KSRTC ನೌಕರರ ಶೇ.31ರಷ್ಟು ತುಟ್ಟಿಭತ್ಯೆ 2022 ಜುಲೈ 1ರ ಮೂಲ ವೇತನಕ್ಕೆ ವಿಲೀನಗೊಳಿಸಿ ಎಂಡಿ ಆದೇಶ

- ನಗರ ಪರಿಹಾರ ಭತ್ಯೆ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ 900 ರೂ. ಹಾಗೆಯೇ ಸಿ ಮತ್ತು ಡಿ ಗ್ರೂಪ್ ನೌಕರರಿಗೆ 500ರೂ.ಗಳಿಂದ 750ರೂ.ಗಳಿಗೆ ಹೆಚ್ಚಳ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್ 2024 ರಿಂದ ಜಾರಿಗೆ ಬರುವಂತೆ ಮೂಲ ತುಟ್ಟಿಭತ್ಯೆಯನ್ನಾಗಿ ಪರಿಗಣಿಸುವ ಮತ್ತು ಮಂಜೂರು ಮಾಡಿರುವ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಅವರು ಇಂದು (ಜೂನ್ 26) ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸರ್ಕಾರವು 23ನೇ ಆಗಸ್ಟ್ 2024 ರಲ್ಲಿ ತನ್ನ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ವಿಲೀನಗೊಳಿಸಿ ಸರ್ಕಾರಿ ನೌಕರರ ವೇತನವನ್ನು ಹಾಗೂ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ಮತ್ತು ಇತರೇ ಭತ್ಯೆಗಳ ದರಗಳನ್ನು ಪರಿಷ್ಕರಿಸಿ 1 ನೇ ಆಗಸ್ಟ್ 2024 ರಿಂದ ಆರ್ಥಿಕ ಸೌಲಭ್ಯ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ಕೈಗಾರಿಕಾ ಒಪ್ಪಂದದ ಪ್ರಕಾರ ಸಾರಿಗೆ ನಿಗಮಗಳಲ್ಲಿ ಸಹ ಸರ್ಕಾರದಲ್ಲಿ ಕಾಲಕಾಲಕ್ಕೆ ಮಂಜೂರಾಗುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು ಅದೇ ದರಗಳಲ್ಲಿ ಹಾಗೂ ಅದೇ ದಿನಾಂಕದಿಂದ ಅನ್ವಯಿಸಿ ಪಾವತಿಸಬೇಕಾಗಿರುವುದರಿಂದ, ಮೇಲ್ಕಂಡಂತೆ ಶೇ.31 ರಷ್ಟು ತುಟ್ಟಿಭತ್ಯೆಯನ್ನು, ಮೂಲ ತುಟ್ಟಿಭತ್ಯೆಯನ್ನಾಗಿ ನಿಗದಿಪಡಿಸಲು ಹಾಗೂ ಕೆಳಕಂಡಂತೆ ಪರಿಷ್ಕರಿಸಿರುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು 1 ನೇ ಆಗಸ್ಟ್ 2024 ರಿಂದ ಜಾರಿಗೊಳಿಸಲು ಎಂಡಿ ಆದೇಶ ಹೊರಡಿಸಿದ್ದಾರೆ.
01.07.2022 ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಕಾಲ್ಪನಿಕವಾಗಿ ಈ ಕೆಳಕಂಡಂತೆ ಕ್ರಮಬದ್ಧಗೊಳಿ ಸರ್ಕಾರ ಜಾರಿ ಮಾಡಿದೆ.
ಅಂದರೆ 01.07.2022ರಲ್ಲಿ ಶೂನ್ಯ, 01.01.2023 ಶೇ.2.75, 01.07.2023ರಲ್ಲಿ ಶೇ.5.50 ಹಾಗೂ 01.01.2024ರಲ್ಲಿ ಶೇ. 8.50ರಷ್ಟು ತುಟ್ಟಿಭತ್ಯೆ ಇತ್ತು. ಇದರಂತೆ ಸರ್ಕಾರದ ಪ್ರಸ್ತುತ ಆದೇಶಗಳ ಪ್ರಕಾರ ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯ ಉದ್ದೇಶಕ್ಕಾಗಿ ನಗರಗಳು ಮತ್ತು ಇತರೇ ಸ್ಥಳಗಳ ವರ್ಗೀಕರಣವು ಮುಂದಿನ ಆದೇಶದವರೆಗೆ ಮುಂದುವರಿದು ಅನ್ವಯಿಸತಕ್ಕದ್ದು.
