ಬೆಂಗಳೂರು: ಅಸಾಧಾರಣ ರಾಷ್ಟ್ರಪ್ರೇಮಿ, ಧೀಮಂತ ಸಾಧಕ, ಭಾರತದ ಸರ್ವತೋಮುಖ ಅಭ್ಯುದಯದ ಕನಸು ಕಂಡ ಭಾರತರತ್ನ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.
ದೇಶಕ್ಕಾಗಿ ಸದಾ ತುಡಿಯುತ್ತಿದ್ದ ಕಲಾಂ, ಭೇಟಿಯಾದಾಗಲೆಲ್ಲಾ ಅಭಿವೃದ್ಧಿ ಬಗ್ಗೆಯೇ ಮಾತನಾಡುತ್ತಿದ್ದರು. ಅವರ ವ್ಯಕ್ತಿತ್ವ, ಸಾಧನೆ, ಪರಿಕಲ್ಪನೆಗಳು ಆದರ್ಶಪ್ರಾಯವಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಸಾಧಾರಣ ರಾಷ್ಟ್ರಪ್ರೇಮಿ, ಧೀಮಂತ ಸಾಧಕ, ಭಾರತದ ಸರ್ವತೋಮುಖ ಅಭ್ಯುದಯದ ಕನಸು ಕಂಡ ಭಾರತರತ್ನ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು. ದೇಶಕಾಗಿ ಸದಾ ತುಡಿಯುತ್ತಿದ್ದ ಕಲಾಂ, ಭೇಟಿಯಾದಾಗಲೆಲ್ಲಾ ಅಭಿವೃದ್ಧಿ ಬಗ್ಗೆಯೇ ಮಾತನಾಡುತ್ತಿದ್ದರು. ಅವರ ವ್ಯಕ್ತಿತ್ವ, ಸಾಧನೆ, ಪರಿಕಲ್ಪನೆಗಳು ಆದರ್ಶಪ್ರಾಯವಾಗಿದೆ. pic.twitter.com/4sDB12O8BX
— B.S. Yediyurappa (@BSYBJP) October 15, 2020