Vijayapatha – ವಿಜಯಪಥ
Friday, November 1, 2024
CrimeNEWSಕ್ರೀಡೆದೇಶ-ವಿದೇಶ

ವಿಮಾನ ಅಪಘಾತ: ನಾಲ್ವರು ಫುಟ್‌ಬಾಲ್‌ ಆಟಗಾರರೂ ಸಜೀವ ದಹನ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬ್ರೆಜಿಲ್: ಟೊಕಾಂಟಿನ್ಸ್‌ ಉತ್ತರ ರಾಜ್ಯದಲ್ಲಿ ನಿನ್ನೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಬ್ರೆಜಿಲಿಯನ್‌ ಫುಟ್ಬಾಲ್‌ ಕ್ಲಬ್‌ನ ಪಾಲ್ಮಸ್‌ ಸೇರಿ ನಾಲ್ವರು ಫುಟ್ಬಾಲ್‌ ಆಟಗಾರರು ದುರ್ಮರಣಕ್ಕೀಡಾಗಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ವಿಲ ನೋವಾ ವಿರುದ್ಧ ಆಟವಾಡಲು ಗೋಯಾನಿಯಾಗೆ ಫುಟ್ಬಾಲ್‌ ಆಟಗಾರರು ವಿಮಾನದಲ್ಲಿ ತೆರಳುತ್ತಿದ್ದರು. ವಿಮಾನ ಟೇಕ್‌ಆಫ್‌ ಆಗುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಕೊರೊನಾ ಪರೀಕ್ಷೆ ನಡೆಸಿದ ನಂತರ ತಂಡದಿಂದ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಅಧ್ಯಕ್ಷ ಲ್ಯೂಕಾಸ್ ಮೀರಾ ಮತ್ತು ಆಟಗಾರರಾದ ಲ್ಯೂಕಾಸ್ ಪ್ರಾಕ್ಸೆಡೆಸ್, ಗಿಲ್ಹೆರ್ಮ್ ನೊ, ರಾನುಲೆ ಮತ್ತು ಮಾರ್ಕಸ್ ಮೊಲಿನಾರಿ ಮತ್ತು ಪೈಲಟ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕೋವಿಡ್ -19 ಪರೀಕ್ಷೆ ನಡೆಸಿದ್ದರಿಂದ ಆಟಗಾರರು ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಕ್ಲಬ್ ವಕ್ತಾರ ಇಜಾಬೆಲಾ ಮಾರ್ಟಿನ್ಸ್ ತಿಳಿಸಿದ್ದು, ಅಪಘಾತದ ಕಾರಣ ತಕ್ಷಣವೇ ತಿಳಿದುಬಂದಿಲ್ಲ.

ಅವಳಿ- ಇಂಜಿನ್ ಬ್ಯಾರನ್ ಮಾದರಿಯು ಆರು ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ ಎಂದು ಟೋಕಾಂಟಿನ್ಸ್ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ರನ್‌ವೇಯಿಂದ 500 ಮೀಟರ್ ದೂರದಲ್ಲಿರುವ ಅಪಘಾತ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಾಗ ವಿಮಾನವು ಸುಟ್ಟುಹೋಗಿತ್ತು.

ಬ್ರೆಜಿಲ್ ಫುಟ್ಬಾಲ್ ಒಕ್ಕೂಟವು ಪಾಲ್ಮಾಸ್ ಸದಸ್ಯರು ಮತ್ತು ಕ್ಲಬ್‌ನ ಅಭಿಮಾನಿಗಳು ಒಟ್ಟಾಗಿ ಶೋಕಾಚರಣೆ ಆಚರಿಸುವಂತೆ ಜತೆಗೆ ಭಾನುವಾರ ಆಡಿದ ಎಲ್ಲಾ ಪಂದ್ಯಗಳಲ್ಲಿ ಒಂದು ನಿಮಿಷ ಮೌನಾಚರಣೆ ಮಾಡುವಂತೆ ಆದೇಶಿಸಿದೆ.

ಮೃತ ಕುಟುಂಬದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆದೇವರು ನೀಡಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