ಅದರಂತೆ 01.08.2024 ರಿಂದ ಅನ್ವಯಿಸುವಂತೆ ಮನೆ ಬಾಡಿಗೆ ಭತ್ಯೆಯ ವಿವಿಧ ದರಗಳನ್ನು ಸರ್ಕಾರ ಈ ಕೆಳಕಂಡಂತೆ ಬದಲಾವಣೆಗೊಳಿಸಿ ಆದೇಶ ಹೊರಡಿಸಿದ್ದು, ಇದು ನಮ್ಮ ಸಾರಿಗೆ ನೌಕರರಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನು ಜನಸಂಖ್ಯೆ ವರ್ಗೀಕರಣದ ಆಧಾರದ ಮೇರೆಗೆ ಮನೆಬಾಡಿಗೆ ಭತ್ಯೆಯ ದರಗಳು 25 ಲಕ್ಷ ಮತ್ತು ಅದಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಶೇ.20 ರಷ್ಟು. ಅದೇ ರೀತಿ 5 ಲಕ್ಷ ಮತ್ತು ಅದಕ್ಕೂ ಹೆಚ್ಚು ಆದರೆ 25 ಲಕ್ಷ ಮೀರದಂತೆ ಜನಸಂಖ್ಯೆ ಇರುವ ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರಿಗೆ ಶೇ.15 ರಷ್ಟು ಹಾಗೂ 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪಟ್ಟಣಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಶೇ.7.5 ರಷ್ಟು ಮನೆಬಾಡಿಗೆ ಭತ್ಯೆ ದರವನ್ನು ನಿಗದಿಪಡಿಸಿದೆ.
ಅದರಂತೆ ಈ ಕೆಳಗೆ ನಮೂದಿಸಿರುವ ನಗರಗಳು /ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವರ್ಗದ ನೌಕರರಿಗೆ/ ಅಧಿಕಾರಿಗಳಿಗೆ ಲಭ್ಯವಿರುವ ನಗರ ಪರಿಹಾರ ಭತ್ಯೆಯು ಅವುಗಳ ಮುಂದೆ ನಮೂದಿಸಿ ನಿಗದಿಪಡಿಸಿರುವ ದರಗಳಲ್ಲಿ 01ನೇ ಆಗಸ್ಟ್ 2024 ರಿಂದ ಜಾರಿಗೊಳಿಸತಕ್ಕದ್ದು.
ನಗರ ಪರಿಹಾರ ಭತ್ಯೆಯ ದರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ 900 ರೂ. ಹಾಗೆಯೇ ಸಿ ಮತ್ತು ಡಿ ಗ್ರೂಪ್ ನೌಕರರಿಗೆ 500ರೂ.ಗಳಿಂದ 750ರೂಗಳಿಗೆ ಅಂದರೆ 250 ರೂಪಾಯಿ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ಬೆಳಗಾವಿ(ಯು.ಎ.), ಹುಬ್ಬಳ್ಳಿ-ಧಾರವಾಡ ಮಂಗಳೂರು (ಯು.ಎ) ಮೈಸೂರು(ಯು.ಎ.) ಕಲಬುರಗಿ ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ 700 ರೂ. ಹಾಗೆಯೇ ಸಿ ಮತ್ತು ಡಿ ಗ್ರೂಪ್ ನೌಕರರಿಗೆ 600 ರೂಗಳಿಗೆ ಹೆಚ್ಚಿಸಿದ್ದಾರೆ. ಇದು ಸಾರಿಗೆ ಸಾರಿಗೆ ಅಧಿಕಾರಿಗಳು ಮತ್ತು ನೌಕರರಿಗೂ ಅನ್ವಯವಾಗಲಿದೆ.
