ವಿಜಯಪಥ ಸಮಗ್ರ ಸುದ್ದಿ
ಬನ್ನೂರು: ಮನೆಮನೆ ಕಸ ಸಂಗ್ರಹಣೆ ವಾಹನಗಳಿಗೆ ಬನ್ನೂರು ಪುರಸಭಾ ಅಧ್ಯಕ್ಷರು ಹಾಗೂ ಶಾಸಕರು ಚಾಲನೆ ನೀಡಿದರು.
ಕಳೆದ ಒಂದೂವರೆ ವರ್ಷದ ಹಿಂದೆಯೇ 5 ಹೊಸ ವಾಹನಗಳನ್ನು ಖರೀದಿಸಿ ತಂದಿದ್ದರೂ ಹಲವಾರು ಕಾರಣಗಳಿಂದ ಈ ವಾಹನಗಳನ್ನು ಉಪಯೋಗಿಸಿಕೊಳ್ಳಲು ಆಗದ ಕಾರಣ ಅವು ತುಕ್ಕುಹಿಡಿಯುತ್ತ ನಿಂತಿದ್ದವು.
ಆ ಎಲ್ಲ ಸಮಸ್ಯೆಯನ್ನು ನಿವಾರಿಸಿದ ಪುರಸಭೆ ಅಧ್ಯಕ್ಷೆ ಭಾಗ್ಯಶ್ರಿಕೃಷ್ಣ ಶಾಸಕ ಅಶ್ವಿನ್ ಕುಮಾರ್ ಅವರ ನೇತೃತ್ವದಲ್ಲಿ ಬುಧವಾರ ಕಸದ ವಾಹನಗಳಿಗೆ ಚಾಲನೆನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರು ಸ್ವಚ್ಛಭಾರತ್ ಹಾಗೂ 14ನೇ ಹಣಕಾಸು ಆಯೋಗದ 26ಲಕ್ಷ ರೂ.ಗಳ ಅನುದಾನದಿಂದ ಒಂದೂವರೆ ವರ್ಷದ ಹಿಂದೆಯೇ ಖರೀದಿಸಿದ್ಧ ಈ ವಾಹನಗಳು ಅಂದಿನಿಂದಲೂ ಪುರಸಭೆ ಆವರಣದಲ್ಲೇ ಬಳಕೆಗೆ ಬಾರದೆ ನಿಂತ್ತಿದ್ದವು. ಈಗ ಅವುಗಳ ಸದುಪಯೋಗಕ್ಕೆ ಮುಕ್ತಗೊಳಿಸಲಾಗಿದೆ.
ಹೀಗಾಗಿ ಬನ್ನೂರಿನಲ್ಲಿ ಕಸದ ಸಮಸ್ಯೆ ಪರಿಹರಿಸಲು ಈ ವಾಹನಗಳು ಸಹಕಾರಿಯಾಗಲಿವೆ. ಇನ್ನು ಪುರಸಭೆ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ. ಕಸ ಸಂಗ್ರಹ ವಾಹನಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಇನ್ನು ಈ ವಾಹನಗಳ ಮನೆ ಬಳಿ ಬಂದಾಗ ಕಸ ಹಾಕುವಂತೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಭಾಗ್ಯಶ್ರೀ ಕೃಷ್ಣ ತಿಳಿಸಿದರು.
ಪುರಸಭೆ ಮುಖ್ಯಧಿಕಾರಿ ಸ್ವಾಮಿ, ಉಪಧ್ಯಾಕ್ಷೆ ಶೋಭಾ, ಸದಸ್ಯರಾದ ಮಹೇಶ್, ಅನಂತಮೂರ್ತಿ, ಆನಂದ್, ಶೃತಿ, ಕೃಷ್ಣೆಗೌಡ, ಶಾಂತ ರಾಜು, ಸೌಮ್ಯರಾಣಿ, ಫೀರ್ ಖಾನ್, ನಂಜುಂಡಸ್ವಾಮಿ, ಶ್ರೀನಿವಾಸ್, ನಾಗರತ್ನ, ದಿವ್ಯ, ಫಿರ್ದೋಶ್, ಲೋಕಾಂಭಿಕಾ, ಪುಷ್ಪಾವತಿ, ಮೂರ್ತಿ, ಶಿವಣ್ಣ, ಚಲುವರಾಜು, ವಿಜಯಕುಮಾರ್, ಸುರೇಶ್ ಹಾಗೂ ಅಧಿಕಾರಿಗಳು ಇದ್ದರು.