ನ್ಯೂಡೆಲ್ಲಿ: ತಮ್ಮ ಸರ್ಕಾರದ 100 ದಿನಗಳ ಸಾಧನೆಗೆ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೃತ್ ಯೋಜನೆ ಬಗ್ಗೆ ಇನ್ನಷ್ಟು ಸುಧಾರಣೆ ತರಲು ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಪದವಿ ಸ್ವೀಕರಿಸಿ ಶತದಿನದ ಸಂಭ್ರಮದ ನಡುವೆಯೇ ಬಿಟ್ಕಾಯಿನ್ ಸುಳಿ ವಿವಾದಕ್ಕೆ ಗುರಿಯಾದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಗುರುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಧಾನಿ ಅವರನ್ನು ಭೇಟಿ ಮಾಡಿ ರಾಜ್ಯದ ಅನೇಕ ಬೆಳವಣಿಗೆ ಸೇರಿದಂತೆ ತಮ್ಮ ಸರ್ಕಾರದ ಶತ ದಿನದ ಸಾಧನೆ ಕುರಿತು ವಿವರಣೆ ನೀಡಿದ್ದು, ಈ ವೇಳೆ ತಮ್ಮ ಸರ್ಕಾರದ 100 ದಿನಗಳ ಸಾಧನೆಗೆ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೃತ್ ಯೋಜನೆ ಬಗ್ಗೆ ಇನ್ನಷ್ಟು ಸುಧಾರಣೆ ತರಲು ಸೂಚನೆ ನೀಡಿದ್ದಾರೆ ಎಂದರು.
ಇನ್ನು ಪ್ರಧಾನಿ ಮೋದಿ ಅವರನ್ನು ಬೆಂಗಳೂರಿಗೆ ಆಹ್ವಾನಿಸಿದ್ದು, ಡಿಸೆಂಬರ್ಗೆ ಅವರು ಬರುವ ನಿರೀಕ್ಷೆ ಇದೆ. ಇಂದು ಪ್ರಧಾನಿ ಅವರ ಭೇಟಿ ಒಳ್ಳೆಯ ರೀತಿಯಲ್ಲಿ ಆಗಿದೆ. ಈ ವೇಳೆ ಆಡಳಿತದ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ.
ಮುಂದಿನ ತಿಂಗಳು ಬೆಂಗಳೂರಿಗೆ ಆಹ್ವಾನಿಸಿದ್ದೇನೆ. ಬೆಂಗಳೂರು ಸರ್ಬನ್ ರೈಲ್ವೆ ಯೋಜನೆ ಉದ್ಘಾಟನೆಗೆ ಕರೆದಿದ್ದು, ಅವರು ಕೂಡ ಎರಡು ಬಾರಿ ಬರುತ್ತೇನೆ ಎಂದು ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಕೊಡುವ ಯೋಜನೆ ಬಗ್ಗೆ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ಶಿಕ್ಷಣ ಪದ್ದತಿ ಜಾರಿ, SC, ST, OBC ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬ್ಯಾಂಕ್ ಸಾಲ ಸೌಲಭ್ಯದ ಬಗ್ಗೆ ಚರ್ಚೆ ಮಾಡಿದೆವು.
ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಫಲಿತಾಂಶದ ಬಗ್ಗೆ ವಿವರ ನೀಡಿದೆ. ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಚರ್ಚಿಸಿದ ಅವರು ಮನೆ ಮತ್ತು ನಿವೇಶನ ಇಲ್ಲದವರಿಗೆ ಎಲ್ಲಾ ಗ್ರಾಪಂ ಮಟ್ಟದಲ್ಲೂ ಮನೆ ಕೊಡಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಇನ್ನು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ರಾಜ್ಯದ ಬಿಟ್ ಕಾಯಿನ್ ಹಗರಣ ಕುರಿತು ಸ್ಪಷ್ಟೀಕರಣ ನೀಡಲೆಂದೇ ಸಿಎಂ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿತ್ತು. ಇನ್ನು ಮೋದಿ ಜೊತೆ ಈ ವಿಚಾರ ಕುರಿತು ಚರ್ಚೆಗೆ ಉತ್ತರಿಸಿದ ಅವರು, ಬಿಟ್ ಕಾಯಿನ್ ಹಗರಣದ ಕುರಿತು ಅವರೇಕೆ ನನ್ನಿಂದ ಮಾಹಿತಿ ಕೇಳುತ್ತಾರೆ.
ನಾನೇ ಖುದ್ದು ಬಿಟ್ ಕಾಯನ್ ಬಗ್ಗೆ ಚರ್ಚಿಸಲು ಪ್ರಯತ್ನಿಸಿದೆ. ಆದರೆ, ಪ್ರಧಾನಿಗಳು ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರೆ. ನಮ್ಮಿಬ್ಬರ ಭೇಟಿ ವೇಳೆ ಬಿಟ್ ಕಾಯನ್ ಹಗರಣದ ಬಗ್ಗೆ ಯಾವುದೇ ಚರ್ಚೆ ನಡೆಸಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ನಿನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಸಿಎಂ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು.
ಆದರೆ, ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಆಡಳಿತ ಮತ್ತು ಪ್ರತಿ ಪಕ್ಷಗಳ ಆರೋಪ- ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿರುವ ಹಿನ್ನೆಲೆ ಈ ಸಂಬಂಧ ಕೇಂದ್ರ ಗೃಹ ಸಚಿವರಿಗೆ ಸ್ಪಷ್ಟೀಕರಣ ನೀಡಲು ಇಂದು ಸಂಜೆ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎನ್ನಲಾಗುತ್ತಿದೆ.