ಈ ಪ್ರಯುಕ್ತ ದಿನಾಂಕ 01.08.2024ರಲ್ಲಿ ನಿಗಮದ ಸೇವೆಯಲ್ಲಿದ್ದಂತಹ ಪ್ರತಿ ಅಧಿಕಾರಿ/ ನೌಕರರಿಗೆ ಕಾಲ್ಪನಿಕವಾಗಿ ನಿಗದಿಪಡಿಸಿರುವಂತೆ 01.07.2022 ರ ಮೂಲವೇತನದ ಮೇಲೆ ಶೇ.31 ರಷ್ಟನ್ನು ಮೂಲತುಟ್ಟಿಭತ್ಯೆಯನ್ನಾಗಿ ನಿಗದಿಗೊಳಿಸಿ (50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಹಾಗೂ 50 ಪೈಸೆಗಿಂತ ಕಡಿಮೆ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು) ಈ ಮೊತ್ತವನ್ನು ಸ್ಪಷ್ಟವಾಗಿ ಅವರ ಸೇವಾ ಪುಸ್ತಕದಲ್ಲಿ ನಮೂದಿಸಿ ಆಡಳಿತಾಧಿಕಾರಿ/ಸಹಾಯಕ ಆಡಳಿತಾಧಿಕಾರಿಯವರಿಂದ ದೃಡೀಕರಿಸತಕ್ಕದ್ದು.
ಈ ನಡಾವಳಿ/ದಾಖಲಾತಿಯನ್ನು ಸಂಬಂಧಿತ ವಿಭಾಗದ ಲೆಕ್ಕಾಧಿಕಾರಿ/ ಸಹಾಯಕ ಲೆಕ್ಕಾಧಿಕಾರಿಯವರಿಂದ ಆಡಿಟ್ ಮಾಡಿಸತಕ್ಕದ್ದು. ತದನಂತರ ಆಯಾ ಅಧಿಕಾರಿ/ ನೌಕರರಿಗೆ ಲಭ್ಯವಾಗುವ ಮೂಲತುಟ್ಟಿಭತ್ಯೆಯನ್ನು ಎಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಅಳವಡಿಸಲು ಆಡಳಿತ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳುವುದು.
ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗೆ ಸಂಬಂದಪಟ್ಟಂತೆ 01.08.2024 ರಿಂದ ಅನ್ವಯವಾಗುವಂತೆ ಸುತ್ತೋಲೆ ಕ್ರಮ ಸಂಖ್ಯೆ (4) ಮತ್ತು (5) ರಲ್ಲಿ ನೀಡಿರುವ ದರಗಳನ್ನು ಅನ್ವಯವಾಗುವ ನಗರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸೀಮಿತಗೊಳಿಸಿದಂತೆ ಪ್ರಸ್ತುತ ಮೂಲ ವೇತನ ಹಾಗೂ 01.07.2022 ರ ಮೂಲ ವೇತನ ಮೊತ್ತದ ಮೇಲೆ ನಿಗದಿಗೊಳಿಸಲಾದ ಶೇ 31 ರ ಮೂಲ ತುಟ್ಟಿಭತ್ಯೆಯ ಒಟ್ಟು ಮೊತ್ತದ ಮೇಲೆ ಲೆಕ್ಕಾಚಾರ ಮಾಡಿ ಜುಲೈ-2025 ರ ಮಾಹೆಯ ವೇತನದಿಂದ ಮತ್ತು ಮುಂದಕ್ಕೆ ಪಾವತಿಸುವುದು ಹಾಗೂ ಆಗಸ್ಟ್-2024 ರಿಂದ ಜೂನ್-2025 ರವರೆಗಿನ 11 ತಿಂಗಳ ವ್ಯತ್ಯಾಸವನ್ನು ಪ್ರತ್ಯೇಕವಾಗಿ ಲೆಕ್ಕಾಚಾರ ಮಾಡುವುದು.
ಜುಲೈ-2025 ರಿಂದ ಮತ್ತು ಮುಂದಕ್ಕೆ ಸಂಸ್ಥೆಯಲ್ಲಿ ನಿವೃತ್ತರಾಗುವ ಮತ್ತು ರಾಜಿನಾಮೆ. ಮರಣ, ವಜಾ ಮುಂತಾದ ಪ್ರಕರಣಗಳಲ್ಲಿ ಪಾವತಿಸಲಾಗುವ ಉಪದಾನ ಮೊತ್ತವನ್ನು ಲೆಕ್ಕಾಚಾರ ಮಾಡಲು ಸೇವಾಂತ್ಯದ ದಿನಾಂಕದಂದು ಇರುವ ಮೂಲ ವೇತನ ಮೊತ್ತಕ್ಕೆ ಮೇಲ್ಕಂಡಂತೆ ನಿಗದಿಗೊಳಿಸಲಾದ ಶೇ.31ರ ಮೂಲ ತುಟ್ಟಿಭತ್ಯೆಯ ಮೊತ್ತವನ್ನು ಕೂಡಿಸಿ ಉಪದಾನ ಮೊತ್ತವನ್ನು ಉಪದಾನ ಕಾಯ್ದೆ 1972 ಅಥವಾ ಸಂಸ್ಥೆಯ ಉಪದಾನ ನಿಯಮಾವಳಿ ಅನ್ವಯ ಲೆಕ್ಕಾಚಾರ ಮಾಡಿ ಇವುಗಳಲ್ಲಿ ಉದ್ಯೋಗಿಗೆ ಯಾವುದು ಲಾಭದಾಯಕವಾಗುವುದೋ ಆ ಮೊತ್ತವನ್ನು (ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ಉಪಧನ ಸುತ್ತೋಲೆಗಳನ್ವಯ) ಪಾವತಿ ಮಾಡುವುದು (1972 ರ ಉಪದಾನ ಕಾಯ್ದೆಯ ಕಡ್ಡಾಯವಾಗಿ ಅನ್ವಯಿಸುವ ಉದ್ಯೋಗಿಗಳನ್ನು ಹೊರತುಪಡಿಸಿ)
ಜುಲೈ-2025 ರಿಂದ ಮುಂದಕ್ಕೆ ಗಳಿಕೆ ರಜೆ ನಗದೀಕರಣ ಮೊತ್ತವನ್ನು ಸೇವೆಯಲ್ಲಿ ಮುಂದುವರಿದ ಹಾಗೂ ಸೇವಾಂತ್ಯಗೊಂಡ ಪ್ರಕರಣಗಳಲ್ಲಿ ಪಾವತಿ ಮಾಡುವಾಗ ಮೂಲ ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ಕೂಡಿಸಿ ಲೆಕ್ಕಾಚಾರ ಮಾಡುವುದು.
KSRTC ನಿಗಮದಲ್ಲಿ ಆಗಸ್ಟ್-2024 ರಿಂದ ಜೂನ್-2025 ರವರೆಗಿನ ಮಾಹೆಗಳಲ್ಲಿ ಸೇವಾ ನಿರತ ಮತ್ತು ಸೇವಾ ವಿಮುಕ್ತಿ ಹೊಂದಿದವರಿಗೆ ಮೂಲತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ/ ನಗರ ಪರಿಹಾರ ಭತ್ಯೆಗಳ ನಿಗದಿಯಿಂದ ಉಂಟಾಗುವ ವ್ಯತ್ಯಾಸಗಳನ್ನು ಲೆಕ್ಕಾಚಾರಗೊಳಿಸಿ ಪಾವತಿಸಲು ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು.
ಸಹೋದರ ಸಂಸ್ಥೆಗಳಾದ BMTC/ NWKRTC/ KKRTC ಸಂಸ್ಥೆಗಳು ಹಿಂಬಾಕಿ ಪಾವತಿಯ ಕುರಿತು ಆಯಾ ಸಂಸ್ಥೆಗಳು ಆರ್ಥಿಕ ಪರಿಸ್ಥಿತಿಗನುಗುಣವಾಗಿ ನಿರ್ಧರಿಸುವುದು. ಈ ಮೇಲಿನಂತೆ ಜುಲೈ-2025 ರ ವೇತನದಲ್ಲಿ ಮತ್ತು ಮುಂದಕ್ಕೆ ಪಾವತಿಸಬೇಕಾಗಿರುವ ಪರಿಷ್ಕೃತ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳು ಎಲ್ಲ ಅಧಿಕಾರಿ ಮತ್ತು ನೌಕರರಿಗೂ ಸಹ ಅನ್ವಯವಾಗಲಿದ್ದು, ಈ ಕಚೇರಿಯಿಂದ ಪರಿಷ್ಕೃತ ವೇತನ ಪಟ್ಟಿಗಳನ್ನು ನಿರೀಕ್ಷೆ ಮಾಡದೇ ಮೇಲ್ಕಂಡಂತೆ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸ್ಥೆಯ ಎಂಡಿ ಆದೇಶ ಹೊರಡಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಈ ಪಿಡಿಎಫ್ ಫೈಲ್ ನೋಡಬಹುದು: BDA circular 04-1
Related

You Might Also Like
ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು: ಸಿಎಂ ಸಿದ್ದರಾಮಯ್ಯ ಸಲಹೆ
ಬೆಂಗಳೂರು: ಸರ್ಕಾರಿ ನೌಕರರು ಜಾತಿ, ಧರ್ಮ ಮಾಡಬಾರದು. ಇದು ವೃತ್ತಿಗೆ ಮಾಡುವ ಅವಮಾನ. ನಮ್ಮ ಮೇಲೆ, ಸರ್ಕಾರಿ ನೌಕರರ ಮೇಲೆ ಸಮಾಜದ ಋಣ ಇದೆ ಎಂದು ಮುಖ್ಯಮಂತ್ರಿ...
ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ
ಮೈಸೂರು: ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಲ್ಯಕ್ಕೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಇಂದು ಭೇಟಿ ನೀಡಿ ಆಹಾರ ಧಾನ್ಯಗಳ...
ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು: ಆಯುಕ್ತ ಸತೀಶ್
ಬೆಂಗಳೂರು: ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪಾಲಿಕೆ ವ್ಯಾಪ್ತಿಯ ರಾಜರಾಜೇಶ್ವರಿನಗರ ವಲಯದಲ್ಲಿ...
ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದರೆ ನಿವೇಶನ ಮಾಲೀಕರಿಗೆ ದಂಡ ವಿಧಿಸಿ: ಸ್ನೇಹಲ್
ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹಣೆಯಾದಲ್ಲಿ ನಿವೇಶನ ಮಾಲೀಕರಿಗೆ ನೋಟಿಸ್ ನೀಡಿ ದಂಡ ವಿಧಿಸುವಂತೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೂರ್ವ...
KSRTC ಅಧಿಕಾರಿಗಳು ಕಚೇರಿಗೆ ಬಂದಾಗ ತಮ್ಮ ಹಣ ಎಷ್ಟಿತ್ತು ಹೋಗುವಾಗ ಎಷ್ಟಿದೆ ಅಂತ ತಿಳಿಸಬೇಕು: ಎಂಡಿ ಆದೇಶ
ಬೆಂಗಳೂರು: ರಾಜ್ಯ ಸರ್ಕಾರವು ಕಚೇರಿಗಳಲ್ಲಿ ನಗದು ಘೋಷಣೆ ವಹಿ ನಿರ್ವಹಣೆ ಕುರಿತು ವಿವರವಾಗಿ ಮಾರ್ಗಸೂಚಿಗಳನ್ನು ನೀಡಿ, ನಿಗಮ/ ಮಂಡಳಿಗಳಲ್ಲಿ ಸಹ ನಗದು ಘೋಷಣೆ ವಹಿ ನಿರ್ವಹಣೆ ಮಾಡುವಂತೆ...
ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ನ್ಯಾ.ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿಭು ಬಖ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ...
BMTC ನೌಕರರಿಗೆ ಕಿರುಕುಳ: ಸಮಸ್ಯೆ ಕೇಳದ ಘಟಕ- 20ರ ಡಿಎಂ- ಸರ್ವಾಧಿಕಾರಿಯ ವರ್ತನೆ
2 ಗಂಟೆ ಬಳಿಕ ತನ್ನ ಕಚೇರಿ ಬಾಗಿಲು ಹಾಕಿಕೊಂಡು ಚೇಳಗಳ ಜತೆ ಹರಟೆ ನೌಕರರ ಸಮಸ್ಯೆ ಬಗೆಹರಿಸದೆ ದರ್ಪ ಮೆರೆಯುತ್ತಿರುವ ಕಿರಾತಕ ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ...
BMTC: ಹೋಟೆಲ್ಗೆ ನುಗ್ಗಿದ ಎಲೆಕ್ಟ್ರಿಕ್ ಬಸ್, ಓರ್ವ ಯುವತಿ ಸಾವು, ಮೂವರಿಗೆ ಗಾಯ
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಸಾರಿಗೆಯ ಎಲೆಕ್ಟ್ರಿಕ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಫುಟ್ಪಾತ್ಗೆ ನುಗ್ಗಿದ ಪರಿಣಾಮ ಯುವತಿಯೋರ್ವರು ಮೃತಪಪ್ಟಿದ್ದು, ಫುಟ್ಪಾತ್ ಮೇಲೆ...
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...