NEWSದೇಶ-ವಿದೇಶ

ರ‍್ಯಾಂಕ್ ಪಡೆಯಲು ನನ್ನ ಮಗನಿಗೇ ಪೈಪೋಟಿ ನೀಡುತ್ತೀಯ ಎಂದು ವಿಷಹಾಕಿ ವಿದ್ಯಾರ್ಥಿ ಕೊಂದ ಸಹಪಾಠಿಯ ಪಾಪಿತಾಯಿ

ವಿಜಯಪಥ ಸಮಗ್ರ ಸುದ್ದಿ

ಪುದುಚೇರಿ: ವಿದ್ಯೆ ಕಲಿಯುವುದರಲ್ಲಿ ನನ್ನ ಮಗನಿಗೆ ಪೈಪೋಟಿ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬಳು ತನ್ನ ಮಗನ ಸಹಪಾಠಿಗೆ ವಿಷ ಉಣಿಸಿ ಕೊಂದಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.

ನಗರದ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಬಾಲ ಮಣಿಕಂಠನ್ ಹತ್ಯೆಯಾದ ಬಾಲಕ. ಶಾಲೆಯಲ್ಲಿ ತಲೆತಿರುಗಿ ಬಿದ್ದಿದ್ದರಿಂದ ಅವೆ ತಾಯಿಯನ್ನು ಕರೆಸಿ ಮನೆಗೆ ಹಿಂದುರುಗಿದಾಗ ತೂಕಡಿಸಲು ಆರಂಭಿಸಿದನು ಬಾಲಕ. ಆ ವೇಳೆ ಶಾಲೆಯಲ್ಲಿ ಏನಾದರೂ ತಿಂದಿದ್ದೀಯಾ ಎಂದು ಕೇಳಿದ್ದಾರೆ. ಆ ವೇಳೆ ನಮ್ಮ ಶಾಲೆಯ ವಾಚ್‌ಮನ್‌ ಜೂನ್‌ ನೀಡಿದ್ದು, ಅದನ್ನು ಕುಡಿದ ನಂತರ ಕುಸಿದು ಬಿದ್ದಿದ್ದಾಗಿ ಬಾಲಕ ತಿಳಿಸಿದ್ದಾನೆ.

ಕೂಡಲೇ ಬಾಲನನ್ನು ಕಾರೈಕ್ಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಾಚ್‌ಮನ್‌ ಏಕೆ ಜ್ಯೂಸ್ ನೀಡಿರಬಹುದು ಎಂದು ಪೋಷಕರು ಮತ್ತು ಆತನ ಸಂಬಂಧಿಕರು ವಿಚಾರಿಸಿದಾಗ ಮಹಿಳೆಯೊಬ್ಬರು ತನ್ನ ಬಳಿಗೆ ಬಂದು ಎರಡು ಜ್ಯೂಸ್ ಬಾಟಲಿಗಳನ್ನು ನೀಡಿ, ಬಾಲ ಅವರ ಮನೆಯವರು ಕಳುಹಿಸಿದ್ದಾರೆ ಎಂದು ತಿಳಿಸಿದ್ದಾಗಿ ಆ ಬಳಿಕ ನಿಮ್ಮ ಮಗುವಿಗೆ ಆ ಜೂಸ್‌ ಕೊಟ್ಟಿದ್ದಾಗಿ ಹೇಳಿದ್ದಾನೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬರು ವಾಚ್‌ಮನ್‌ಗೆ ಜ್ಯೂಸ್ ನೀಡುತ್ತಿರುವುದು ಕಂಡುಬಂದಿದೆ. ನಂತರ ಆಕೆಯನ್ನು ಬಾಲನ ಸಹಪಾಠಿ ಅರುಲ್ ಮೇರಿಯ ತಾಯಿ ಸಗಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿದೆ.

ಆದರೆ, ಜೂಸ್‌ಕುಡಿರು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಬಾಲ ಚಿಕಿತ್ಸೆ ಫಲಾಕಾರಿಯಾಗದೇ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೃತ ವಿದ್ಯಾರ್ಥಿಯ ಪೋಷಕರು ಹಾಗೂ ಸಂಬಂಧಿಕರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದ ಪೊಲೀಸರು ಸಗಾಯರಾಣಿ ವಿಕ್ಟೋರಿಯಾಳನ್ನು ಬಂಧಿಸಿದ್ದಾರೆ.

ಈ ಕುರಿತಂತೆ ವಿಚಾರಣೆ ನಡೆಸಿದಾಗ, ತನ್ನ ಮಗ ಅರುಲ್ ಮೇರಿ ಮತ್ತು ಬಾಲ ನಡುವೆ ಅಂಕ ಗಳಿಸುವ ವಿಚಾರವಾಗಿ ಮತ್ತು ತರಗತಿಯಲ್ಲಿ ರ‍್ಯಾಂಕ್ ಪಡೆಯಲು ಪೈಪೋಟಿ ಇತ್ತು. ಇದರಿಂದಾಗಿ ಆಗಾಗ ಸಣ್ಣ-ಪುಟ್ಟ ಜಗಳವಾಗುತ್ತಿತ್ತು. ಅದರಿಂದ ಅಸಮಾಧಾನಗೊಂಡು ಈ ಕೃತ್ಯ ವೆಸಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

ಎರಡು ಮಕ್ಕಳ ನಡುವೆ ಓದಿನಲ್ಲಿ ಪೈಪೋಟಿ ಇದೆ ಎಂದರೆ ಖುಷಿ ಪಡುವ ವಿಚಾರ. ಒಬ್ಬರಿಗಿಂತ ಒಬ್ಬರು ಓದಿನಲ್ಲಿ ಮುಂದೆ ಬರಬೇಕು ಎಂದು ಹೆಚುಹೆಚ್ಚಾಗಿ ಓದುವುದನ್ನು ರೂಡಿಸಿಕೊಳ್ಳುತ್ತಿದ್ದರು. ಆದನ್ನು ತಿಳಿಯದೆ ಈ ಮಹಾತಾಯಿ ಈ ರೀತಿ ವಿಷ ಹಾಖಿ ಒಬ್ಬ ಒಳ್ಳೆ ವಿದ್ಯಾರ್ತಿಯನ್ನು ಕೊಂದಿರುವುದಕ್ಕೆ ತಕ್ಕ ಶಿಕ್ಷೆ ಆಗಲೇ ಬೇಕು ಎಂದು ಶಾಲೆಯ ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್