ಬೆಂಗಳೂರು: ಐಸಿಸ್ ಪ್ರಮುಖ ಉಗ್ರ ಅಬ್ದುಲ್ ಮತೀನ್ ತಲೆಮರೆಸಿಕೊಂಡಿದ್ದು ಆತನ ಸುಳಿವು ನೀಡಿದವರಿಗೆ 3 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ ಘೋಷಿಸಿದೆ.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಐಸಿಸ್ ಪ್ರೇರಿತ ಉಗ್ರರನ್ನು ಬಂಧಿಸಲಾಗಿತ್ತು. ಪ್ರಸ್ತುತ ತಲೆಮರೆಸಿ ಕೊಂಡಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಪ್ರದೇಶದ ಫಿಶ್ ಮಾರ್ಕೆಟ್ ರಸ್ತೆ ನಿವಾಸಿಯಾಗಿರುವ ಅಬ್ಧುಲ್ ಮತೀನ್ ತಮಿಳುನಾಡಿನಲ್ಲಿ ಹಿಂದು ಮುಖಂಡನ ಹತ್ಯೆಯಲ್ಲಿ ಭಾಗಿಯಾಗಿದ್ದ. ಈ ಹತ್ಯೆಗೆ ಬೆಂಗಳೂರಿನ ಸದ್ದುಗುಂಟೆಪಾಳ್ಯದ ಪಿ.ಜಿಯಲ್ಲಿ ಕುಳಿತು ಸಂಚು ರೂಪಿಸಲಾಗಿತ್ತು ಎಂದು ತಿಳಿದುಬಂದಿತ್ತು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಹೀಗಾಗಿ ನಿಖರ ಮಾಹಿತಿಯ ಮೇಲೆ ಪಿಜಿ ಮೇಲೆ ದಾಳಿ ನೆಡೆಸಿದ್ದ ಎನ್ಐಎ ತನಿಖಾಧಿಕಾರಿಗಳ ತಂಡ. ಪಿಜಿ ಮುಖ್ಯಸ್ಥ ಮೆಹಬೂಬ್ ಪಾಷಾ ಸೇರಿದಂತೆ ದೇಶದ ವಿವಿಧೆಡೆ 12 ಜನ ಉಗ್ರರನ್ನ ಬಂಧಿಸಿತ್ತು. ಆದರೆ, ಮೆಹಬೂಬ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಅಬ್ಧುಲ್ ಮತೀನ್ ಪರಾರಿಯಾಗಿದ್ದ. ಹೀಗಾಗಿ ಈತನ ಕುರಿತು ಸುಳಿವು ನೀಡುವರಿಗೆ ರಾಷ್ಟ್ರೀಯ ತನಿಖಾ ದಳ 3 ಲಕ್ಷ ರೂಪಾಯಿ ಬಹುಮಾನ ಘೋಷಣೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail