ಬೆಂಗಳೂರು: ವಿದೇಶದಲ್ಲಿ ನೆಲೆಸಿರುವ ಕರ್ನಾಟಕದವರು ರಾಜ್ಯಕ್ಕೆ ಬರಲು ಬಯಸಿದರೆ ಅವರನ್ನು ಕರೆತರಲು ಬೇಕಾದ ವ್ಯವಸ್ಥೆ ಮಾಡುವ ಸಲುವಾಗಿ ರಾಜ್ಯಸರ್ಕಾರ ನೋಡಲ್ ಅಧಿಕಾರಿಗಳನ್ನು ನೇಮಕಮಾಡಿದೆ.
ಹಲವು ಭಾರತೀಯರು ವಿದೇಶಗಳಲ್ಲಿ ವ್ಯಾಸಂಗ ಇಲ್ಲವೆ ಕೆಲಸವನ್ನು ಮಾಡುತ್ತಿದ್ದು, ಈಗ ಕೋವಿಡ್-19 ಮಹಾಮಾರಿಯಿಂದ ತಮ್ಮ ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ಆತಂಕದಲ್ಲಿದ್ದಾರೆ. ಅಲ್ಲದೆ ಭಾರತಕ್ಕೆ ಮರಳಲು ಯಾವುದೇ ಪ್ಯಾಸೆಂಜರ್ ವಿಮಾನ ಸಹ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಅಂತಹವರಿಗೆ ಸಹಾಯಹಸ್ತ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ವಿದೇಶದಲ್ಲಿ ಸಿಲುಕಿರುವವರ ಸಮಗ್ರ ಮಾಹಿತಿಯನ್ನು ಆಯಾ ದೇಶದ ರಾಯಭಾರಿಗಳನ್ನು ಸಂಪರ್ಕಿಸಿ ಪದೆದುಕೊಳ್ಳಲಾಗುತ್ತಿದೆ.
ವಿದೇಶಲ್ಲಿ ನೆಲಸಿರುವ ಭರತೀಯ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ಕರ್ನಾಟಕಕ್ಕೆ ಮರಳಲು ಅನುಕೂಲವಾಗುವಂತೆ ವಿಕೋಪ ನಿರ್ವಹಣಾ ಕಾಯ್ದೆ-2005ರನ್ವಯ ರಾಜ್ಯ ಸರ್ಕಾರ ನೋಡಲ್ ಅಧಿಕಾರಿಗಳಾಗಿ 1)ಉಮೇಶ್ ಕುಮಾರ್ , ಐ.ಪಿ.ಎಸ್ 2) ಸಿ.ಎನ್.ಮೀನಾ ನಾಗರಾಜ್, ಐ.ಎ.ಎಸ್ ಇವರನ್ನು ಕೇಂದ್ರ, ರಾಜ್ಯ ಸರ್ಕಾರಗಳ ಸಮನ್ವಯದಲ್ಲಿ ಕೆಲಸ ನಿರ್ವಹಿಸಲು ನೇಮಿಸಿದೆ.
ಈ ಸಂಬಂಧ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳಿಗೆ ಎಲ್ಲಾ ಜಿಲ್ಲಾಡಳಿತಗಳು ಹಾಗೂ ಸಂಬಂಧಿಸಿದ ಇತರ ಇಲಾಖೆಗಳು ಸಹಕಾರ ನೀಡುವಂತೆ ಸೂಚಿಸಲಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
Olleya kelasa