NEWSನಮ್ಮಜಿಲ್ಲೆಶಿಕ್ಷಣ-

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಅಟಲ್ ಟಿಂಕರಿಂಗ್ : ಮಧು ಜಿ.ಮಾದೇಗೌಡ

ವಿಜಯಪಥ ಸಮಗ್ರ ಸುದ್ದಿ

ಭಾರತೀನಗರ: ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿ ಬೌದ್ಧಿಕ ಸಾಮರ್ಥ್ಯ ವೃದ್ಧಿಸಲು ಅಟಲ್ ಟಿಂಕರಿಂಗ್ ಲ್ಯಾಬೋರೇಟರಿಯನ್ನು ಸ್ಥಾಪಿಸಲಾಗಿದೆ ಎಂದು ಭಾರತಿ ಟ್ರಸ್ಟ್‌ನ ಅಧ್ಯಕ್ಷ ಮಧು ಜಿ.ಮಾದೇಗೌಡ ಹೇಳಿದರು.

ಭಾರತಿ ಪ್ರೌಢಶಾಲೆಯಲ್ಲಿ ದೆಹಲಿಯ ನೀತಿ ಆಯೋಗದ ಸಹಯೋಗದಲ್ಲಿ ಆಯೋಜಿಸಿದ್ದ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಯೋಗಾಲಯವನ್ನು ಕೇಂದ್ರ ಸರಕಾರ ಅನುದಾನದ ಜತೆಗೆ ಸಂಸ್ಥೆಯ ವತಿಯಿಂದಲೂ ಹಣ ಬಳಿಸಿ ಉತ್ತಮವಾಗಿ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಭಾರತಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ನಂಜೇಗೌಡ ಮಾತನಾಡಿ, ವಿದೇಶಿ ವಿನಿಮಯದ ಅವಲಂಬನೆಯನ್ನು ತಡೆಗಟ್ಟುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಶಸ್ಸಿಯಾಗಿದ್ದಾರೆ ಎಂದು ಬಣ್ಣಿಸಿದರು.

ಇಂದಿನವರೆಗೆ ಬಹಿತೇಕ ಎಲೆಕ್ಟ್ರಾನಿಕ್ ವಸ್ತಗಳನ್ನು ಚೈನಾ ದೇಶವನ್ನು ಅವಲಂಬಿಸಲಾಗಿತ್ತು. ಆದರೆ ಪ್ರಸ್ತುತ  ಸ್ವದೇಶಿ ನಿರ್ಮಿತ ತಂತ್ರಜ್ಞಾನ ಪರಿಕರಗಳಿಗೆ ಹೊತ್ತು ನೀಡುವ ಮೂಲಕ ಸ್ವಾವಲಂಬನೆಗೆ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಮೋದಿಯವರ ನಡೆ ಶ್ಲಾಘನೀಯ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಸಿ.ಕೆ.ಮಹೇಂದ್ರ ಮಾತನಾಡಿ,  ಕಾವೇರಿ ಚಳವಳಿಯ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವುದರ ಜತೆಗೆ ಜಿಲ್ಲೆಯ ಗಟ್ಟಿತನದ ದಿಗ್ಗಜ ನಾಯಕ ಜಿ.ಮಾದೇಗೌಡ ಎಂದು ಸ್ಮರಿಸಿದರು.

ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣವಂತರಾಗಬೇಕೆಂಬ ಸದುದ್ದೇಶದಿಂದ ಕೆಂದ್ರ ಸರ್ಕಾರ ಹಲವು ತಂತ್ರಜ್ಞಾನಗಳ  ಬಳಕೆಗೆ ವಿಶೇಷ ಅನುದಾನ ನೀಡುತ್ತಿದ್ದು, ಇದರ ಸದುಪಯೋಗ ಪಡೆದು ಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಾಮಾನ್ಯವಾಗಿ ಹಳ್ಳಿ ಮಕ್ಕಳಲ್ಲಿ ಬಹಳಷ್ಟು ಪ್ರತಿಭೆಗಳಿದ್ದು, ಅವರಲ್ಲಿರುವ ಹಿಂಜರಿಕೆ ಮನೋಭಾವದಿಂದ ತಮ್ಮ ಪ್ರತಿಭೆ ಅನಾವರಣ ಮಾಡಲಾಗದೆ ಎಲೆಮರೆ ಕಾಯಿಯಂತಾಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳು ಮುಜುಗರವನ್ನು ಬಿಟ್ಟು ಧೈರ್ಯದಿಂದ ತಮ್ಮಲ್ಲಿರು ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ದೇಶದ ಮೇರು ಸಾಧಕರ ಸಾಲಿನಲ್ಲಿ ನೀವು ಒಬ್ಬರಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ರಾಜೇಂದ್ರ ರಾಜೇ ಅರಸ್ ವಹಿಸಿದ್ದರು. ಈ ವೇಳೆ  ಪತ್ರಕರ್ತ ರಂಗಸ್ವಾಮಿ, ಹೆಲ್ತ್ ಸೈನ್ಸ್ ನ ನಿರ್ದೇಶಕ ಡಾ.ತಮೀಜ್ ಮಣಿ, ಜಿ.ಮಾದೇಗೌಡ, ತಾಂತ್ರಿಕ ಮಹಾವಿದ್ಯಾಲದ ಪ್ರಾಂಶುಪಾಲ ಡಾ.ಆರ್.ವಿ.ಪ್ರವೀಣಗೌಡ,  ಅಂಗ ಸಂಸ್ಥೆಯ ಮುಖ್ಯಸ್ಥರಾದ ಡಾ.ಶಿವಸ್ವಾಮಿ, ಸಿ.ವಿ.ಮಲ್ಲಿಕಾರ್ಜುನ, ಜಿ.ಕೃಷ್ಣ, ಶ್ವೇತಾ, ಪ್ರತಿಮಾ ಇದ್ದರು.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?