ಬೆಂಗಳೂರು: ಆದಷ್ಟು ಬೇಗ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಬೌರಿಂಗ್ ಆಸ್ಪತ್ರೆ ಸ್ಟ್ಯಾಪ್ ನರ್ಸ್‌ಗಳಿಗೆ ಭರವಸೆ ನೀಡಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೌರಿಂಗ್ ಆಸ್ಪತ್ರೆ ಸ್ಟ್ಯಾಪ್ ನರ್ಸ್‌ಗಳು ಇಂದು ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿ, ನಾವು ಕೊರೊನಾ ವಾರಿಯರ್ಸ್‌ಆಗಿ ಸೇವೆಸಲ್ಲಿಸುತ್ತಿದ್ದರೂ ನಮಗೆ ಯಾವುದೇ ಕೋವಿಡ್ ಸೌಲಭ್ಯವಿಲ್ಲ. ನಮಗೆ ಬೇರೆ ಯಾವುದೇ ರೀತಿಯ ಭದ್ರತೆಯನ್ನು ನೀಡಿಲ್ಲ. ಜತೆಗೆ ಮೂಲ ವೇತನವೂ ಕಡಿಮೆ ಇದೆ. ಹೀಗಾಗಿ ಬೇಸಿಕ್ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದ್ದರು.
ಅದಕ್ಕೆ ಸ್ಪಂದಿಸಿರುವ ಸಚಿವರು, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಈ ತಕ್ಷಣವೇ ತಾವು ಕಾರ್ಯಪ್ರವೃತ್ತರಾಗಿ. ಕೊರೊನಾ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ನಿಮ್ಮ ಬೇಡಿಕೆಗಳನ್ನು ಈಡೇರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಶ್ರೂಷಾ ಅಧಿಕಾರಿಗಳಿಗೆ ಇರುವ ಸೌಲಭ್ಯಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಾ ಅಧಿಕಾರಿಗಳಿಗೆ ಇಲ್ಲ ಈ ಬಗ್ಗೆ ದಯವಿಟ್ಟು ಗಮನ ಹರಿಸಿ ನಮ್ಮ ಸಮಸ್ಯೆಗಳನ್ನು ಬೇಗನೆ ಬಗೆಹರಿಸಿ. ನಿಮಗೆ ನಾವು ಋಣಿಯಾಗಿದ್ದೇವೆ ಎಂದು ಪ್ರತಿಭಟನಾ ನಿರತರು ಮನವಿ ಮಾಡಿದ್ದಾರೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ಕಾಯಂ ಶುಶ್ರೂಷಕರ ಸಂಘವು NPS,KGID, RISK ALLOWANCE, JYOTI SANJEEVINI , 50% BASIC HIKE ಮತ್ತು ಕೇಂದ್ರ ವೇತನ ಜಾರಿಗೆಗೊಳಸಲು ಈ ಹಿಂದೆ ಸುಮಾರು ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು ಈ ವರೆಗೂ ಯಾವುದೇ ಬೇಡಿಕೆಗಳನ್ನು ಈಡೇರಿಲ್ಲ ಎಂದು ಪ್ರತಿಭನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದಷ್ಟು ಬೇಗ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಈ ತಕ್ಷಣವೇ ತಾವು ಕಾರ್ಯಪ್ರವೃತ್ತರಾಗಿ. ಕೊರೊನಾ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ನಿಮ್ಮ ಬೇಡಿಕೆಗಳನ್ನು ಈಡೇರಿಸಲಿದೆ ಎಂದು ಭರವಸೆ ನೀಡುತ್ತಿದ್ದೇನೆ
— Dr Sudhakar K (@mla_sudhakar) August 1, 2020