NEWSಲೇಖನಗಳು

ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಬಿಎಸ್‌ವೈ ನಿರ್ಧರಿಸಿದ್ದಾರಾ? ಪುಷ್ಟಿ ನೀಡುವಂತಿದೆ ಇಂದಿನ ರಾಜಕೀಯ ಬೆಳವಣಿಗೆ

ವಿಜಯಪಥ ಸಮಗ್ರ ಸುದ್ದಿ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದುರೀತಿ ಸ್ವಪಕ್ಷದವರೆ ಹಣಿಯುತ್ತಿದ್ದರುವುದಕ್ಕೆ ಮನನೊಂದಿರುವ ಬಿಎಸ್‌ವೈ ಅವರು ಮತ್ತೊಮ್ಮೆ ಹೊಸ ಪಕ್ಷ ಒಂದನ್ನು ಕಟ್ಟುವ ಆಲೋಚನೆಯಲ್ಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಪ್ರಸ್ತುತ ಯಡಿಯೂರಪ್ಪನವರಿಗೆ ಈ ಹಿಂದೆ ಬಿಜೆಪಿಯ ಕೆಲವರು ನಡೆದುಕೊಂಡಂತೆ ಇಂದು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಷಡ್ಯಂತ್ರ ಪಕ್ಷದೊಳಗೆ ನಡೆಯುತ್ತಿದೆ ಎಂಬುವುದು ಈಗಾಗಲೇ ಗುಟ್ಟಾಗೇನು ಉಳಿದಿಲ್ಲ. ಪ್ರಮುಖವಾಗಿ ವಯಸ್ಸಾಗಿರುವುದನ್ನೇ ಪ್ರಬಲ ಅಸ್ತ್ರವಾಗಿ ಉಪಯೋಗಿಸುತ್ತಿರುವ ವಿರೋಧಿಗಳಿಗೆ ಸೂಕ್ತ ಸಮಯದಲ್ಲಿ ಪಂಚ್‌ ಕೊಡಲು ಬಿಎಸ್‌ವೈ ನಿರ್ಧೀಸಿದ್ದಾರೆ ಎನ್ನಲಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿರು ಬಿಎಸ್‌ವೈ ಅವರು, ಈ ಹಿಂದೆ ಹೊಸ ಪ್ರಾದೇಶಿಕ ಪಕ್ಷ ‘ಕರ್ನಾಟಕ ಜನತಾ ಪಕ್ಷ ’(ಕೆಜೆಪಿ) 2012ರಲ್ಲಿ ಸ್ಥಾಪನೆಯಾದಂತೆ ಮುಂದಿನ ದಿನಗಳಲ್ಲಿ ಒಂದು ಹೊಸ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ತರುವ ಮುನ್ಸೂಚನೆ ಇದೆ ಎಂದು ಬಿಎಸ್‌ವೈ ಆಪ್ತ ಮೂಲಗಳು ತಿಳಿಸಿವೆ.

ಹಲವು  ಸ್ವಾಮೀಜಿಗಳ ಭೇಟಿ ಚರ್ಚೆ
ಅದಕ್ಕೆ ಮತ್ತಷ್ಟು ಪುಷ್ಟಿನೀಡುವಂತೆ ಕಳೆದ ಮೂರು ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆಯಿಂದ ತುಂಬ ಬೇಜಾರಿನಲ್ಲಿರುವ ಮುಖ್ಯಮಂತ್ರಿಗಳು ಬಿಜೆಪಿಯಿಂದ ಹೊರ ಬರುವ ಎಲ್ಲಾ ಸಿದ್ಧತೆಗಳಲ್ಲಿ ತೊಡಗಿರುವ ಬಗ್ಗೆ ಒಂದು ಸಣ್ಣ ಸುಳಿವನ್ನು ನೀಡಿದ್ದಾರೆ. ಅದರಂತೆ ಈಗಾಗಲೇ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷದ ಅವಶ್ಯವಿದ್ದು ಅದನ್ನು ನಾವು ಕಟ್ಟಬೇಕು ಎಂದು ಬಿ.ವೈ.ವಿಜಯೇಂದ್ರ ಹಲವು ಸ್ವಾಮೀಜಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಕಳೆದ ಮೂರುದಿನಗಳಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಸಮ್ಮುಖದಲ್ಲಿ ನಡೆದ ಘಟನಾವಳಿಗಳು ಈಗ ದೆಹಲಿಯ ವರಿಷ್ಠರ ಅಂಗಳ ತಲುಪಿದ್ದು, ಅಲ್ಲಿ ಯಾವರೀತಿ ಬೆಳವಣಿಗೆ ನಡೆಯುವುದು ಎಂಬ ಕುತೂಹಲ ಇಮ್ಮಡಿಯಾಗಿದೆ. ಆದರೂ ಈ ಎಲ್ಲ ಬೆಳವಣಿಗಳಿಂದ ಬೇಸತ್ತಿರುವ ಬಿಎಸ್‌ವೈ ಅವರು ಬಿಜೆಪಿಯಿಂದ ಹೊರ ಬರುವ ಮನಸ್ಥಿತಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ದೆಹಲಿಯಿಂದ ಸಿಎಂ ಪಟ್ಟದಿಂದ ಕೆಳಗಿಳಿಯುವಂತೆ ಬಿಎಸ್‌ವೈಗೆ ಯಾವಾಗ ಬೇಕಾದರೂ ಕರೆ ಬರಬಹುದು, ಬರದೆಯೂ ಇರಬಹುದು ಎಂದು ಹೇಳಲಾಗುತ್ತಿದೆ. ಈ ನಡುವೆ ಭಿನ್ನರ ಒಂದು ತಂಡ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು, ಯಡಿಯೂರಪ್ಪ ನಾಯಕತ್ವದ ಬಗ್ಗೆ ಪಕ್ಷದಲ್ಲಿ ಅಪಸ್ವರ ಎದ್ದಿದೆ. ಹೀಗಾಗಿ ಈ ಎಲ್ಲದಕ್ಕೂ ಇತಿಶ್ರೀ ಹಾಡಬೇಕು ಎಂದು ಬಿಎಸ್‌ವೈ ಸ್ವತಃ ನಿರ್ಧರಿಸಿದಂತೆ ಕಾಣುತ್ತಿದೆ.

