NEWS

NWKRTC ಬಸ್‌ನಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್‌ ಟಿಕೆಟ್‌ ವಿತರಣೆ : ಪ್ರಯಾಣಿಕರ ಆಕ್ರೋಶ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಗದಗ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯಡವಟ್ಟಿನಿಂದಾಗಿ ಡಂಬಳ ಮಾರ್ಗವಾಗಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ‘ಜೈ ಮಹಾರಾಷ್ಟ್ರ’, ‘ಮಹಾರಾಷ್ಟ್ರ ರಾಜ್ಯ ಪರಿವಾಹನ್‌’ ಎಂಬ ಲಾಂಛನ ಇರುವ ಟಿಕೆಟ್‌ ಬುಧವಾರ ಪ್ರಯಾಣಿಕರಿಗೆ ವಿತರಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ನಿಗದ ಬಸ್‌ನಲ್ಲಿ ಮಹಾರಾಷ್ಟ್ರ ಸಾರಿಗೆ ನಿಗಮದ ಲಾಂಛನವಿರುವ ಟಿಕೆಟ್‌ ವಿತರಣೆ ಮಾಡಿರುವುದಕ್ಕೆ ರಾಜ್ಯದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು! ಮುಂಡರಗಿ ತಾಲೂಕಿನ ಡೋಣಿ ಗ್ರಾಮದಿಂದ ಗದಗ ನಗರ ಮಾರ್ಗದಲ್ಲಿ ಸಚರಿಸುವ ಬಸ್‌ನಲ್ಲಿ ಟಿಕೆಟ್‌ ಮೇಲೆ ವಾ.ಕ.ರ.ಸಾ.ಸಂಸ್ಥೆ ಗದಗ ಘಟಕ ಎಂದು ಮುದ್ರಿಸಲಾಗಿದೆ. ಆದರೆ, ಆ ಟಿಕೆಟ್‌ ಮಧ್ಯಭಾಗದಲ್ಲಿ ‘ಜೈ ಮಹಾರಾಷ್ಟ್ರ’ ಎಂದು ಮುದ್ರಿಸಲಾಗಿದೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಮೊಹರಿನ ಟಿಕೆಟ್‌ ನೋಡಿದ ಪ್ರಯಾಣಿಕರು ‘ಇದೇನು ಮಹಾರಾಷ್ಟ್ರವೋ, ಕರ್ನಾಟಕವೋ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಈ ರೀತಿ ರಡವಟ್ಟು ಮಾಡಿರುವ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಗೆ ಇಟಿಎಂ ರೋಲ್‌ ಸರಬರಾಜು ಮಾಡುವವರೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೂ ಒದಗಿಸುತ್ತಾರೆ. ಆಕಸ್ಮಿಕವಾಗಿ ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಾಕ್ಸ್‌ ಗದಗ ವಿಭಾಗಕ್ಕೆ ಬಂದಿವೆ ಈ ಬಗ್ಗೆ ಸಿಬ್ಬಂದಿ ಗಮನಿಸದೆ ಈ ಯಡವಟ್ಟು ಆಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಇನ್ನು ಗದಗ ವಿಭಾಗಕ್ಕೆ ಬಂದಿರುವ ಪ್ರತಿ ಬಾಕ್ಸ್‌ನಲ್ಲಿ 300 ರೋಲ್‌ಗಳಿವೆ. ಎರಡು ಬಾಕ್ಸ್‌ ಬಂದಿದ್ದು, ಒಟ್ಟು 600 ರೋಲ್‌ಗಳಿವೆ. ಅವುಗಳಲ್ಲಿ 70 ರೋಣ ಡಿಪೋಗೆ, 60 ರೋಲ್‌ಗಳು ಗದಗ ಡಿಪೋಗೆ ಹಂಚಿಕೆಯಾಗಿವೆ.

ರೋಲ್‌ಗಳನ್ನು ಹಂಚಿಕೆ ಮಾಡುವ ಮುನ್ನ ಗುಮಾಸ್ತರು ಗಮನಿಸಬೇಕಿತ್ತು. ಜತೆಗೆ ನಿರ್ವಾಹಕರು ಟಿಕೆಟ್‌ ಕೊಡುವಾಗಲಾದರೂ ನೋಡಬೇಕಿತ್ತು. ಆದರೆ, ಇಬ್ಬರ ಕಣ್ತಪ್ಪಿನಿಂದಾಗಿ ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ರೋಲ್‌ನಲ್ಲಿ ಟಿಕೆಟ್‌ ಹಂಚಿಕೆಯಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಮಹಾರಾಷ್ಟ್ರ ಮೊಹರು ಇರುವ ಎಲ್ಲ ರೋಲ್‌ಗಳನ್ನು ಹಿಂಪಡೆಯುವಂತೆ ಸೂಚಿಸಲಾಗಿದೆ. ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ನಿಗಮದ ಡಿಸಿ ತಿಳಿಸಿದ್ದಾರೆ.

Leave a Reply

error: Content is protected !!
LATEST
KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC