ನ್ಯೂಡೆಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಸಿರಾಟದ ಸಮಸ್ಯೆಯಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಅವರನ್ನು ಏಮ್ಸ್ ನ ಕಾರ್ಡಿಯೋ ನ್ಯೂರೋ ಟವರ್ ನಲ್ಲಿ ದಾಖಲಾಗಿದ್ದಾರೆ. 40 ದಿನಗಳ ಅಂತರದಲ್ಲಿ ಮೂರನೇ ಬಾರಿಗೆ ಶಾ ಆಸ್ಪತ್ರೆಗೆ ದಾಖಲಾದಂತ್ತಾಗಿದೆ.
ಕೋವಿಡ್ ನಿಂದ ಗುಣಮುಖರಾದ ನಂತರ ಶಾ ಅವರು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಹೀಗಾಗಿ ಅವರನ್ನು ಏಮ್ಸ್ ಗೆ ದಾಖಲಿಸಲಾಗಿದೆ. ಕಳೆದ ಆಗಸ್ಟ್ ಎರಡರಂದು ಕೊರೊನಾ ದೃಢಪಟ್ಟಿದ್ದರಿಂದ ಅವರು ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಆಗಸ್ಟ್ 14ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಬಳಿಕ ಹೋಮ್ ಐಸೋಲೇಶನ್ ನಲ್ಲಿದ್ದರು.
ನಂತರ ಆಗಸ್ಟ್ 18ರಂದು ಆಯಾಸ ಮತ್ತು ಮೈ ಕೈ ನೋವಿನ ಕಾರಣ ಮತ್ತೆ ಏಮ್ಸ್ ಗೆ ಶಾ ದಾಖಲಾಗಿದ್ದರು. ಆಗಸ್ಟ್ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈಗ ಮತ್ತೆ ದಾಖಲಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.