ಈ ಹಿಂದೆ ಊಹಾಪೋಹಗಳಿಗೆ ತೆರೆ ಎಳೆಯುವಂತೆ ಬಿ.ಎಸ್.ಯಡಿಯೂರಪ್ಪ ಅವರು 2012 ಅಕ್ಟೋಬರ್‌ 24ರ ವಿಜಯದಶಮಿ ಶುಭದಿನದಂದು ಹೊಸ ಪಕ್ಷ ರಚನೆ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅಂದು ‘ಕರ್ನಾಟಕ ಜನತಾ ಪಕ್ಷ ’(ಕೆಜೆಪಿ)ವನ್ನು ಪುನಶ್ಚೇತನಗೊಳಿಸಿದರು.

ಕೆಜೆಪಿ 2011ರಲ್ಲೇ ನೋಂದಣಿಗೊಂಡಿದ್ದ ಹೊಸ ಪ್ರಾದೇಶಿಕ ಪಕ್ಷವಾಗಿ, ರಾಜ್ಯದ ಮಟ್ಟಿಗೆ ಮೊದಲ ಬಾರಿಗೆ ಪಕ್ಷದ ಹೆಸರು ಕೇಳಿ ಬಂದಿತ್ತು. ಇದು ಯಡಿಯೂರಪ್ಪ ಅಭಿಮಾನಿಯೂ ಆಗಿದ್ದ ಪದ್ಮನಾಭ ಪ್ರಸನ್ನಕುಮಾರ್ ಎಂಬ ವಕೀಲರು ನೋಂದಣಿ ಮಾಡಿಸಿದ್ದರು.

ಆದರೆ, ಈಗ ಕೆಜೆಪಿಯನ್ನೂ ಬಿಟ್ಟು ಸ್ವತಃ ಒಂದು ಹೊಸ ಪ್ರಾದೇಶಿಕ ಪಕ್ಷ ಕಟ್ಟವಲ್ಲಿ ಬಿಎಸ್‌ವೈ ಆಲೋಚನೆಯಲ್ಲಿದ್ದು, ಅವರು ಅಂದುಕೊಂಡಂತೆ ಎಲ್ಲವೂ ನಡೆದರೆ ರಾಜ್ಯದಲ್ಲಿ 2023ರಕ್ಕೆ ಜೆಡಿಎಸ್‌ನಂತೆ ಮತ್ತೊಂದು ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಚುನಾವಣೆ ಕಣಕ್ಕಿಳಿಯಲಿದೆ ಎನ್ನಲಾಗುತ್ತಿದೆ.

