NEWSಆರೋಗ್ಯನಮ್ಮಜಿಲ್ಲೆ

ಬಿಬಿಎಂಪಿ: ನಾಯಿ ಕಚ್ಚಿದರೆ ಸ್ಥಳಕ್ಕೆ ಬಂದು ಚುಚ್ಚುಮದ್ದು

ಮೇಯರ್‌ ಗೌತಮ್‌ಕುಮಾರ್‌ l ರೇಬಿಸ್ ಚುಚ್ಚುಮದ್ದು ವಾಹನಕ್ಕೆ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಪಾಲಿಕೆ ಹಾಗೂ ಪ್ರಾಣಿದಯಾ ಸಂಘ-ಸಂಸ್ಥೆಗಳ (NGOs) ಸಹಯೋಗದಲ್ಲಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲು ಪಾಲಿಕೆಯ ಮೂರು ವಾಹನ ಹಾಗೂ ಸಹಾಯವಾಣಿ ಸಂಖ್ಯೆ 6364893322 ಇಂದಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಮೇಯರ್‌ ಗೌತಮ್‌ಕುಮಾರ್‌ ತಿಳಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶುಪಾಲನಾ ವಿಭಾಗದಿಂದ ಶನಿವಾರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ರೇಬಿಸ್ ಚುಚ್ಚುಮದ್ದು ನೀಡುವ 3 ವಾಹನ  ಹಾಗೂ ರೇಬಿಸ್ ಸಹಾಯವಾಣಿಗೆ  ಆಯುಕ್ತ  ಮಂಜುನಾಥ್ ಪ್ರಸಾದ್ ಜತೆ ಚಾಲನೆ ನೀಡಿ ಮಾತನಾಡಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ  ಆಪ್‌ ಡೌನ್ಲೋಡ್‌  ಮಾಡಿಕೊಳ್ಳಲು  ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ನಗರದಲ್ಲಿ ನಾಯಿಗಳು ಕಚ್ಚಿದರೆ ಕೂಡಲೇ ಸ್ಥಳಕ್ಕೆ ತೆರಳಿ ನಾಯಿ ಹಿಡಿದು ಚುಚ್ಚುಮದ್ದು ನೀಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ರೇಬಿಸ್ ಮುಕ್ತಗೊಳಿಸಲು ಪಾಲಿಕೆ ವತಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಬಿಬಿಎಂಪಿಯ ಜತೆ ಸ್ವಯಂಸೇವಕರಾಗಿ CARR, WVS, ಪಶುಪಾಲನಾ ಕಾಲೇಜು ಬೆಂಗಳೂರು ಸಹಾಯವಾಣಿ ಕೇಂದ್ರ(Help Desk) ಪ್ರಾರಂಭಿಸಿದ್ದು, ನಾಯಿಗಳು ಯಾರಿಗಾದರೂ ಕಚ್ಚುವುದು, ಹುಚ್ಚುನಾಯಿ ಎಂದು ತಿಳಿದಾಗ ಅಥವಾ ಕಚ್ಚುವ ನಾಯಿ ಎಂದು ತಿಳಿದಾಗ ಸಾರ್ವಜನಿಕರು ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿದರೆ ಕೂಡಲೇ ಪಶುಪಾಲನಾ ತಂಡವು ಸ್ಥಳಕ್ಕೆ ತೆರಳಿ ನಾಯಿಯನ್ನು ಹಿಡಿದು ಸ್ಥಳೀಯ ಎಬಿಸಿ ಕೇಂದ್ರಗಳಲ್ಲಿ 10 ದಿನಗಳ ಕಾಲ ಐಸೋಲೇಷನ್‌ನಲ್ಲಿ ಇರಿಸಲಾಗುತ್ತದೆ. ರೇಬಿಸ್ ಎಂದು ಖಚಿತ ಪಟ್ಟರೆ ಅದಕ್ಕೆ ಚಿಕಿತ್ಸೆ ನೀಡುವುದು ಹಾಗೂ ಘಟನೆ ನಡೆದಿದ್ದ ಸ್ಥಳದ ಸುತ್ತ-ಮುತ್ತಲಿನ ನಾಯಿಗಳಿಗೆ ವ್ಯಾಕ್ಸಿನೇಷನ್ ನೀಡಲಾಗುವುದು ಎಂದು ತಿಳಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ  ಆಪ್‌ ಡೌನ್ಲೋಡ್‌  ಮಾಡಿಕೊಳ್ಳಲು  ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಆಯುಕ್ತ ಮಂಜುನಾಥ್‌ ಪ್ರಸಾದ್‌  ಮಾತನಾಡಿ, ಬಿಬಿಎಂಪಿ ಹಾಗೂ ಕೆಲ ಸಂಘ-ಸಂಸ್ಥೆಗಳು ಸ್ವಯಂಸೇವಕರಾಗಿ ಮುಂದೆ ಬಂದು  ರೇಬಿಸ್ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ರೇಬಿಸ್ ಚಿಕಿತ್ಸೆ ನೀಡುವ ಬಗ್ಗೆ ಸಮರ್ಪಕ ಮಾಹಿತಿ ಪಡೆಯಲು WVS ಸಂಸ್ಥೆಯು ತತ್ರಾಂಶವನ್ನು ಸಿದ್ದಪಡಿಸಿದ್ದು, ಉಚಿತವಾಗಿ ಬಳಕೆ ಮಾಡಿಕೊಳ್ಳಲು ಪಾಲಿಕೆ ನೀಡಿದೆ. ಈ ತಂತ್ರಾಂಶದಿಂದ, ನಾಯಿ ಹಿಡಿದ ಸ್ಥಳ, ನಾಯಿಯ ಭಾವಚಿತ್ರ ಹಾಗೂ ಜಿಯೋ ಲೊಕೇಶನ್ ಲಭ್ಯವಾಗಲಿದೆ. ಇದರಿಂದ ನಗರದಲ್ಲಿ ಎಷ್ಟು ನಾಯಿಗಳಿಗೆ ಚುಚ್ಚುಮದ್ದು ನೀಡಿದ್ದೇವೆ ಎಂಬ ಸಮರ್ಪಕ ಮಾಹಿತಿ ಹಾಗೂ ಮುಂದಿನ ದಿನಗಳಲ್ಲಿ ರೇಬಿಸ್, ವ್ಯಾಕ್ಸಿನೇಷನ್ ಮಾಡಲು ಇದು ಸಹಕಾರಿಯಾಗಲಿದೆ. ಇಂದು ಮೂರು ವಾಹನಗಳಿಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತೀ ವಲಯಕ್ಕೊಂದು ವಾಹಾನ ಹಾಗೂ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ  ಆಪ್‌ ಡೌನ್ಲೋಡ್‌  ಮಾಡಿಕೊಳ್ಳಲು  ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಉಪಮಹಾಪೌರ ರಾಮಮೋಹನ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ  ಅಬ್ದುಲ್ ವಾಜೀದ್, ವಿಶೇಷ ಆಯುಕ್ತರು (ಘನತ್ಯಾಜ್ಯ/ಆರೋಗ್ಯ)  ಡಿ.ರಂದೀಪ್, ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಶಶಿಕುಮಾರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?