Vijayapatha – ವಿಜಯಪಥ
Saturday, November 2, 2024
NEWS

ಹೊಸ ವರ್ಷಾಚರಣೆ: ರಸ್ತೆ ಬ್ಲಾಕ್‍ಮಾಡಿ ಮೈಮರೆತು ನಿಂತವರ ಮೇಲೆ ಲಾಠಿ ಬೀಸಿ ಎಚ್ಚರಿಸಿದ ಪೊಲೀಸ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹೊಸ ವರ್ಷಾಚರಣೆಗಾಗಿ ಮಧ್ಯರಾತ್ರಿ ಕೋರಮಂಗಲದ ಮುಖ್ಯ ರಸ್ತೆಯಲ್ಲಿ 40 ಸಾವಿರಕ್ಕೂ ಹೆಚ್ಚು ನಾಗರಿಕರು ಸೇರಿದ್ದರು. 100ಕ್ಕೂ ಹೆಚ್ಚು ಬಾರ್, ಪಬ್, ರೆಸ್ಟೋರೆಂಟ್‍ಗಳು ಕಿಕ್ಕಿರಿದಿದ್ದವು. ಖಾಸಗಿ ಪಬ್ ಕಾರಿಡರ್‌ನಲ್ಲಿ ಪ್ರೇಮಿಗಳು ಮೈಮರೆತು ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಎಲ್ಲವನ್ನು ನೋಡಿಕೊಂಡು ರಸ್ತೆ ಬ್ಲಾಕ್‍ಮಾಡಿ ಮೈಮರೆತು ನಿಂತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಪಬ್‍ಗಳೆಲ್ಲವೂ ಹೌಸ್ ಫುಲ್ ಆಗಿದ್ದವು. 12 ಗಂಟೆಯ ನಂತರ ಪಬ್‍ಗಳಿಂದ ಹೊರ ಬಂದ ನೂರಾರು ಯುವತಿಯರು, ಕುಡಿದು ಅಮಲು ಹೆಚ್ಚಾಗಿ ಬೀದಿ ಬೀದಿಗಳಲ್ಲಿ ಬಿದ್ದಿದ್ರು. ರಾಣಿ ಚೆನ್ನಮ್ಮ ಪಡೆ, ಮಹಿಳಾ ಪೊಲೀಸರು ಕುಡಿದು ಪ್ರಜ್ಞೆ ತಪ್ಪಿಬಿದ್ದ ಯುವತಿಯರನ್ನು ಪೊಲೀಸ್ ಚೌಕಿಗಳಲ್ಲಿ ಬಿಟ್ಟು ಕಂಟ್ರೋಲ್ ಮಾಡಿದ್ರು. ಇನ್ನೊಂದೆಡೆ ಯುವತಿಯನ್ನು ಚುಡಾಯಿಸಿದ್ದಕ್ಕೆ ಗಲಾಟೆ ನಡೀತು. ಬಳಿಕ ಪೊಲೀಸರು ಜನಜಂಗುಳಿಯನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ನಡುವೆ ನಗರದಲ್ಲಿ ನಡೆದ ಹೊಸ ವರ್ಷದ ಸಂಭ್ರಮ ದೊಡ್ಡ ದಾಖಲೆ ಎಂದೇ ಹೇಳಬಹುದು. ಯಾಕಂದ್ರೆ ಪೊಲೀಸರು ನಿರೀಕ್ಷೆ ಮಾಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಯುವ ಸಮೂಹ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿತ್ತು. ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂ.ಜಿ ರಸ್ತೆಯಲ್ಲಿ ಸಂಭ್ರಮಾಚರಣೆಗೆ ಬಂದ ಯುವಜನರ ಸಂಖ್ಯೆ 3 ಲಕ್ಷಕ್ಕೂ ಹೆಚ್ಚಿತ್ತು.

ಒಂದೆರಡು ಕಡೆ ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ, ಉಳಿದಂತೆ ಸಿಲಿಕಾನ್ ಸಿಟಿಯಲ್ಲಿ ಹೊಸ ಸಂಭ್ರಮಾಚರಣೆ ಯಶಸ್ವಿಯಾಗಿ ನಡೆದಿದೆ. 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿಸಿಟಿವಿ ಕಣ್ಗಾವಲಿನಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಹಾಗಾಗಿ ಕೊರೊನಾ ರೂಪಾಂತರಿ ಆತಂಕದ ಮಧ್ಯೆ ಜನ ಸಂಭ್ರಮದಲ್ಲಿ ಮಿಂದೆದ್ದರು.

ಒಟ್ಟಾರೆ ಈ 2023ರ ಹೊಸ ವರ್ಷವನ್ನು ಯುವ ಸಮೂಹ ತಾವು ಅಂದುಕೊಂಡಂತೆ ಆಚರಿಸಿದ್ದೇವೆ ಎಂಬ ಖುಷಿಯಲ್ಲಿ ತೇಲುತ್ತಿದ್ದಾರೆ ಎಂದೇ ಹೇಳಬಹುದು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