ಬೆಂಗಳೂರು: ಕೊನೆಗೂ, 2020ರ ಮೂರೂ ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯುತ್ತಿದ್ದಾರೆ. ಈ ಮೂಲಕ ಲಕ್ಷಾಂತರ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೊರೆಯುವ ಚಳಿ, ಮಳೆ, ಬಿಸಿಲುಗಳಿಗೆ ಹೆದರದೇ ನಡೆಸಿದ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಚಂಚಾಲಕಿ ಶಾಂತಲಾ ದಾಮ್ಲೆ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಈ ಹೋರಾಟದಲ್ಲಿ ಆಗಿಹೋದ 700 ಜನರ ಪ್ರಾಣಬಲಿ, ಅನೇಕ ಕೊಲೆಗಳು, ಹೋರಾಟಗಾರರನ್ನು ದೇಶದ್ರೋಹಿಗಳೆಂದು ಜರಿದು ನೀರು, ಟಾಯ್ಲೆಟ್ ಗಳ ಸೌಲಭ್ಯಗಳನ್ನೂ ಕೊಡದೆ, ಪೊಲೀಸ್ ದೌರ್ಜನ್ಯ ಮಾಡಿಸಿದ ಕೆಲವು ರಾಜ್ಯ ಸರ್ಕಾರಗಳ ಕ್ರೂರ ವರ್ತನೆ, ಇವೆಲ್ಲ ಪಾಪಗಳಿಗೆ ಪ್ರಧಾನ ಮಂತ್ರಿಗಳೇ ನೇರ ಹೊಣೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ನರೇಂದ್ರಮೋದಿಯವರು ಕಾಯ್ದೆಗಳನ್ನು ಹಿಂಪಡೆಯುವುದರ ಜೊತೆಗೆ ರೈತರ, ದೇಶದ ಜನರ ಕ್ಷಮಾಪಣೆಯನ್ನೂ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ನರೇಂದ್ರ ಮೋದಿಯವರೇ, ನಿಮಗೆ ಇತ್ತೀಚಿನ ಚುನಾವಣೆಗಳಲ್ಲಿ ನಿಮ್ಮ ಪಕ್ಷದ ಸೋಲು ಮತ್ತು ಮುಂಬರುವ 5 ರಾಜ್ಯಗಳ ಚುನಾವಣೆ ಹೊರತಾದ ನಿಜವಾದ ಕಾಳಜಿ ಇದ್ದಲ್ಲಿ ಮೂರು ಕಾಯ್ದೆಗಳನ್ನು ಸಂಸತ್ ಅಧಿವೇಶನಕ್ಕೆ ಕಾಯದೆ ಸುಗ್ರೀವಾಜ್ಞೆ ಮೂಲಕ ತಕ್ಷಣ ಹಿಂಪಡೆಯಿರಿ ಎಂದು ತಾಕೀತು ಮಾಡಿದ್ದಾರೆ.
ಕೊನೆಗೂ, 2020ರ ಮೂರೂ ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯುತ್ತಿದ್ದಾರೆ. ಲಕ್ಷಾಂತರ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೊರೆಯುವ ಚಳಿ, ಮಳೆ, ಬಿಸಿಲುಗಳಿಗೆ ಹೆದರದೇ ನಡೆಸಿದ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ (1/4)
— Shanthala Damle | ಶಾಂತಲಾ ದಾಮ್ಲೆ (@ShanthalaDamle) November 19, 2021