ಕೊಪ್ಪ: ಈ ಜನ್ಮದಲ್ಲಿ ಬೆಂಗಳೂರಿನಲ್ಲಿ ಹುಟ್ಟಿರುವ ಯುವತಿಯೊಬ್ಬಳು ಕಳೆದ ನಾಲ್ಕು ತರೆಮಾರಿನಲ್ಲಿ ಚಿಕ್ಕಮಗಳೂರಿನ ಕೊಪ್ಪ ತಾಲೂಕು ಮೇಗೂರಿನಲ್ಲಿ ಹುಟ್ಟಿದಾಗಿ ಹೇಳಿದ್ದಾಳೆ.
ಅದಷ್ಟೇ ಅಲ್ಲ ಆ ಊರಿನ ಪರಿಚಯವೇ ಈ ಜನ್ಮದಲ್ಲಿ ಇರದ ಈಕೆ ತನ್ನ ತಂದೆ ತಾಯಿಯರನ್ನು ಮೇಗೂರಿ ನನ್ನನ್ನು ಕರೆದುಕೊಂಡು ಹೋಗಿ ಎಂದು ವಿಚಿತ್ರವಾಗಿ ಬೇಡಿಕೆ ಇಟ್ಟಿದ್ದಾಳೆ. ಅದನ್ನು ಕೇಳಿದ ಪಾಲಕರಿಗೆ ಆಶ್ಚರ್ಯದ ಜತೆಗೆ ಆತಂಕವು ಉಂಟಾಯಿತು. ಆದರೂ ಆ ಊರಿಗೆ ಹೋಗುವುದು ಬೇಡ ಎಂದು ಪಾಲಕರು ಹೇಳಿದರು. ಅದಕ್ಕೆ ಒಪ್ಪದ ಆಕೆ ಮೇಗೂರಿ ಹೋಗಲೇ ಬೇಕು ಎಂದು ಹಠಹಿಡಿದಳು.
ಆಕೆಯ ಹಠಕ್ಕೆ ಮಣಿದ ಪಾಲಕರು ಭಾನುವಾರ (ಆಗಸ್ಟ್ 30) ಆಕೆಯನ್ನು ಈ ಗ್ರಾಮಕ್ಕೆ ಕರೆತಂದಿದ್ದರು. ವಿಶೇಷವೆಂದರೆ ಈ ಯುವತಿ ಮೇಗೂರಿಗೆ ಹೊರಗಿನವಳಾಗಿದ್ದರೂ ಅಲ್ಲಿನ ಎಲ್ಲಾ ಬೀದಿ, ದೇವಾಲಯಗಳ ಪರಿಚಯವಿದೆ. ಮೇಗೂರು ತನ್ನ ಹಿಂದಿನ ಜನ್ಮದಲ್ಲಿನ ಊರು ಎಂದೂ ಹೇಳುತ್ತಿದ್ದಾಳೆ.
ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರಿಗೆ ಭಾನುವಾರ ಬೆಂಗಳೂರಿನ ಹೆಬ್ಬಾಳ ಸಮೀಪದ ನಾಗವಾರದಿಂದ ಬಂದ ಈಕೆ ಕಳೆದ ಕೆಲವು ತಿಂಗಳುಗಳಿಂದ, ವಿಚಿತ್ರವಾಗಿ ವರ್ತಿಸುತ್ತಿದ್ದಳು. ಅಲ್ಲದೆ ಊಟ ತಿಂಡಿಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲ ಎಂದು ಹೆತ್ತರವರು ಹೇಳಿದರು.
ಆಕೆ ನಾಲ್ಕು ತಲೆಮಾರುಗಳ ಹಿಂದೆ ಮೇಗೂರಿನಲ್ಲಿದ್ದ ಅರ್ಚಕರ ಮಗಳಾಗಿ ಜನಿಸಿದ್ದೆ, ಆ ಸ್ಥಳವನ್ನೊಮ್ಮೆ ನೋಡಬೇಕು ಎಂದು ಬಯಸುವುದಾಗಿ ಹೇಳಿದ್ದಾಳೆ.
ಹೆತ್ತವರು ಒತ್ತಡಕ್ಕೆ ಮಣಿದು ಮೇಗೂರು ಅಮೃತೇಶ್ವರ ದೇವಾಲಯಕ್ಕೆ ಮಗಳನ್ನು ಕರೆತಂದಿದ್ದಾರೆ. ಆ ಸ್ಥಳ ತಲುಪುತ್ತಿದ್ದ ಹಾಗೆಯೇ ಆಕೆಯಲ್ಲಿ ಬದಲಾವಣೆ ಕಾಣಿಸಿತು. ಅಲ್ಲದೆ ಯುವತಿ ಸಹಜ ಸ್ಥಿತಿಗೆ ಮರಳಿದ್ದಾಳೆ.
ಆದರೆ ಯುವತಿ ಹೇಳಿದಂತೆ ದೇವಾಲಯದ ಅರ್ಚಕರಾರೂ ನಮ್ಮಲ್ಲಿದ್ದದ್ದು ನಮಗೆ ಅರಿವಿಲ್ಲ ಎಂದು ಗ್ರಾಮದ ಹಿರಿಯ ಚನ್ನಕೇಶವ ಗೌಡ ಎನ್ನುವವರು ಹೇಳಿದ್ದಾರೆ. ಆದರೆ ಈಕೆಗೆ ಈ ಗ್ರಾಮದ ಪ್ರತಿ ಬೀದಿಯ ಪರಿಚಯ ಇರಲು ಹೇಗೆ ಸಾಧ್ಯ ಇದನ್ನು ನೋಡಿದರೆ ಈಕೆ ಮರು ಜನ್ಮ ಪಡೆದಿರುವುದು ನಿಜ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.