ಜಿಎಸ್‌ಟಿ ನೀಡುವಲ್ಲಿ ತಾರತಮ್ಯ
ಬಿಜೆಪಿಯಲ್ಲಿ ಮುಖ್ಯಮಂತ್ರಿಯಾದಾಗಿನಿಂದ ಇಲ್ಲಿಯವರೆಗೂ ಒಂದು ರೀತಿ ಕೈ ಕಟ್ಟಿಹಾಕಿ ಅಧಿಕಾರ ನಡೆಸುವಂತೆ ಮಾಡಿರುವ ಹೈ ಕಮಾಂಡ್‌ ಧೋರಣೆಯನ್ನು ಧಿಕ್ಕರಿಸುವ ರೀತಿ ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ. ರಾಜ್ಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಕ್ಕೂ ಸರಿಯಾಗಿ ಹಣ ಬಿಡುಗಡೆ ಮಾಡುತ್ತಿಲ್ಲ. ಜಿಎಸ್‌ಟಿಯ ನಮ್ಮ ರಾಜ್ಯದ ಹಣ ಕೊಡುವಲ್ಲಿ ಮೀನಮೆಷ, ಕೊರೊನಾ ಸಂಕಷ್ಟದ ಸಮಯದಲ್ಲಿ ಆಕ್ಸಿಜನ್‌ ಪಡೆಯಲು ಹೈ ಕೋರ್ಟ್‌ ತಾಕೀತು ಮಾಡಿತ್ತು. ರಾಜ್ಯಕ್ಕೆ ಬೇಕಾದ ಪ್ರತಿಯೊಂದನ್ನು ಪಡೆಲು  ಸಲಾಮ್‌ ಹೊಡೆಯುವಂತೆ ಮಾಡಿರುವುದರಿಂದ ನೊಂದುಕೊಂಡಿರುವ ಬಿಎಸ್‌ವೈ ಈಗಾಗಲೇ ದೂರ ಸರಿಯುವ ಮನಸ್ಥಿತಿಗೆ ಮತ್ತೊಮ್ಮೆ ಬಂದಿರುವಂತೆ ಕಾಣುತ್ತಿದೆ.

ಇನ್ನು ರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಮತ್ತು ಹಿಂದಿವಾಲಗಳಿಂದ ಯಾವುದೇ ಪ್ರಯೋಜನವಿಲ್ಲ. ಅವರು ಹೇಳಿದಂತೆ ನಾವು ಏಕೆ ಕೇಳಬೇಕು ಎಂಬ ಆಲೋಚನೆಯಲ್ಲಿ ತೊಡಗಿರುವ ಬಿಎಸ್‌ವೈ ಅವರು ಹಲವು ತಿಂಗಳಿಂದಲೂ ಮತ್ತೊಮ್ಮೆ ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ, ಈಗ ಕಟ್ಟಲು ಹೊರಟಿರುವ ಪಕ್ಷದ ಹೆಸರನ್ನು ಇನ್ನೂ ಸೂಚಿಸಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಚಿಹ್ನೆ ಮತ್ತು ಹೆಸರನ್ನು ಒಟ್ಟಿಗೆ ಬಹಿರಂಗ ಪಡಿಸುವುದಾಗಿ ಬಲ್ಲ ಮೂಲಗಳು ತಿಳಿಸಿವೆ.

ಇನ್ನು ಬಿಎಸ್‌ವೈ ಅವರು ಕಟ್ಟಲು ಹೊರಟಿರುವ ಹೊಸ ಪ್ರಾದೇಶಿಕ ಪಕ್ಷಕ್ಕೆ ರಾಷ್ಟ್ರೀಯ ಪಕ್ಷಗಳ ಹಲವು ಘಟಾನುಘಟಿ ನಾಯಕರು ಬರುವ ನಿರೀಕ್ಷೆ ಇದೆ ಎಂದು ಬಿಎಸ್‌ವೈ ಆಪ್ತರೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ರಾಜ್ಯದಲ್ಲಿ ನಿಲ್ಲಲು ನೆಲೆ ಇಲ್ಲದಂತ್ತಾಗುವುದು ಬಹುತೇಕ ಖಚಿತವಾದಂತೆ ಕಾಣುತ್ತಿದೆ.

ಫಲಕೊಡಲ್ಲ ಸಾಮೂಹಿಕ ನಾಯಕತ್ವದಡಿ ಚುನಾವಣೆ
ಸಾಮೂಹಿಕ ನಾಯಕತ್ವದಡಿ ರಾಜ್ಯದಲ್ಲಿ ಚುನಾವಣೆ ಎದುರಿಸಬೇಕು ಎಂದು ಬಿಜೆಪಿ ಹೈ ಕಮಾಂಡ್ಎಂ‌ ಹೇಳುತ್ತಿದೆ. ಆದರೆ ಸಾಮೂಹಿಕ ನಾಯಕತ್ವ ಬಂದರೆ ಪಕ್ಷ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗೆಲ್ಲುವುದಕ್ಕೆ ಸಾಧ್ಯವಿಲ್ಲ. ಕಾರಣ ಯಾವೊಬ್ಬ ನಾಯಕನೂ ಹೊಣೆ ಹೊರುವುದಿಲ್ಲ. ಹೀಗಾಗಿ ಪಕ್ಷದಲ್ಲಿ ಏಕ ನಾಯಕತ್ವದಡಿ ಚುನಾವಣೆ ಎದುರಿಸುವುದು ಒಳಿತಾಗಿರುವುದು ನಮ್ಮ ಇತಿಹಾಸದಲ್ಲಿ ಈಗಲೂ ಕಾಣಬಹುದಾಗಿದೆ.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?