಜೆಟ್‌ ಹೀಗೆ ಹತ್ತು ಹಲವಾರು ಕಾರಣಗಳನ್ನು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದೀರಿ ಇದು ಒಳ್ಳೆಯದಲ್ಲ ನಮ್ಮ ಸಹನೆಯ ಕಟ್ಟೆ ಒಡೆಯುವ ಮುನ್ನ ಎಚ್ಚೆತ್ತುಕೊಂಡು ಶೀಘ್ರದಲ್ಲೇ ಸರಿ ಸಮಾನ ವೇತನ ಕೊಡಬೇಕು ಇಲ್ಲದಿದ್ದರೆ ಮತ್ತೆ ರಾಜ್ಯಾದ್ಯಂತ ಬಸ್‌ಗಳನ್ನು ನಿಲ್ಲಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಬಾರಿ ಬರಿ ನೌಕರರಷ್ಟೇ ಹೋರಾಟಕ್ಕೆ ಇಳಿಯುವುದಿಲ್ಲ ಅಧಿಕಾರಿಗಳು ಕೂಡ ಇಳಿಯುತ್ತೇವೆ. ನಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗದಿದ್ದರೆ ಕೇಂದ್ರ ಕಚೇರಿ ಸೇರಿದಂತೆ ನಮ್ಮ ಸಾರಿಗೆಯ ಪ್ರತಿ ವಿಭಾಗ, ಘಟಕಗಳು, ಬಸ್‌ ನಿಲ್ದಾಣಗಳು ಸೇರಿ ಎಲ್ಲ ಕಡೆ ಕೆಲಸ ಸ್ಥಗಿತಗೊಳಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈವರೆಗೂ ವೇತನದ ಬಗ್ಗೆ ತುಟಿ ಬಿಚ್ಚದ ಅಧಿಕಾರಿಗಳು ಈಗ ಹೋರಾಟ ಮಾಡುವುದಕ್ಕೂ ಸಿದ್ಧವಾಗಿರುವುದರಿಂದ ಇಲ್ಲಿ ನೌಕರರಷ್ಟೇ ಹೋರಾಟ ಮಾಡಿ ಬೀದಿಗೆ ಬೀಳುವುದು ತಪ್ಪುತ್ತದೆ ಜತೆಗೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದಕ್ಕೂ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು/ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ನಮ್ಮ ಸಾರಿಗೆ ಅಧಿಕಾರಿಗಳು/ನೌಕರರು ಹಮ್ಮಿಕೊಳ್ಳುವ ಹೋರಾಟಕ್ಕೆ ಸಾರಿಗೆಯ ಎಲ್ಲ ನೌಕರರ ಪರ ಹಾಗೂ ಕಾರ್ಮಿಕ ಪರ ಸಂಘಟನೆಗಳು ಸಾಥ್‌ ನೀಡಬೇಕು ಎಂದು ಅಧಿಕಾರಿಗಳ ಹಾಗೂ ನೌಕರರ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.

Leave a Reply

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಭವಿಷ್ಯದಲ್ಲೂ ಬೆಂಗಳೂರು ಉತ್ತಮವಾಗಿರುವಂತೆ ಯೋಜನೆ ರೂಪಿಸಬೇಕು; ಇಲ್ಲದಿದ್ದರೇ ಬೆಂಗಳೂರಿಗೆ ನಾವು ಮೋಸ ಮಾಡಿದಂತೆ: ಡಿಸಿ... ಬಿಬಿಎಂಪಿ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ “ಸಂಚಾರಿ ಪ್ರಯೋಗಾಲಯ”: ಡಿಸಿಎಂ ವೀಕ್ಷಣೆ "ನಮ್ಮ ರಸ್ತೆ 2025" ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ಸ್ಪೈನಲ್ ಕಾರ್ಡ್ ಶಸ್ತ್ರ ಚಿಕಿತ್ಸೆ ಬಳಿಕ ಕುರುಬೂರು ಶಾಂತಕುಮಾರ್ ಆರೋಗ್ಯದಲ್ಲಿ ಚೇತರಿಕೆ ಸರ್ಕಾರ ನಿಮ್ಮಗಳ ದ್ವಂದ ನಿಲುವನ್ನು ಉಪಯೋಗಿಸಿಕೊಂಡು ಸಾರಿಗೆ ನೌಕರರ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ತಾ ಇದೆ ದೇಹಲಿ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರೇಖಾ ಗುಪ್ತಾ KSRTC ತುಮಕೂರು: ಡಿಸಿ ಚಂದ್ರಶೇಖರ್ ಅಮಾನತಿಗೆ ದೂರುಕೊಟ್ಟು ಎಂಡಿಗೆ ಒತ್ತಾಯ KSRTC ಅಧಿಕಾರಿಗಳ ಕಳ್ಳಾಟಕ್ಕೆ ಬ್ರೇಕ್‌: HRMS ತಂತ್ರಾಂಶದ ಮೂಲಕವೇ ರಜೆ ಅರ್ಜಿ ಸಲ್ಲಿಸಬೇಕು- ಮುಖ್ಯ ಸಿಬ್ಬಂದಿ ವ್ಯವಸ... KSRTC ಉತ್ತಮ ಸಾಧನೆ ತೋರಿದ ಡಿಸಿಗಳು, ಉಸ್ತುವಾರಿ ಅಧಿಕಾರಿಗಳು, ಘಟಕ ವ್ಯವಸ್ಥಾಪಕರಿಗೆ ನಗದು ಪುರಸ್ಕಾರ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ- ನಿಲ್ದಾಣಕ್ಕೂ ಮೊದಲೆ ಇಳಿದ ಮಹಿಳೆ ಪರ ನಿಂತು ನಾನು ಪೊಲೀಸ್‌ ಎಂದಳು!!