NEWSಆರೋಗ್ಯನಮ್ಮಜಿಲ್ಲೆ

KSRTC- ತಡರಾತ್ರಿ ಬಸ್‌ನಲ್ಲೇ ಅಸ್ವಸ್ಥಗೊಂಡ ಪ್ರಯಾಣಿಕ: ಜನರ ಸಹಿತ ಆಸ್ಪತ್ರೆಗೆ ಬಸ್‌ ತೆಗೆದುಕೊಂಡು ಹೋಗಿ ಪ್ರಾಣ ಉಳಿಸಿ ಚಾಲಕ

ವಿಜಯಪಥ ಸಮಗ್ರ ಸುದ್ದಿ

ಶಿವಮೊಗ್ಗ: ತಡರಾತ್ರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಪ್ರಯಾಣಿಕರ ಸಹಿತ ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಚಾಲಕ  ಪ್ರಾಣ ಉಳಿಸಿದ್ದಾರೆ.

ಇದು ನಿನ್ನೆ ತಡರಾತ್ರಿ ಸಾಗರ ತಾಲೂಕಿನ ಆನಂದಪುರದ ಬಳಿ ನಡೆದಿರುವ ಘಟನೆ. ಸಾಗರದಿಂದ ಶಿವಮೊಗ್ಗದ ಕಡೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಅಶ್ವಮೇಧ ಬಸ್ ( KA 14 F 0131)ನಲ್ಲಿ ಪ್ರಯಾಣಿಕ ಅಬ್ದುಲ್ ಗಫರ್ ಎಂಬುವರು ಆನಂದಪುರ ಸಮೀಪ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡರು.

ಈ ಬಗ್ಗೆ ಬಸ್‌ನಲ್ಲಿದ್ದ ಪ್ರಯಾಣಿಕರು ಚಾಲಕನ ಗಮನಕ್ಕೆ ತಂದಕೂಡಲೇ ಇದು ತುಂಬಾ ಎಮರ್ಜೆನ್ಸಿ ಇದೆ ಎಂದು ಪ್ರಯಾಣಿಕರನ್ನು ಒಳಗೊಂಡಂತೆ ಬಸನ್ನು ಆನಂದಪುರದ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ವರೆಗೂ ತೆಗೆದುಕೊಂಡು ಹೋಗಿ ತುರ್ತು ಪರಿಸ್ಥಿತಿಯಲ್ಲಿದ್ದ ಪ್ರಯಾಣಿಕ ಅಬ್ದುಲ್ ಗಫರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು.

ಸಾರಿಗೆ ಸಂಸ್ಥೆಯ ಚಾಲಕ ಒಂದು ವೇಳೆ ಬಸನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗದೆ ಆಂಬುಲೆನ್ಸ್‌ಗೆ ಕರೆ ಮಾಡಿ ಬರುವಂತೆ ಹೇಳಿದ್ದರೆ. ಪ್ರಯಾಣಿಕನ ಜೀವಕ್ಕೆ ತೊಂದರೆ ಆಗುತ್ತಿತ್ತೇನೋ. ಆದರೆ ಅದಕ್ಕೆ ಅವಕಾಶಕೊಡದಂತೆ ಬಸನ್ನು ಆಂಬುಲೆನ್ಸ್‌ ರೀತಿಯಲ್ಲಿ ತೆಗೆದುಕೊಂಡು ಹೋಗಿ ಅಬ್ದುಲ್ ಗಫರ್‌ ಅವರ ಜೀವ ಕಾಪಾಡಿದ್ದಾರೆ ಇದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಅಬ್ದುಲ್ ಗಫರ್ ಅವರ ಕುಟುಂಬದವರು ನಮ್ಮವರ ಜೀವ ಉಳಿಸಿದ ನೀವು ದೇವರ ರೀತಿ ಕಾಣುತ್ತೀರಿ ನಿಮಗೆ ನಾವು ಎಷ್ಟೇ ಧನ್ಯವಾದ ಹೇಳಿದರು ಸಾಲುವುದಿಲ್ಲ ನಾವು ನಿಮಗೆ ಸದಾ ಚಿರಋಣಿಯಾಗಿರುತ್ತೇವೆ ಎಂದು ತಿಳಿಸಿದ್ದಾರೆ.

ತಡರಾತ್ರಿಯಾಗಿದ್ದರಿಂದ ಅಬ್ದುಲ್ ಗಫರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಪ್ರಯಾಣಿರಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ಕಡೆ ಬಸ್ ಚಾಲನೆ ಮಾಡಿಕೊಂಡು ಹೋಗುವ ಮೂಲಕ ಕರ್ತವ್ಯದಲ್ಲಿ ನಿರತರಾದರು. ಈ ರೀತಿ ಮಾನವೀಯತೆ ಮೆರೆಯುವ ಸಿಬ್ಬಂದಿಗಳನ್ನು ಸಂಸ್ಥೆಯಿಂದ ಗೌವಿಸುವ ಮೂಲಕ ಇತರರು  ಇಂಥ  ಕಾರ್ಯ ಮಾಡುವುದಕ್ಕೆ ಪ್ರೇರೇಪಿಸಬೇಕಿದೆ.

Megha
the authorMegha

Leave a Reply

error: Content is protected !!